GruhaJyoti Scheme: ಗೃಹಜ್ಯೋತಿ ಕುರಿತು ಬಿಗ್‌ ಅಪ್ಡೇಟ್‌! ಈ ದಿನಾಂಕದೊಳಗೆ ಹಿಂಬಾಕಿ ಪಾವತಿಸಿ, ಇಲ್ಲದಿದ್ದರೆ ಉಚಿತ ವಿದ್ಯುತ್ ಸಿಗಲ್ಲ !!!

Gruhajyoti scheme Congress guarantee zero bill customers should pay arears before September

GruhaJyoti Scheme: ಐದು ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೆಲವು ಗ್ಯಾರಂಟಿಗಳನ್ನು (Congress 5 Guarantee) ಜಾರಿಗೆ ತಂದಿದೆ. ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಯು ಈಗಾಗಲೇ ಜಾರಿಯಾಗಿದೆ. ಸದ್ಯ ಗೃಹಜ್ಯೋತಿ ಯೋಜನೆಯ (GruhaJyoti Scheme) ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ.

 

ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆಯಬೇಕೆಂದರೆ ಈ ಮಾಹಿತಿ ಗಮನಿಸಿ, ಈ ದಿನಾಂಕದೊಳಗೆ ಹಿಂದಿನ ಎಲ್ಲಾ ಬಾಕಿ ಬಿಲ್‌ಗಳನ್ನು ಪಾವತಿಸಿದಲ್ಲಿ ಮಾತ್ರ ನೀವು ಶೂನ್ಯ ಬಿಲ್‌ ಪಡೆಯಬಹುದು. ಬಾಕಿ ಬಿಲ್‌ ಪಾವತಿಸದ ಗ್ರಾಹಕರಿಗೆ ಗೃಹಜ್ಯೋತಿ ಯೋಜನೆಯ ಶೂನ್ಯ ಬಿಲ್‌ ಬರುವುದಿಲ್ಲ. ಸೆಪ್ಟೆಂಬರ್​ 30ರೊಳಗೆ ವಿದ್ಯುತ್​ ಬಾಕಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಈ ಅವಧಿಯಲ್ಲಿ ಬಾಕಿ ಬಿಲ್‌ ಪಾವತಿಸದಿದ್ದರೆ ಗೃಹಜ್ಯೋತಿ ಯೋಜನೆ ಅನ್ವಯ ಆಗುವುದಿಲ್ಲ ಎನ್ನಲಾಗಿದೆ.

 

ಗ್ರಾಹಕರು ವಿದ್ಯುತ್ ಬಿಲ್‌ನ ಹಿಂಬಾಕಿ ಉಳಿಸಿಕೊಂಡಿದ್ದರೂ ಅವರಿಗೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಸಿಗಲಿದೆ. ಆದರೆ, ಹಿಂಬಾಕಿಯನ್ನು ಸೆ.30 ರೊಳಗೆ ಪಾವತಿಸಬೇಕು. ನೀವು ಜುಲೈ 25 ರೊಳಗೆ ಯೋಜನೆಗೆ ನೋಂದಾಯಿಸಿಕೊಂಡಲ್ಲಿ, ಆಗಸ್ಟ್ ತಿಂಗಳ ಬಿಲ್‌ನಲ್ಲಿ ಯೋಜನೆಯ ಪ್ರಯೋಜನ ಸಿಗಲಿದೆ. ಜುಲೈ 25 ರಿಂದ ಆಗಸ್ಟ್ 25 ರೊಳಗೆ ನೋಂದಾಯಿಸಿಕೊಂಡಲ್ಲಿ, ಸೆಪ್ಟೆಂಬರ್ ತಿಂಗಳ ಬಿಲ್‌ನಲ್ಲಿ ಯೋಜನೆಯ ಪ್ರಯೋಜನ ಲಭ್ಯವಾಗಲಿದೆ. (ಬಿಲ್ಲಿಂಗ್ ಅವಧಿ ಪ್ರತಿ ತಿಂಗಳ 25 ನೇ ತಾರೀಖಿನಿಂದ ಮುಂದಿನ ತಿಂಗಳ 25 ತಾರೀಖಿನವರೆಗೆ ಅನ್ವಯ).

ಇದನ್ನೂ ಓದಿ: Yashwant Guruji Prediction: ಇವರೇ ವಿರೋಧ ಪಕ್ಷದ ನಾಯಕ! ಯಶ್ವಂತ ಗುರೂಜಿ ಸ್ಫೋಟಕ ಭವಿಷ್ಯ !!!

Comments are closed.