BSNL Recharge Plan: BSNLನ ಈ ಜಬರ್ದಸ್ತ್ ಪ್ಲಾನ್ ಕಂಡು ಪ್ರತಿಸ್ಪರ್ಧಿಗಳಲ್ಲಿ ನಡುಕ ; 730 GB ನ ಈ ಪ್ಲಾನ್ ಕೊಳ್ಳಲು ಮುಗಿಬಿದ್ದ ಜನ !
BSNL recharge plan cheap and best recharge plan will give you to 265 days validity with daily 2GB data
BSNL Recharge Plan: ಟೆಲಿಕಾಮ್ ಕಂಪನಿಗಳಲ್ಲಿ (Telicom Company) ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್ ಒನ್ ಸಂಸ್ಥೆಯಾಗಿರುವ ರಿಲಯನ್ಸ್ ಜಿಯೋ (Reliance Jio) ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯುತ್ತಿರುವುದು ಗೊತ್ತಿರುವ ವಿಚಾರವೇ! ಈ ನಡುವೆ ಏರ್ಟೆಲ್ (Airtel)ಕೂಡ ಜಿಯೋ ಗೆ ಟಕ್ಕರ್ ನೀಡಲು ಮುಂದಾಗಿ ರೀಚಾರ್ಜ್ ಪ್ಲಾನ್ಗಳಲ್ಲಿ ಬದಲಾವಣೆ ಮಾಡಿದ್ದು, ಈ ನಡುವೆ ಬಿಎಸ್ಎನ್ಎಲ್ (BSNL Recharge Plan) ಕೂಡ ಹೊಸ ಪ್ಲಾನ್ ಪರಿಚಯಿಸಿ ಪೈಪೋಟಿ ನೀಡಲು ಅಣಿಯಾಗಿದೆ.
ಇದೀಗ BSNL ಅತ್ಯಂತ ಅಗ್ಗದ ಮೊಬೈಲ್ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ. BSNLನ ಈ ಜಬರ್ದಸ್ತ್ ಪ್ಲಾನ್ ಕಂಡು ಪ್ರತಿಸ್ಪರ್ಧಿಗಳಲ್ಲಿ ನಡುಕ ಹುಟ್ಟಿಸಿದೆ ಎಂದರೆ ತಪ್ಪಾಗಲಾರದು. ಹೌದು, ಇದೀಗ 730 GB ನ ಈ ಪ್ಲಾನ್ ಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಹಾಗಾದ್ರೆ ಯಾವುದೀ ರೀಚಾರ್ಜ್ ಪ್ಲ್ಯಾನ್? ಸಂಪೂರ್ಣ ಮಾಹಿತಿ ಇಲ್ಲಿದೆ.
1515 ರೂ. ರೀಚಾರ್ಜ್ ಪ್ಲ್ಯಾನ್ :
BSNL ತನ್ನ ಗ್ರಾಹಕರಿಗೆ ರೂ. 1515 ರ ವಿಶೇಷ ರೀಚಾರ್ಜ್ ಯೋಜನೆಯನ್ನು ಪರಿಚಯಿಸುತ್ತಿದೆ. ಈ ಯೋಜನೆಯಲ್ಲಿ, ನೀವು 365 ದಿನಗಳು ಅಂದರೆ ಪೂರ್ಣ 1 ವರ್ಷದ ಮಾನ್ಯತೆಯನ್ನು ಪಡೆಯುತ್ತೀರಿ. ಅನಿಯಮಿತ ಕರೆ ಸೌಲಭ್ಯವೂ ಇದೆ. ಅಲ್ಲದೆ, ಪ್ರತಿದಿನ 2GB ಹೈ ಸ್ಪೀಡ್ ಡೇಟಾವನ್ನು ಪಡೆಯುತ್ತೀರಿ. 2GB ಡೇಟಾ ಖಾಲಿಯಾದ ನಂತರವೂ ನಿಮ್ಮ ಇಂಟರ್ನೆಟ್ ಸಂಪರ್ಕವು ಕಡಿತವಾಗುವುದಿಲ್ಲ. ಆದರೆ ವೇಗವು 40Kbps ಗೆ ಕಡಿಮೆಯಾಗುತ್ತದೆ. ಈ ಯೋಜನೆಯಲ್ಲಿ ನೀವು ಸಂಪೂರ್ಣ 730GB ಡೇಟಾವನ್ನು ಪಡೆಯುತ್ತೀರಿ.
BSNL ನ ಈ ಯೋಜನೆಯು ದೀರ್ಘಕಾಲದವರೆಗೆ ಸಿಮ್ ಅನ್ನು ಸಕ್ರಿಯವಾಗಿ ಇರಿಸಿಕೊಳ್ಳುವ ಬಳಕೆದಾರರಿಗೆ ತುಂಬಾ ಉಪಯುಕ್ತವಾಗಿದೆ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ನೀವು ಕಂಪನಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.
ಇದನ್ನೂ ಓದಿ: ಬೆಳ್ತಂಗಡಿ: ಮರದಿಂದ ಬಿದ್ದ ಯುವಕನ ಜೀವನ್ಮರಣದ ಹೋರಾಟ ; ಜೀವ ಉಳಿಸಿ ಕೊಡಲು ಸೋಷಿಯಲ್ ಮೀಡಿಯಾ ಮೊರೆ ಹೋದ ಕುಟುಂಬ !
Comments are closed.