First Period: ಫಸ್ಟ್ ಪೀರಿಯಡ್ ನಲ್ಲಿ ಏನೇನಾಗ್ತದೆ, ತಿಳ್ಕೊಳ್ಳೋ ಕುತೂಹಲ ಹುಡುಗ – ಹುಡ್ಗೀ ಇಬ್ರಿಗೂ ಇರತ್ತೆ !

lifestyle first period signs self care tips for girls

First Period: ಪ್ರತಿ ಹೆಣ್ಣು (Women) ತನ್ನ ಜೀವಮಾನದಲ್ಲಿ ಅನುಭವಿಸುವ ಒಂದು ಸಹಜ ಪ್ರಕ್ರಿಯೆಯೇ ಮುಟ್ಟು (Periods) ಅಥವಾ ಋತುಚಕ್ರ. ಇದೊಂದು ಸ್ವಾಭಾವಿಕ, ಸಹಜವಾದ ಶಾರೀರಿಕ ಪ್ರಕ್ರಿಯೆಯಾಗಿದೆ. ಮುಟ್ಟು ಎಂದರೆ ನಿಜವಾಗಿಯೂ ಏನಾಗುತ್ತದೆ. ಫಸ್ಟ್ ಪೀರಿಯಡ್ ನಲ್ಲಿ ಏನೇನಾಗ್ತದೆ ಎಂದು ತಿಳ್ಕೊಳ್ಳೋ ಕುತೂಹಲ ಎಲ್ಲರಿಗೂ ಇರುತ್ತೆ. ಇಲ್ಲಿದೆ ನೋಡಿ ಮಾಹಿತಿ!!.

ಒಂದು ಹೆಣ್ಣಿಗೆ ಮುಟ್ಟಾಯಿತೆಂದರೆ ಆಗ ಅವಳ ಗರ್ಭಾಶಯದಿಂದ ಅವಳ ಯೋನಿಯ ಮೂಲಕ ರಕ್ತ ಬಿಡುಗಡೆಯಾಗುತ್ತದೆ. ಇದನ್ನೆ ಮುಟ್ಟು, ಋತುಚಕ್ರ ಅಥವಾ ಪಿರಿಯಡ್ಸ್ (First Period) ಎಂದು ಕರೆಯುತ್ತಾರೆ. ಇದು ಆ ಹೆಣ್ಣು ತನ್ನ ಪ್ರೌಢಾವಸ್ಥೆಯಿಂದ ಮುಂದಿನ ಹಂತಕ್ಕೆ ಹೋಗುತ್ತಿದ್ದಾಳೆ. ಹೊಸ ಜೀವನ ತನ್ನಲ್ಲಿ ರೂಪಗೊಳ್ಳುವಿಕೆಗೆ ಶಾರೀರಿಕವಾಗಿ ಆಕೆ ಸಿದ್ದಳಾಗಿದ್ದಾಳೆ ಎಂಬುದನ್ನು ಸಂಕೇತಿಸುತ್ತದೆ.

ಋತುಚಕ್ರವೆಂಬುದು ಪತ್ರಿಯೊಬ್ಬ ಹೆಣ್ಣಿನ ದೇಹದಲ್ಲಿ ನಡೆಯುತ್ತದೆ. ಮೊದಲ ಬಾರಿ ಮುಟ್ಟಾಗುವ (First Period) ಅವಧಿಯ ಸರಾಸರಿ ವಯಸ್ಸು 10 ಮತ್ತು 12 ವರ್ಷಗಳ (Years) ನಡುವೆ. ನಿಮ್ಮ ಬಾಡಿ ಮಾಸ್ ಇಂಡೆಕ್ಸ್ ಸರಾಸರಿಗಿಂತ ಹೆಚ್ಚಿದ್ದರೆ, ಅಥವಾ ನೀವು ಕಡಿಮೆ ತೂಕ ಹೊಂದಿದ್ದರೆ, ಒತ್ತಡಕ್ಕೆ ಒಳಗಾಗಿದ್ದರೆ ಅಥವಾ ಹಾರ್ಮೋನ್ ಅಸಮತೋಲನವನ್ನು (Hormonal Imbalance) ಹೊಂದಿದ್ದರೆ ಪಿರಿಯಡ್ಸ್ ಮೊದಲೇ ಪ್ರಾರಂಭವಾಗಬಹುದು. ಕೆಲವರು ಅತಿ ಸಣ್ಣ ವಯಸ್ಸಿಗೇ ಮುಟ್ಟಾಗುತ್ತಾರೆ.

ಮುಟ್ಟಾಗುವುದಕ್ಕಿಂತ ಮೊದಲೇ ಹೆಣ್ಣುಮಕ್ಕಳಿಗೆ ಆಕೆಯ ದೇಹ ಚಿಹ್ನೆಗಳನ್ನು ನೀಡುತ್ತವೆ. ಹುಡುಗಿಯೊಬ್ಬಳು ಪ್ರೌಢವಸ್ಥೆಗೆ ತಲುಪುವ ಪ್ರಕ್ರಿಯೆ ಎರಡು ವರ್ಷದವರೆಗೆ ಸಾಗುತ್ತದೆ. 8 ವರ್ಷದ ವಯಸ್ಸಿನಲ್ಲಿಯೇ ಕೆಲ ಮಕ್ಕಳು ಈ ಹಂತಕ್ಕೆ ಬರುತ್ತಾರೆ. ಈ ಅವಧಿಯಲ್ಲಿ ಸ್ತನಗಾತ್ರದಲ್ಲಿ ಬೆಳವಣಿಗೆಯಾಗುತ್ತದೆ. ಸಾಮಾನ್ಯವಾಗಿ 11-12ನೇ ವಯಸ್ಸಿನಲ್ಲಿ ಈ ಪ್ರಕ್ರಿಯೆ ಆರಂಭವಾಗುತ್ತದೆ. ಸ್ತನದ ಬೆಳವಣಿಗೆ ಪ್ರಾರಂಭವಾದ ಸ್ಪಲ್ಪ ಅವಧಿಯಲ್ಲಿಯೇ ಕಂಕಳು, ಕಾಲುಗಳು ಹಾಗೂ ಜನನಾಂಗ ಪ್ರದೇಶದಲ್ಲಿ ಕೂದಲು ಬೆಳೆಯುತ್ತದೆ. ಇದು ಕೂಡ ಮುಟ್ಟಿನ ಹತ್ತಿರದ ಸಂಕೇತ. ಋತು ಸ್ರಾವಕ್ಕೆ ಮುನ್ನ ಯೋನಿಯಲ್ಲಿ ಬಿಳಿ, ಹಳದಿ ಬಣ್ಣದ ನೀರಿನಂಶ ಬಿಡುಗಡೆಯಾಗುತ್ತದೆ. ಈ ಮೂಲಕ ದೇಹವು ಹೆಚ್ಚು ಈಸ್ಟ್ರೋಜೆನ್​ ಉತ್ಪಾದಿಸುತ್ತಿದೆ ಎಂಬ ಸಂಕೇತವನ್ನು ನೀಡುತ್ತದೆ. ಕೆಳ ಹೊಟ್ಟೆಯಲ್ಲಿ ನೋವು, ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು, ಹೊಟ್ಟೆ ಉಬ್ಬುವುದು, ದೇಹದ ಆಕಾರದಲ್ಲಿ ಬದಲಾವಣೆ, ಆಗಾಗ್ಗೆ ಬದಲಾಗುವ ಮನಸ್ಥಿತಿ ಲಕ್ಷಣಗಳು ಕಂಡು ಬರುತ್ತದೆ.

ಫಸ್ಟ್ ಪಿರಿಯಡ್ಸ್ : ಗಾಢ ಕಂದು ಬಣ್ಣದಿಂದ ಕೆಂಪು ಬಣ್ಣಕ್ಕೆ ಬದಲಾಗುತ್ತೆ. ಮೊದಲ ಅವಧಿಯ ಸ್ವಭಾವವು ಸೌಮ್ಯವಾದ ಚುಕ್ಕೆಗಳಿಂದ ಸಣ್ಣ ಹೆಪ್ಪುಗಟ್ಟುವಿಕೆಯೊಂದಿಗೆ ಸ್ವಲ್ಪ ಭಾರವಾದ ಹರಿವಿನವರೆಗೆ ಬದಲಾಗಬಹುದು. ಮೊದಲ ಬಾರಿಗೆ ಋತುಮತಿಯಾದಾಗ ಹೆಣ್ಣು ಮಕ್ಕಳಿಗೆ ರಕ್ತಸ್ರಾವ ಒಂದೆರಡು ದಿನಗಳವರೆಗೆ ಇರುತ್ತದೆ. ಕೆಲವರಿಗೆ ಒಂದು ವಾರದ ಕಾಲ ಕೂಡ ಇರಲಿದೆ. ಸರಾಸರಿ ಅವಧಿಯು 2-7 ದಿನಗಳವರೆಗೆ ಇರುತ್ತದೆ. ಋತುಮತಿಯಾದಾಗ ಮೊದಲ 3 ವರ್ಷಗಳ ಕಾಲ ಋತುಚಕ್ರದಲ್ಲಿ ಏರಿಳಿತಗಳು ಕಂಡು ಬರುತ್ತದೆ. ಇದು 2-3 ತಿಂಗಳಿಗೊಮ್ಮೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಸಂಭವಿಸುತ್ತದೆ. ಮೊದಲ ಬಾರಿಗೆ ಮುಟ್ಟಾದಾಗ ಸಾಮಾನ್ಯವಾಗಿ ರಕ್ತಸ್ರಾವ ಹೆಚ್ಚಿರುತ್ತದೆ. ಅದರ ಬಗ್ಗೆ ಗಮನ ಕೊಡಬೇಕು. ಆರೋಗ್ಯಕರ ಆಹಾರ ನೀಡಬೇಕು. ಸಾಕಷ್ಟು ವಿಶ್ರಾಂತಿ ನೀಡಬೇಕು.

ಹೆಚ್ಚು ನೋವಿದ್ರೆ ಏನು ಮಾಡಬೇಕು?
• ಹೊಟ್ಟೆಯ ಕೆಳಭಾಗದಲ್ಲಿ ಬಿಸಿನೀರಿನ ಚೀಲವನ್ನು ಬಳಸಿ
• ಬೆಚ್ಚಗಿನ ನೀರು ಅಥವಾ ದ್ರವ ಪದಾರ್ಥಗಳನ್ನು ಸೇವಿಸಿ.
• ನೋವನ್ನು ನಿವಾರಿಸಲು ಪ್ಯಾರೆಸಿಟಮಾಲ್ ಮಾತ್ರೆಗಳನ್ನು ಅಥವಾ ಮೆಫೆನೆಮಿಕ್ ಆಮ್ಲದಂತಹ ಕೌಂಟರ್ ಪೇನ್ ಕಿಲ್ಲರ್‍ಗಳನ್ನು ಬಳಸಿ.

ಮುಟ್ಟಿನ ನೈರ್ಮಲ್ಯ ಹೇಗೆ?

• ಋತುಚಕ್ರ ಸಮಯದಲ್ಲಿ ಉತ್ತಮವಾದ ಪ್ಯಾಡ್, ಟ್ಯಾಂಪ್ಯೂ ಅಥವಾ ಕಪ್ ಅನ್ನು ಬಳಸಬೇಕು.
• ಪ್ಯಾಡ್ ಅನ್ನು ಪ್ರತಿ 3-4 ಗಂಟೆಗಳಿಗೊಮ್ಮೆ ಚೇಂಜ್ ಮಾಡಿ. ಮುಟ್ಟಿನ ಕಪ್ ಅನ್ನು ಪ್ರತಿ 6-8 ಗಂಟೆಗಳಿಗೊಮ್ಮೆ ತಪ್ಪದೇ ಖಾಲಿ ಮಾಡಿ.
• ಶೌಚಾಲಯ ಬಳಕೆ ಮಾಡುವ ಸಂದರ್ಭದಲ್ಲಿ ಯೋನಿಯ ಬಾಹ್ಯ ಭಾಗದಲ್ಲಿ ತೊಳೆಯುತ್ತಿರಿ. ಒಳಭಾಗದಲ್ಲಿ ಸ್ವಚ್ಛಗೊಳಿಸಲು ಹೋಗದಿರಿ, ಸೋಂಕುಗಳು ಎದುರಾಗಬಹುದು.

ಸ್ತ್ರೀರೋಗ ತಜ್ಞರನ್ನು ಯಾವಾಗ ಸಂಪರ್ಕಿಸಬೇಕು?

ಏಳು ದಿನಗಳಿಗಿಂತ ಹೆಚ್ಚುಕಾಲ ರಕ್ತಸ್ರಾವವಾದರೆ, ಎರಡು ಋತುಚಕ್ರಗಳ ನಡುವಿನ ಅಂತರ 20 ದಿನಗಳಿಗಿಂತ ಕಡಿಮೆಯಿದ್ದರೆ. ತಲೆತಿರುಗುವುದು/ಸುಸ್ತಾಗುತ್ತಿದ್ದರೆ, ಮುಟ್ಟಿನ ಸಮಯದಲ್ಲಿ ಅಸಹನೀಯ ನೋವು ಕಾಣಿಸಿಕೊಂಡರೆ, ಋತುಮತಿಯಾದ 2-3 ವರ್ಷಗಳ ಬಳಿಕವೂ ಋತುಚಕ್ರದಲ್ಲಿ ಏರುಪೇರಾಗುತ್ತಿದ್ದರೆ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ.

Comments are closed.