RDPR Karnataka Jobs: ಗ್ರಾಮೀಣಾಭಿವೃದ್ಧಿ & ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಉದ್ಯೋಗಾವಕಾಶ! ಅರ್ಜಿ ಸಲ್ಲಿಸಲು ಆ.14 ಕೊನೆಯ ದಿನ!

State government job rdpr Karnataka recruitment 2023 apply for business analyst post

RDPR Karnataka Jobs: ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ಇಲ್ಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಕರ್ನಾಟಕ (Rural Development and Panchayat Raj Department Karnataka ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ ಆರಂಭಿಸಿದೆ. ಆಸಕ್ತ ಅಭ್ಯರ್ಥಿಗಳು ಆಫ್​ಲೈನ್/ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ (RDPR Karnataka Jobs) ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಯ ಹೆಸರು : ಬ್ಯುಸಿನೆಸ್ ಅನಾಲಿಸ್ಟ್
ಹುದ್ದೆ ಸಂಖ್ಯೆ: 1

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 03/08/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಆಗಸ್ಟ್ 14, 2023

ವಿದ್ಯಾರ್ಹತೆ : ಬಿಇ/ಬಿ.ಟೆಕ್, ಎಂಸಿಎ, ಕಂಪ್ಯೂಟರ್​ ಸೈನ್ಸ್/ ಇನ್ಫರ್ಮೇಶನ್​ ಸೈನ್ಸ್​​ನಲ್ಲಿ ಎಂ.ಎಸ್ಸಿ, ಎಂಬಿಎ

ಕಾರ್ಯಾನುಭವ : ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.

ವಯೋಮಿತಿ : ಗರಿಷ್ಠ 45 ವರ್ಷ. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಮಾಸಿಕ ವೇತನ: ₹ 50,000
ಉದ್ಯೋಗ ಸ್ಥಳ: ಬೆಂಗಳೂರು

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ :
ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿ.

ವಿಳಾಸ:
ನಿರ್ದೇಶಕರು, ಇ-ಆಡಳಿತ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ನೇ ಮಹಡಿ, 3ನೇ ಗೇಟ್
ಎಂ.ಎಸ್ ಕಟ್ಟಡ
ಅಂಬೇಡ್ಕರ್ ವೀಧಿ
ಬೆಂಗಳೂರು-560001

ಇದನ್ನೂ ಓದಿ: Health Tips: ಸಾವಿನ ವಿರುದ್ಧ ದಿಕ್ಕಿನಲ್ಲಿ ನಡೆಯಿರಿ ; ದಿನಾ ಈ ‘ಮನೆಮದ್ದು’ ಸೇವಿಸಿ, ಹೃದಯಾಘಾತ ತಪ್ಪಿಸಿ !!!

Comments are closed.