Agriculture : ಸಹಕಾರಿ ಕೃಷಿ ಯೋಜನೆ ಜಾರಿ! ಸಿಗಲಿದೆ 2 ಎಕರೆ ಜಮೀನು; ಯಾರಿಗೆ? ಇಲ್ಲಿದೆ ಸಂಪೂರ್ಣ ವಿವರ

Agriculture news Good news for rural area poor families Cooperative agriculture scheme implemented

Agriculture : ರಾಜ್ಯ ಸರ್ಕಾರ (state government) ಸಹಕಾರಿ ಕೃಷಿ (Agriculture) ಯೋಜನೆ ಜಾರಿಗೆ ಮುಂದಾಗಿದೆ. ಈ ಯೋಜನೆಯಿಂದ ಸಿಗಲಿದೆ 2 ಎಕರೆ ಜಮೀನು. ಯಾರಿಗೆ ಗೊತ್ತಾ ?! ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಗ್ರಾಮೀಣ ಬಡ ಕುಟುಂಬಗಳಿಗಾಗಿ ಜಾರಿಯಾಗಲಿದೆ‌, “ಸಹಕಾರ ಕೃಷಿ ಯೋಜನೆ” (cooperative agriculture scheme) . ಹೌದು, ನಗರ ಪ್ರದೇಶಗಳಿಗೆ ಜನರು ವಲಸೆ ಹೋಗುವುದನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ಸಹಕಾರ ಕೃಷಿ ವಿನೂತನ ಯೋಜನೆ ಜಾರಿಗೆ ಮುಂದಾಗಿದೆ.

ಬಡ ಕುಟುಂಬಗಳಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸಾಮಾನ್ಯ ಜನರು ಆರ್ಥಿಕವಾಗಿ ಉನ್ನತಿ ಹೊಂದಲು ಸರ್ಕಾರ ಸಹಕಾರ ನೀಡಿದೆ. ಇದೀಗ ಸರ್ಕಾರ ಸಹಕಾರ ಕೃಷಿ ಯೋಜನೆ ಜಾರಿಗೊಳಿಸಿ ಗ್ರಾಮೀಣ ಬಡ ಕುಟುಂಬಗಳ ಜೀವನಮಟ್ಟ ಸುಧಾರಿಸಲು ಕ್ರಮ ಕೈಗೊಳ್ಳುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರಿ ಭೂಮಿ ಗುರುತಿಸಿ ಜಮೀನು ಇಲ್ಲದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಕುಟುಂಬಗಳಿಗೆ ನೀಡಿ ಸಹಕಾರ ಕೃಷಿ ಯೋಜನೆ ಜಾರಿಗೊಳಿಸಲಾಗುವುದು‌. ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ SCSP/TSP ಅನುದಾನ ಇತರೆ ವರ್ಗದವರಿಗೆ ಸರ್ಕಾರದ ವಿವಿಧ ಯೋಜನೆಗಳ ಅನುದಾನ ಒದಗಿಸಿ ಯೋಜನೆ ಜಾರಿಗೊಳಿಸಲಾಗುತ್ತದೆ.

ಸರ್ಕಾರಿ ಭೂಮಿ ಅಥವಾ ಕನಿಷ್ಠ 50 ಎಕರೆ ಜಮೀನು ದೊರೆಯುವಲ್ಲಿ ಖರೀದಿ ಮಾಡಿ ಕುಟುಂಬಕ್ಕೆ ಎರಡು ಎಕರೆಯಂತೆ ನೀಡಿ ಪರಸ್ಪರ ಸಹಕಾರ ಕೃಷಿ ಕೈಗೊಳ್ಳಲು ಅವಕಾಶ ಕಲ್ಪಿಸುವ ಮೂಲಕ ಜೀವನಮಟ್ಟ ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.

ಇದನ್ನೂ ಓದಿ: Rice Prices Rise: ಗೋಧಿ, ಅಕ್ಕಿ ಬೆಲೆಯ ಕುರಿತು ಕೇಂದ್ರ ಸರಕಾರದಿಂದ ಮಹತ್ವದ ನಿರ್ಧಾರ! ಬೆಲೆ ಏರಿಕೆಯೋ? ಇಳಿಕೆಯೋ?

Comments are closed.