Home Breaking Entertainment News Kannada Spandana-Rakshit shivaram : ಸ್ಪಂದನಾ ಚಾಡಿ ಬುರುಕಿ, ಎಲ್ಲರ ಮುದ್ದಿನ ಅಚ್ಚು – ಅಣ್ಣ ಕಾಂಗ್ರೆಸ್...

Spandana-Rakshit shivaram : ಸ್ಪಂದನಾ ಚಾಡಿ ಬುರುಕಿ, ಎಲ್ಲರ ಮುದ್ದಿನ ಅಚ್ಚು – ಅಣ್ಣ ಕಾಂಗ್ರೆಸ್ ನಾಯಕ ರಕ್ಷಿತ್ ಶಿವರಾಂ ಬಾಲ್ಯ ಹೇಗಿತ್ತು ಗೊತ್ತೇ ?

Spandana-Rakshit shivaram

Hindu neighbor gifts plot of land

Hindu neighbour gifts land to Muslim journalist

Spandana-Rakshit shivaram: ಸ್ಯಾಂಡಲ್‌ವುಡ್‌ನಲ್ಲಿ (sandalwood) ‘ಚಿನ್ನಾರಿ ಮುತ್ತ’ ಅಂತಲೇ ಪ್ರಸಿದ್ಧಿಯಾಗಿರುವ ನಟ ವಿಜಯ್‌ ರಾಘವೇಂದ್ರ (Vijaya raghavendra) ಅವರ ಪತ್ನಿ ಸ್ಪಂದನಾ ವಿಜಯ ರಾಘವೇಂದ್ರ ಹೃದಯಾಘಾತದಿಂದ (heart attack) ನಿಧನರಾಗಿದ್ದು, ಕುಟುಂಬದ ಜೊತೆ ಬ್ಯಾಂಕಾಕ್ ಪ್ರವಾಸದ ವೇಳೆ ಸ್ಪಂದನಾ ವಿಜಯ್ ರಾಘವೇಂದ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇದರಿಂದ ಸ್ಯಾಂಡಲ್‌ವುಡ್‌ ಗೆ ಭಾರೀ ಅಘಾತವೇ ಉಂಟಾಗಿದೆ.

ವಿಜಯರಾಘವೇಂದ್ರ – ಸ್ಪಂದನಾ ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾಗಿರುವ ವಿಚಾರ ಗೊತ್ತಿದೆ. ಆದರೆ, ಸ್ಪಂದನಾ ಹಾಗೂ ಅಣ್ಣ ಕಾಂಗ್ರೆಸ್ ರಕ್ಷಿತ್ ಶಿವರಾಂ (Spandana-Rakshit shivaram) ಬಾಲ್ಯ ಹೀಗಿತ್ತು ಗೊತ್ತೇ ? ಇಲ್ಲಿದೆ ನೋಡಿ ಇಂಟೆರೆಸ್ಟಿಂಗ್ ಸಂಗತಿ!.

ಸ್ಪಂದನರವರು (Spandana) ಮೂಲತಃ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ (belthangady) ನಿವಾಸಿ, ಆದರೆ ಇವರು ಜನಿಸಿದ್ದು ಮಾತ್ರ ಬೆಂಗಳೂರಿನಲ್ಲಿ (Bengaluru). ಸ್ಪಂದನ ಅವರು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರ ಪುತ್ರಿ. ಅಲ್ಲದೆ ಕಾಂಗ್ರೆಸ್ (congress) ಹಿರಿಯ ಮುಖಂಡ ಮತ್ತು ಎಂಎಲ್ಸಿ ಬಿಕೆ ಹರಿಪ್ರಸಾದ್ ಅವರು ಸ್ಪಂದನಾ ಅವರ ಚಿಕ್ಕಪ್ಪ, ಹಾಗೂ, ಸೋದರ ರಕ್ಷಿತ್ ಶಿವರಾಂ (Rakshit shivaram) ಅನ್ನೋದು ತಿಳಿದಿರುವ ವಿಚಾರ. ಅಂದಹಾಗೆ ಸ್ಪಂದನಾ ಬಾಲ್ಯ ಹೇಗಿತ್ತು?

ಸ್ಟಾರ್ ಸುವರ್ಣ (star suvarna) ವಾಹಿನಿಯ ‘ನಮ್ ಕಥೆ ನಿಮ್ ಜೊತೆ’ (Nam kathe nim jothe) ಸಂದರ್ಶನದಲ್ಲಿ ಸ್ಪಂದನಾ ತಮ್ನಾ ಬಾಲ್ಯದ ದಿನಗಳ (spandana childhood days) ಬಗ್ಗೆ ಮಾತನಾಡಿದ್ದರು. ಆಕೆಯ ಸಹೋದರ ರಕ್ಷಿತ್ ಕೂಡ ತಮ್ಮಿಬ್ಬರ ಬಾಲ್ಯ ಹೇಗಿತ್ತು ಎನ್ನುವುದನ್ನು ವಿವರಿಸಿದ್ದರು. ತಂದೆ ಬಿ. ಕೆ ಶಿವರಾಂ ಬಹಳ ಶಿಸ್ತಿನ ವ್ಯಕ್ತಿಯಾಗಿದ್ದರಿಂದ ಮನೆ ಶಿಸ್ತಿನಿಂದ ಕೂಡಿತ್ತು. ಆದರೆ, ಸ್ಪಂದನಾ ಜೊತೆ ತಂದೆ ಅಷ್ಟೇನು ಸ್ಟ್ರಿಕ್ಟ್ ಆಗಿ ಇರುತ್ತಿರಲಿಲ್ಲ.

ಬಾಲ್ಯದಲ್ಲಿ ಸ್ಪಂದನಾ ಬಹಳ ಸೈಲೆಂಟ್ ಹುಡುಗಿ. ಪ್ರತಿಯೊಂದು ವಿಷಯವನ್ನು ತಂದೆಗೆ ಹೇಳುತ್ತಿದ್ದರು. ಕೋಪ ಬಂದಾಗ ಯಾರು ಏನೇ ಮಾಡಿದರೂ ತಕ್ಷಣ ಯಾರ ಬಳಿಯಾದರೂ ಸ್ಪಂದನಾ ಹೇಳಿಬಿಡುತ್ತಿದ್ದರಂತೆ. ಅಂದ್ರೆ ಸ್ಪಂದನಾ ಬಾಲ್ಯದಲ್ಲಿ ಚಾಡಿಬುರುಕಿ ಎಂದಾಯಿತು.

ರಕ್ಷಿತ್ ಶಿವರಾಂ-ಸ್ಪಂದನಾ ಎಲ್ಲಾ ಅಣ್ಣ- ತಂಗಿಯಂತೆ ಬಾಲ್ಯದಲ್ಲಿ ಜಗಳ, ಆಟ ಆಡಿ ಬೆಳೆದವರು. ಸ್ಪಂದಾನರನ್ನು ಅಚ್ಚು ಎಂದು ಕರೆಯುತ್ತಿದ್ದರು. ಎಲ್ಲಾ ತಂದೆಗೂ ಮಗಳೇ ಮುದ್ದು ಎನ್ನುವಂತೆ ಸ್ಪಂದನಾ ತಂದೆಗೂ ಆಕೆಯ ಮೇಲೆ ಪ್ರೀತಿ ಜಾಸ್ತಿ. ಸ್ಪಂದನಾ ಚಿಕ್ಕವರಿದ್ದಾಗ ಅತೀ ಕಡಿಮೆ ಬಟ್ಟೆ ಹಾಕುತ್ತಿದ್ದರು. ಅದಕ್ಕೆ ಅಪ್ಪ ಪ್ರೀತಿಯಿಂದ ಮೋಗ್ಲಿ ಎಂದು ಕರೆಯುತ್ತಿದ್ದರು.

ತಂದೆಯ ಮುದ್ದಿನ ಮಗಳು ಸ್ಪಂದನಾ ತಂದೆ ಇಲಾಖೆಯಲ್ಲಿ ಇದ್ದಿದ್ದರಂತೆ ಮನೆಯಲ್ಲಿ ಹೆಚ್ಚು ಇರುತ್ತಿರಲಿಲ್ಲ. ಆಗ ಅಣ್ಣ ರಕ್ಷಿತ್ ತಂಗಿಯನ್ನು ಜೋಪಾನ ಮಾಡುತ್ತಿದ್ದರು. ಸ್ಪಂಧನಾ ಬೆಂಗಳೂರಿನ ಸ್ಟೆಲಾ ಮೇರಿಸ್ ಎಕ್ಸ್ಟ್ರೀಮ್ ಶಾಲೆಯಲ್ಲಿ ಓದಿದ್ದು, ನಂತರ ಕೇರಳದ ಎಂಇಎಸ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದರು. ಸಿನಿಮಾರಂಗಕ್ಕೂ ಪ್ರವೇಶೀಸಿದ್ದರು.

ಇದನ್ನೂ ಓದಿ: Smoking Bird: ಬೀಡಿ ಸೇದಿ ಹೊಗೆ ಉಗುಳುವ ಹಕ್ಕಿ ?! ವೈರಲ್ ಆಗಿದೆ ಈ ಸ್ಮೋಕಿಂಗ್ ಹಕ್ಕಿ !