Lakshmi Hebbalkar: ಉಡುಪಿ ‘ವಾಶ್ ರೂಂ ಪ್ರಕರಣ ಪ್ರಗತಿಯಲ್ಲಿದೆ’ ! ಸಿಐಡಿ ತನಿಖೆ ಬಗ್ಗೆ ಏನಂದ್ರು ಸಚಿವೆ ಹೆಬ್ಬಾಳ್ಕರ್ ?!

Political news minister Lakshmi hebbalkar says Udupi washroom video case CID probe progressing well

Lakshmi Hebbalkar: ರಾಷ್ಟ್ರಮಟ್ಟದಲ್ಲಿ ಭಾರಿ ವಿವಾದ ಎಬ್ಬಿಸಿರುವ ಉಡುಪಿಯ (Udupi Case) ಖಾಸಗಿ ಕಾಲೇಜಿನ (College ) ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಮಾತನಾಡಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಉಡುಪಿ ಕಾಲೇಜಿನ ವಾಶ್‌ರೂಂ ವಿಡಿಯೋ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಸಿಐಡಿ ತಂಡ ಈಗಾಗಲೇ ಕಾಲೇಜಿಗೆ ಭೇಟಿ ನೀಡಿ ಸಂಬಂಧಪಟ್ಟವರ ಹೇಳಿಕೆಯನ್ನು ಪಡೆದುಕೊಂಡಿದೆ. ತನಿಖೆ ಉತ್ತಮ ಪ್ರಗತಿಯಲ್ಲಿದೆ. ಮುಖ್ಯಮಂತ್ರಿ ಮತ್ತು ಗೃಹ ಇಲಾಖೆಯು ತನಿಖೆ ಮೇಲೆ ನಿಗಾ ವಹಿಸುತ್ತಿದೆ ಎಂದು ಹೇಳಿದರು.

ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಸಿಐಡಿ ತನಿಖೆ ಬಗ್ಗೆ ರಾಜಕೀಯ ಕಾರಣದಿಂದ ತಮ್ಮ ಅನುಮಾನಗಳನ್ನು ತಿಳಿಸಿರಬಹುದು. ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಮತ್ತು ಎತ್ತಿಹಿಡಿಯಲು ಸರ್ಕಾರ ಬದ್ಧವಾಗಿದೆ. ಘಟನೆಯ ತನಿಖೆ ನಿಷ್ಪಕ್ಷಪಾತವಾಗಿರುತ್ತದೆ ಎಂದು ಹೇಳಿದರು.

ಉಡುಪಿಯ (Udupi) ಪ್ರಸಿದ್ಧ ಖಾಸಗಿ ನೇತ್ರಜ್ಯೋತಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಮೊಬೈಲ್ ಇಟ್ಟು ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿ ಬಳಿಕ ವಾಟ್ಸಪ್ ಗ್ರೂಪ್ ಗಳಲ್ಲಿ ಹಂಚಿಕೊಂಡ ಪ್ರಕರಣದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿಭಟನೆಯ ಹಂತಕ್ಕೆ ತಲುಪಿತ್ತು.
ಸದ್ಯ ಈ ಪ್ರಕರಣ ತನಿಖೆಯಲ್ಲಿದೆ.

ಇದನ್ನೂ ಓದಿ: Garlic Onion Price Hike: ಕೆಂಪು ಸುಂದರಿ ಕಾಟ ಕೊಟ್ಟ ಬೆನ್ನಲ್ಲೇ ಈರುಳ್ಳಿ, ಬೆಳ್ಳುಳ್ಳಿ ಕಾಟ ಶುರು ; ಹಬ್ಬದ ಸಮ್ಮುಖದಲ್ಲಿ ಗೃಹಿಣಿಯರಿಗೆ ಮನೆ ಬಜೆಟ್ ತೂಗಿಸೋ ಟೆನ್ಶನ್ !!

Comments are closed.