World Breastfeeding Week: ಕೆಲಸ ಮಾಡುವ ತಾಯಂದಿರಿಗೆ ಸ್ತನ್ಯಪಾನದ ಸಲಹೆಗಳು! ಈ ವಿಷಯಗಳನ್ನು ನೆನಪಿಟ್ಟುಕೊಂಡರೆ ಉತ್ತಮ

World breastfeeding week 2023 best tips for working women about breastfeeding

World Breastfeeding week: ಆಗಸ್ಟ್‌ 1 ರಿಂದ 7 ರವರೆಗೆ ಪ್ರತಿವರ್ಷ ವಿಶ್ವದಾದ್ಯಂತ ವಿಶ್ವ ಸ್ತನ್ಯಪಾನ ವಾರ(World Breastfeeding week) ಎಂದು ಆಚರಣೆ ಮಾಡಲಾಗುತ್ತದೆ. ಇಲ್ಲಿ ಜನರಿಗೆ ಸ್ತನ್ಯಪಾನದ ಮಹತ್ವ ಮತ್ತು ಅದರ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಉದ್ದೇಶವಾಗಿರುತ್ತದೆ. ಡಬ್ಲುಎಚ್‌ಓ(WHO) ಹುಟ್ಟಿದಾಗಿನಿಂದ ಆರು ತಿಂಗಳವರೆಗೆ ನವಜಾತ ಶಿಶುವಿಗೆ ತಾಯಿ ಹಾಲು ನೀಡಬೇಕು ಹೇಳುತ್ತದೆ.

ತಾಯಿಯ ಎದೆಹಾಲಿನಷ್ಟು ಉತ್ತಮವಾದ ಆಹಾರ ಮಗುವಿಗೆ ಬೇರೊಂದಿಲ್ಲ. ಇದು ಮಗುವಿಗೆ ಪ್ರಯೋಜನ ನೀಡುವುದರ ಜೊತೆಗೆ ತಾಯಿಯು ಸ್ತನ್ಯಪಾನ ಮಾಡುವುದರಿಂದ ಅನೇಕ ಪ್ರಯೋಜನ ಪಡೆಯುತ್ತಾಳೆ. ಸ್ತನ್ಯಪಾನವು ಸ್ತನ ಕ್ಯಾನ್ಸರ್‌ ವಿರುದ್ಧ ಹೋರಾಡಲು ತಾಯಿಗೆ ಸಹಾಯ ಮಾಡುತ್ತದೆ. ಜೊತೆಗೆ ಮಗುವಿನ ಬೆಳವಣಿಗೆಯಲ್ಲಿ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆದರೆ ಕೆಲಸ ಮಾಡುವ ಮಹಿಳೆಯರಿಗೆ (Working Womens) ಮಾತ್ರ ಮಗುವಿಗೆ ಹಾಲುಣಿಸುವುದು ಸ್ವಲ್ಪ ಸವಾಲಿನ ಕೆಲಸ ಎಂದೇ ಹೇಳಬಹುದು.

ಹೆಚ್ಚಿನ ತಾಯಂದಿರು ಕೆಲಸ ಮಾಡುವಾಗ ಮಗುವಿಗೆ ಹಾಲುಣಿಸುವುದನ್ನು ನಿಲ್ಲಿಸುತ್ತಾರೆ. ಅವರು ಕೆಲಸ ಮಾಡುವ ಮತ್ತು ಹಾಲುಣಿಸುವ ವಿಧಾನಗಳ ಬಗ್ಗೆ ತಿಳಿದಿಲ್ಲದ ಕಾರಣ ಈ ರೀತಿ ಆಗುವ ಸಾಧ್ಯತೆ ಹೆಚ್ಚು. ಇದಲ್ಲದೆ, ಬಿಡುವಿಲ್ಲದ ಜೀವನಶೈಲಿ ಮತ್ತು ಆಯಾಸದಿಂದಲೂ ಇದು ಸಂಭವಿಸಬಹುದು. ಉದ್ಯೋಗಸ್ಥ ಮಹಿಳೆಯರಿಗೆ ಹಾಲುಣಿಸುವ ಸುಲಭ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಕೆಲಸ ಮಾಡುವ ಮಹಿಳೆಯರು ಈ ಕೆಲಸವನ್ನು ಹೇಗೆ ಸುಲಭಗೊಳಿಸಬಹುದು?
ಕೆಲಸ ಮಾಡುವ ಮಹಿಳೆಯರು ತಮ್ಮ ಫ್ಲೆಕ್ಸಿಬಲ್‌ ಸಮಯವನ್ನು ಚೂಸ್‌ ಮಾಡಬಹುದು. ಅಂದರೆ ವರ್ಕ್‌ ಫ್ರಂ ಹೋಮ್‌ ಆಯ್ಕೆ ಮಾಡಬಹುದು.
ಅರ್ಧ ದಿನದಿಂದ ಕೆಲಸ ಮಾಡಲು ಪ್ರಾರಂಭಿಸಿದರೆ ಉತ್ತಮ. ಕ್ರಮೇಣ ಕೆಲಸದ ಅವಧಿ ಹೆಚ್ಚಿಸಿ.
ನಿಮ್ಮ ಕಚೇರಿಯ ಸಮಯದ ಬಗ್ಗೆ ಗಮನವಿರಲಿ.

ಈ ವಿಷಯಗಳ ಬಗ್ಗೆ ಕೂಡಾ ಗಮನವಿರಲಿ;
ಕೆಲಸ ಮಾಡುವ ಮಹಿಳೆಯರು ತಮ್ಮ ಮಗುವನ್ನು ಕುಟುಂಬದ ಸದಸ್ಯರ ಜೊತೆ ಇರಲು ಬಿಡಬೇಕು. ಏಕೆಂದರೆ ನೀವು ಕೆಲಸ ಮಾಡುವ ಸಮಯದಲ್ಲಿ ಮಗು ನಿಮ್ಮ ಮನೆಯ ಇತರ ಸದಸ್ಯರೊಂದಿಗೆ ಬೆರೆಯಲು ಸಮಯ ದೊರಕಿದಂತಾಗುತ್ತದೆ. ನೀವು ಕೂಡಾ ಯಾವುದೇ ಒತ್ತಡವಿಲ್ಲದೆ ಕೆಲಸ ಮಾಡಲು ಸಹಾಯವಾಗುತ್ತದೆ.

ತಾಯಿಯಾದ ನಂತರ ಓರ್ವ ಮಹಿಳೆ ಅನೇಕ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆಕೆ ತನ್ನ ವಾರ್ಡ್‌ರೋಬ್‌ನಲ್ಲಿ ತಾನು ಹಾಕುವ ಬಟ್ಟೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕೆಲಸಕ್ಕೆ ಹೋಗುವ ಮಹಿಳೆಯರು ತಮ್ಮ ಬಟ್ಟೆಗಳನ್ನು ಯಾವ ರೀತಿ ಧರಿಸಿದರೆ ಉತ್ತಮ ಎಂಬ ಆಯ್ಕೆ ಮಾಡಬೇಕು. ಏಕೆಂದರೆ ಮಗುವಿಗೆ ಹಾಲುಣಿಸುವ ಸಂದರ್ಭದಲ್ಲಿ ಆರಾಮದಾಯಕವಾಗಿದ್ದರೆ ಉತ್ತಮ. ಇಷ್ಟು ಮಾತ್ರವಲ್ಲದೇ ಓರ್ವ ತಾಯಿ ಮಗುವಿನ ಲಾಲನೆ, ಪಾಲನೆಯ ಜೊತೆಗೆ ತಮ್ಮ ಆಹಾರದ ಬಗ್ಗೆ ಇರುವ ಕಾಳಜಿ ತೆಗೆದುಕೊಳ್ಳಬೇಕು. ಜೊತೆಗೆ ಕನಿಷ್ಠ ಒತ್ತಡ ತೆಗೆದುಕೊಂಡರೆ ಇನ್ನೂ ಉತ್ತಮ.

ಇದನ್ನೂ ಓದಿ: ನೀವು ಮಾಡಿಟ್ಟ ಪದಾರ್ಥದಲ್ಲಿ ಉಪ್ಪು ಜಾಸ್ತಿಯಾಯಿತೇ? ಟೆನ್ಶನ್‌ ಬೇಡ, ಈ ಟೆಕ್ನಿಕ್‌ ಬಳಸಿ ನೋಡಿ!!!

Comments are closed.