Bank Holiday: ಬ್ಯಾಂಕ್ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್! ಇನ್ನು ಮುಂದೆ ಶನಿವಾರ ಕೂಡ ಇರಲಿದೆಯಂತೆ ರಜಾ!
Bank news report says banks in India may soon have all Saturday holiday
Bank Holiday: ಬ್ಯಾಂಕ್ ಗ್ರಾಹಕರೇ (Bank Customer)ಗಮನಿಸಿ, ನಿಮಗೊಂದು ಬಹು ಮುಖ್ಯ ಮಾಹಿತಿ ಇಲ್ಲಿದೆ. ಇಂದಿನ ಡಿಜಿಟಲ್ ಯಗದಲ್ಲಿ ಮನೆಯಲ್ಲೇ ಕುಳಿತು ಕ್ಷಣಮಾತ್ರದಲ್ಲಿಯೇ ಎಲ್ಲ ವ್ಯವಹಾರ ವಹಿವಾಟು ನಡೆಸುವ ತಂತ್ರಜ್ಞಾನ(Technology) ಕ್ಷೇತ್ರದಲ್ಲಿ ಬೆಳವಣಿಗೆ ಆಗಿದ್ದು, ಸುಲಭವಾಗಿ ಬ್ಯಾಂಕಿಂಗ್ ವಹಿವಾಟು ನಡೆಸಲು ಬ್ಯಾಂಕ್ಗಳು ಅನುವು ಮಾಡಿಕೊಟ್ಟಿದೆ. ಇದೀಗ ಬ್ಯಾಂಕ್ ರಜೆಗೆ ಸಂಬಂಧ ಪಟ್ಟಂತೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.
ಈಗ ತಿಂಗಳಿಗೆ ಎರಡು ಶನಿವಾರ ರಜೆಯಿರುವುದು ಗೊತ್ತಿರುವ ಸಂಗತಿ. ಇನ್ನು ಮುಂದೆ ಆರು ದಿನಗಳ ಕಾಲ ಕಾರ್ಯನಿರ್ವಹಿಸುವ ಎಲ್ಲಾ ಭಾರತೀಯ ಬ್ಯಾಂಕ್‌ಗಳಿಗೆ ಶೀಘ್ರದಲ್ಲೇ ಎಲ್ಲಾ ವಾರಾಂತ್ಯಗಳಲ್ಲಿ ರಜೆ ನೀಡಲಾಗುವ(Bank Holiday)ಕುರಿತು ಸುದ್ದಿಗಳು ಹರಿದಾಡುತ್ತಿವೆ.
ಬ್ಯುಸಿನೆಸ್ ಲೈನ್ ವರದಿಯ ಅನುಸಾರ, ಜುಲೈ 28 ರಂದು ಬ್ಯಾಂಕರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಎಲ್ಲಾ ಶನಿವಾರಗಳನ್ನು( Saturday)ಬ್ಯಾಂಕ್ ರಜೆ ಎಂದು ಘೋಷಿಸಲು ಮನವಿ ಸಲ್ಲಿಸಿದ್ದು, ಇದಕ್ಕೆ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳ ಬೇಡಿಕೆಗೆ ಭಾರತೀಯ ಬ್ಯಾಂಕ್‌ಗಳ ನಿರ್ವಹಣೆಯ ಪ್ರಾತಿನಿಧಿಕ ಸಂಸ್ಥೆಯು ಅರ್ಜಿಯನ್ನು ತನ್ನ ಅನುಮೋದನೆಗಾಗಿ ಹಣಕಾಸು ಸಚಿವಾಲಯಕ್ಕೆ ರವಾನೆ ಮಾಡಿದೆ ಎನ್ನಲಾಗಿದೆ.
ಒಂದು ವೇಳೆ, ಕೇಂದ್ರ ಹಣಕಾಸು ಸಚಿವಾಲಯವೂ ಈ ಪ್ರಸ್ತಾಪಕ್ಕೆ ಗ್ರೀನ್ ಸಿಗ್ನಲ್ ನೀಡಿದರೆ, ಬ್ಯಾಂಕ್‌ಗಳು ವಾರದಲ್ಲಿ ಐದು ದಿನ ಮಾತ್ರ ಕಾರ್ಯನಿರ್ವಹಿಸಲಿದ್ದು, ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಬ್ಯಾಂಕ್ ಉದ್ಯೋಗಿಗಳು(Bank Employees)ಕೆಲಸ ಮಾಡಬೇಕಾದ ಆವಶ್ಯಕತೆಯೇ ಇಲ್ಲ. ಇದರ ಜೊತೆಗೆ ಶಾಖೆಗಳಲ್ಲಿ ದೈನಂದಿನ ಕೆಲಸದ ಸಮಯವನ್ನು 45 ನಿಮಿಷಗಳವರೆಗೆ ವಿಸ್ತರಿಸುವ ಸಾಧ್ಯತೆಯ ಕುರಿತು ಬ್ಯುಸಿನೆಸ್ ಲೈನ್ ವರದಿ ನೀಡಿದೆ.
ಬ್ಯಾಂಕ್‌ಗಳಿಗೆ ವಾರದ ಐದು ದಿನಗಳ ಕೆಲಸದ ಬಗ್ಗೆ ಈ ಹಿಂದೆಯು ಕೂಡ ಚರ್ಚೆ ನಡೆದರೂ ಕೂಡ ಇಲ್ಲಿಯವರೆಗೆ ಯಾವುದೇ ರೀತಿಯ ಗಮನಾರ್ಹ ಬದಲಾವಣೆ ಆಗಿಲ್ಲ. ಈ ಬಾರಿ ಬ್ಯಾಂಕಿಂಗ್ ಒಕ್ಕೂಟಗಳ ಬೇಡಿಕೆಗೆ ಹಣಕಾಸು ಸಚಿವಾಲಯ ಗ್ರೀನ್ ಸಿಗ್ನಲ್ ನೀಡುವುದೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.
ಎಐಬಿಎ ಪತ್ರಿಕಾ ಟಿಪ್ಪಣಿ ಸಿದ್ದಪಡಿಸಿದ್ದು, ಇದರ ಅನುಸಾರ, ‘ಒಟ್ಟು ಕೆಲಸದ ಸಮಯವನ್ನು ದಿನಕ್ಕೆ 40 ನಿಮಿಷಗಳವರೆಗೆ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಮತ್ತು ನಗದುರಹಿತ ವಹಿವಾಟುಗಳಿಗೆ ಸಂಜೆ 4.30 ರಿಂದ ಹೆಚ್ಚಿಸಬಹುದು’ ಎಂದು ಹೇಳಿಕೊಂಡಿದೆ. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಈ ವರ್ಷದ ಆರಂಭದಲ್ಲಿ ಮಾರ್ಚ್‌ನಲ್ಲಿ ಸುತ್ತೋಲೆ ಹೊರಡಿಸಿದ್ದು, ಇದರಲ್ಲಿ ಬ್ಯಾಂಕ್ ಉದ್ಯೋಗಿಗಳಿಗೆ ವಾರದಲ್ಲಿ ಐದು ದಿನ ಕೆಲಸ ಮಾಡಲು ಐಪಿಎ ಒಪ್ಪಿಗೆ ನೀಡಿರುವುದನ್ನು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಮದುವೆಗೂ ಮುಂಚೆ ದೇಹ ಹಂಚಿ ಬಿಡಿ: ನಟಿ ರಾಪಕಾ ಹೀಗನ್ನಲು ಇದೆ ಬಲವಾದ ವಾದ !
Comments are closed.