Home latest Costly Car: 4 ಕೋಟಿ ರೂ ಲ್ಯಾಂಬೋರ್ಗಿನಿ ಕಾರಿನ ಮೇಲೆ ಹತ್ತಿ ಕುಳಿತ ಶ್ರೀರಾಮ, ಇದು...

Costly Car: 4 ಕೋಟಿ ರೂ ಲ್ಯಾಂಬೋರ್ಗಿನಿ ಕಾರಿನ ಮೇಲೆ ಹತ್ತಿ ಕುಳಿತ ಶ್ರೀರಾಮ, ಇದು ವಿಶ್ವದಲ್ಲೇ ಮೊದಲು ಅಂತೆ !

Costly car
Image source: YouTube

Hindu neighbor gifts plot of land

Hindu neighbour gifts land to Muslim journalist

Costly Car: ದುಬಾರಿ ಕಾರುಗಳು (Costly Car) ಎಲ್ಲರ ಗಮನ ಸೆಳೆಯುತ್ತವೆ. ಇನ್ನು ಭಾರತದಲ್ಲಿ ತಮ್ಮ ತಮ್ಮ,ವಾಹನಗಳಲ್ಲಿ ಸ್ಟಿಕ್ಕರ್, ಹೆಸರು ಸೇರಿದಂತೆ ಹಲವು ಚಿತ್ರಗಳನ್ನು ಬಿಂಬಿಸಿ ತಮ್ಮ ಅಭಿಮಾನ ಗೌರವ ತೋರ್ಪಡಿಸುತ್ತಾರೆ. ದುಬಾರಿ ಕಾರುಗಳ ಪಟ್ಟಿಯಲ್ಲಿ ಒಂದಾದ ಬರೋಬ್ಬರಿ 4 ಕೋಟಿ ರೂಪಾಯಿ ಲ್ಯಾಂಬೋರ್ಗಿನಿ ಹುರಕನ್ ಕಾರು ಕೂಡ ಒಂದಾಗಿದೆ. ಆದರೆ ಭಾರತದಲ್ಲಿ ಹಲವು ದುಬಾರಿ ಕಾರುಗಳ ಮೇಲೆ ಒಂದಕ್ಷರವೂ ಮುದ್ರಿಸಿಲ್ಲ.

ಹೌದು, ದುಬಾರಿ ಕಾರುಗಳಲ್ಲಿ ವಿಶೇಷ ರೀತಿಯ ಬರಹ, ಚಿತ್ರಗಳನ್ನು ಕಾಣುವುದು ಕಡಿಮೆ. ಇದೀಗ ಬರೋಬ್ಬರಿ 4 ಕೋಟಿ ರೂಪಾಯಿ ದುಬಾರಿ ಮೌಲ್ಯದ ಲ್ಯಾಂಬೋರ್ಗಿನಿ ಕಾರಿನ ಮೇಲೆ ಜೈಶ್ರೀರಾಮ್ ಎಂದು ಇದೇ ಮೊದಲ ಬಾರಿಗೆ ಮುದ್ರಿಸಲಾಗಿದೆ.
ಅತೀ ದೊಡ್ಡ ಅಕ್ಷಗಳಲ್ಲಿ ಕಾರಿನ ಬಾನೆಟ್ ಮೇಲೆ ಜೈ ಶ್ರೀರಾಮ್ ಮುದ್ರಿಸಿ ಯೂಟ್ಯೂಬರ್ ಮೃದುಲ್ ಎಲ್ಲರ ಕಣ್ಣು ತನ್ನ ಕಾರಿನತ್ತ ಸುಳಿಯುವಂತೆ ಮಾಡಿದ್ದಾನೆ.

ಯೂಟ್ಯೂಬರ್ ಮೃದುಲ್ ಸಾಮಾಜಿಕ ಮಾಧ್ಯಮಗಳ ಮೂಲಕ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಇತ್ತೀಚೆಗ ಮೃದೂಲ್ ಹೊಚ್ಚ ಹೊಸ ಲ್ಯಾಂಬೋರ್ಗಿನಿ ಹುರಕನ್ ಕಾರು ಖರೀದಿಸಿದ್ದು, ಈ ಕಾರು ಭಾರತದಲ್ಲಿ ಶ್ರೀಮಂತ ಉದ್ಯಮಿಗಳು, ಸೆಲೆಬ್ರೆಟಿಗಳು ಸೇರಿದಂತೆ ಹಲವರ ಬಳಿ ಇದೆ. ಇದೀಗ ಮೃದೂಲ್ ಈ ಸಾಲಿಗೆ ಸೇರಿಕೊಂಡಿದ್ದಾರೆ.

ಕೆಂಪು ಬಣ್ಣದ ಲ್ಯಾಂಬೋರ್ಗಿನಿ ಹುರಕನ್ ಕಾರಿನ ಬಾನೆಟ್ ಮೇಲೆ ಬಿಳಿ ಬಣ್ಣದ ಅಕ್ಷರಗಳಲ್ಲಿ ಜೈಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ. ಕಾರು ಖರೀದಿಸಿದ ಯ್ಯೂಟೂಬರ್ ನಂಬರ್ ಪ್ಲೇಟ್‌ ಹಾಕಿಸುವ ಮೊದಲೇ ಸ್ಟಿಕ್ಕರಿಂಗ್ ಶಾಪ್‌ಗೆ ತೆರಳಿ ಅತೀ ದೊಡ್ಡ ಅಕ್ಷರಗಳಲ್ಲಿ ಜೈ ಶ್ರೀರಾಮ್ ಸ್ಟಿಕ್ಕರ್ ಅಂಟಿಸಿದ್ದಾರೆ. ಇದೀಗ ಈ ಕಾರು ಭಾರಿ ಸುದ್ದಿಯಲ್ಲಿದೆ. ಲ್ಯಾಂಬೋರ್ಗಿನಿ ಕಾರಿನ ಮೇಲೆ ದೊಡ್ಡ ಅಕ್ಷಗಳಲ್ಲಿ ಜೈ ಶ್ರೀರಾಮ್ ಬರೆದಿದ್ದು ಇದೇ ಮೊದಲು.

ಸದ್ಯ ಲ್ಯಾಂಬೋರ್ಗಿನಿ ಹುರಕನ್ ಕಾರು ಪೆಟ್ರೋಲ್ ಎಂಜಿನ್ ಹೊಂದಿದೆ. 10 ಸಿಲಿಂಡರ್, 5204 ಸಿಸಿ ಎಂಜಿನ್ ಹೊಂದಿದ್ದು, 630.28bhp ಪವರ್ ಹಾಗೂ 565Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಆಟೋಮ್ಯಾಟಿಕ್ ಕಾರು ಇದಾಗಿದೆ. ಇದರಲ್ಲೂ ಮೂರು ಡ್ರೈವಿಂಗ್ ಮೂಡ್‌ಗಳಿವೆ. ಇದು 2 ಸೀಟರ್ ಕಾರು. ಒಂದು ಲೀಟರ್ ಪೆಟ್ರೋಲ್‌ಗೆ 7.25 ಕಿ.ಮೀ ಮೈಲೇಜ್ ನೀಡಲಿದೆ.

ಮುಖ್ಯವಾಗಿ ಫೆರಾರಿ ಇಟಾಲಿಯನ್ ಸೂಪರ್ ಕಾರು ತಯಾರಕರು ಕಾರಿನ ಯಾವುದೇ ಮಾಡಿಫಿಕೇಶನ್ ಒಪ್ಪುವುದಿಲ್ಲ. ಕಾರು ಮಾರಾಟವಾದ ಬಳಿಕ ಮಾಲೀಕರು ಯಾವುದೇ ರೀತಿಯ ಮಾಡಿಫಿಕೇಶನ್ ಮಾಡಿದರೆ ಕಾರಿನ ವಾರೆಂಟಿ ನಷ್ಟವಾಗಲಿದೆ. ಆದರೆ ಲ್ಯಾಂಬೋರ್ಗಿನಿ ಕಾರಿನಲ್ಲಿ ಮಾಡಿಫಿಕೇಶನ್‌ಗೆ ಅವಕಾಶವಿದೆಯಂತೆ .

ಇನ್ನು ಭಾರತದ ಮೋಟಾರು ವಾಹನ ಕಾಯ್ದೆಯಡಿ ಕೂಡ ವಾಹನ ಮಾಡಿಫಿಕೇಶನ್ ನಿಯಮ ಉಲ್ಲಂಘನೆಯಾಗಿದೆ. ಆದರೆ ಸ್ಟಿಕ್ಕರ್ ಅಂಟಿಸುವುದು ಮಾಡಿಫಿಕೇಶನ್ ಅಡಿಯಲ್ಲಿ ಬರುವುದಿಲ್ಲ.

ಮುಖ್ಯವಾಗಿ ಸಿಕ್ಕರಿಂಗ್ ವೇಳೆ ವಾಹನದ ನಂಬರ್ ಪ್ಲೇಟ್, ಕಾರಿನ ಮುಂಭಾಗದ ಹಾಗೂ ಹಿಂಭಾಗದ ಗಾಜಿನ ಮೇಲೆ ಅಂಟಿಸುವಂತಿಲ್ಲ. ಯಾವುದೇ ಸ್ಟಿಕ್ಕರ್ ವಾಹನ ಚಾಲನೆ ವೇಳೆ ಅಡ್ಡಿಯಾಗಬಾರದು ಹಾಗೂ ಚಾಲಕನ ನೋಟಕ್ಕೆ ಅಡತೆಡೆಯಾಗಬಾರದು. ಇಲ್ಲಿ ಯೂಟ್ಯೂಬರ್ ಮೃದೂಲ್ ಕಾರಿನ ಬಾನೆಟ್ ಮೇಲೆ ಜೈಶ್ರೀರಾಮ್ ಸ್ಟಿಕ್ಕರ್ ಅಂಟಿಸಿದ್ದಾರೆ.

ಇದನ್ನೂ ಓದಿ: ‘ಮಂಡ್ಯದ ಉಪೇಂದ್ರ’ ಗೆ ಕೂಡಾ ಗಾದೆ ಏಟು, ಜ್ಯೂನಿಯರ್ ಉಪೇಂದ್ರನಿಗೆ ಸಂಕಷ್ಟ ಶಿಫ್ಟ್ !