New Ration Card: ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ ಯಾವಾಗ ? ಫ್ರೆಶ್ ಅಪ್ಡೇಟ್ ಗಮನಿಸಿ !

Ration card latest update all you want know about new application for ration card in Karnataka

New Ration Card: ಕಾಂಗ್ರೆಸ್​ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಬರುತ್ತಿದ್ದಂತೆ ಬಿಪಿಎಲ್ ಕಾರ್ಡ್ ಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆಯ ಜಾರಿಯಲ್ಲಿ ರೇಷನ್​ ಕಾರ್ಡ್​ ಅತ್ಯಂತ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಹಲವರು ಹೊಸ ರೇಷನ್​ ಕಾರ್ಡ್​​​ಗೆ (New Ration Card) ಅರ್ಜಿ ಸಲ್ಲಿಕೆ ಮಾಡಲು ಕಾದುಕುಳಿತಿದ್ದಾರೆ.

ಆದರೆ, ಈಗಾಗಲೇ ವಿಧಾನಸಭಾ ಚುನಾವಣೆಗೂ ಮುನ್ನ ಹೊಸ ರೇಷನ್ ಕಾರ್ಡ್​​ಗೆ ಅರ್ಜಿ ಸಲ್ಲಿಕೆ ಮಾಡಿರುವ ಸುಮಾರು 2.95 ಲಕ್ಷ ಅರ್ಜಿಗಳ ಪರಿಶೀಲನೆ ಆಗಬೇಕಿದೆ. ರೇಷನ್​​ ಕಾರ್ಡ್​​ಗಾಗಿ ಅರ್ಜಿ ಸಲ್ಲಿಕೆ ಮಾಡಿರುವ ಹಲವರು ಕಾರ್ಡ್​ ಗಳನ್ನು ಸರ್ಕಾರ ಯಾವಾಗ ಕೊಡುತ್ತೆ ಅಂತ ಪ್ರಶ್ನೆ ಮಾಡ್ತಿದ್ದಾರೆ.

ಇದರ ನಡುವೆ ಆಹಾರ ಇಲಾಖೆ ಕಳೆದ ಒಂದು ತಿಂಗಳಿನಿಂದ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಹೊಸ ರೇಷನ್​ ಕಾರ್ಡ್​​, ಈಗಾಗಲೇ ಇರುವ ರೇಷನ್ ಕಾರ್ಡ್ ತಿದ್ದುಪಡಿ, ರೇಷನ್ ಕಾರ್ಡ್​ ಅಪ್​ಡೇಟ್, ಡಿಲೀಟ್​​ ​​ಸೇರಿದಂತೆ ಇತರೇ ಆಯ್ಕೆಗಳನ್ನು ತಡೆ ಹಿಡಿದಿದೆ. ಆದರೆ ಸರ್ಕಾರ ಸೂಚನೆ ಮೇರೆಗೆ ಆಹಾರ ಇಲಾಖೆ ಆಪ್​​ಡೇಟ್​​ಗಳಿಗೆ ತಡೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಸರ್ಕಾರಕ್ಕೆ ಆಹಾರ ಇಲಾಖೆ ಕೂಡ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿದೆ. ಈ ಬಗ್ಗೆ ಆಹಾರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರ ಕುಮಾರ್ ಅವರು ಅರ್ಜಿಗಳ ಪರಿಶೀಲನೆ ಮಾಡುತ್ತೇವೆ ಎಂದು ಖಚಿತ ಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಆಹಾರ ಕಾಯ್ದೆ ಅಡಿ ರಾಜ್ಯದಲ್ಲಿ 1 ಕೋಟಿ 28 ಲಕ್ಷ ಬಿಪಿಎಲ್​ ಕಾರ್ಡ್​ದಾರರು ಇದ್ದು, 4 ಕೋಟಿ 42 ಲಕ್ಷದಷ್ಟು ಫಲಾನುಭವಿಗಳು ಇದ್ದಾರೆ. ಹೊಸದಾಗಿ ಕಾರ್ಡ್​ ಕೊಡಬೇಕು ಎಂದರೇ ಹಣಕಾಸು ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕಿದೆ. ಆದ್ದರಿಂದ ಸರ್ಕಾರ ಹೊಸ ಅರ್ಜಿಗಳ ಸ್ವೀಕಾರಕ್ಕೆ ತಡ ಮಾಡುತ್ತಿದೆ ಎನ್ನಲಾಗಿದೆ. ಈ ಎಲ್ಲಾ ಅಂಶಗಳನ್ನು ನೋಡಿದರೆ ಹೊಸ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಸಿಗುವುದು ತಡವಾಗುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರ ಈಗ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೊಂದಿಸಲು ಶ್ರಮಿಸುತ್ತಿದೆ. ಇಂತಹ ಸಂದರ್ಭದಲ್ಲಿ ರೇಷನ್​ ಕಾರ್ಡ್​​ಗಳು ಹೆಚ್ಚಾದರೆ ಗ್ಯಾರಂಟಿ ಯೋಜನೆಗಳ ವೆಚ್ಚಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ರೇಷನ್​ ಕಾರ್ಡ್​​ಗಳು ಹೆಚ್ಚಾದರೆ ಗ್ಯಾರಂಟಿ ಯೋಜನೆಗಳ ವೆಚ್ಚಾಗುವ ಸಾಧ್ಯತೆ ಇದೆ.

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಸಾವಿರಾರರು ಕೋಟಿ ಅನುದಾನ ನೀಡಿರುವ ಸರ್ಕಾರಕ್ಕೆ ಹೆಚ್ಚುವರಿಯಾಗಿ ಸುಮಾರು 650 ಕೋಟಿ ತಿಂಗಳಿಗೆ ನೀಡುವುದು ಅಸಾಧ್ಯವಲ್ಲ. ಆದರೆ ಹೊಸ ರೇಷನ್​ ಕಾರ್ಡ್​​ಗೆ ಅರ್ಜಿ ಆರಂಭ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರ ಪಡೆದುಕೊಳ್ಳಲು ಜನರು ಇನ್ನು ಒಂದು ತಿಂಗಳು ಕಾದು ನೋಡಬೇಕಿದೆ.

ಇದನ್ನೂ ಓದಿ: ಮದ್ಯ ಪ್ರಿಯರ ಬೇಡಿಕೆಗೆ ಕೊನೆಗೂ ಐಸಿನಂತೆ ಕರಗಿದ ಸರ್ಕಾರ, ಮದ್ಯ ಇನ್ನು ಅಗ್ಗ !

Comments are closed.