Transport Department App For Auto Cab : ಓಲಾ ಉಬರ್ ಸೀದಾ ಮನೆಗೆ – ಆಟೋ, ಟ್ಯಾಕ್ಸಿ ಚಾಲಕರಿಗಾಗಿ ಸರಕಾರದಿಂದಲೇ ಆ್ಯಪ್‌ ! ಸಾರಿಗೆ ಸಚಿವರ ಮಹತ್ವದ ಘೋಷಣೆ !!!

Latest news Karnataka transport department develop app for auto rickshaw and cab drivers

Transport Department App For Auto Cab driver : ಆಟೋ, ಟ್ಯಾಕ್ಸಿ ಚಾಲಕರಿಗಾಗಿ ಸರಕಾರದಿಂದಲೇ ಹೊಸ ಆ್ಯಪ್‌ ಬರಲಿದೆ. ಹೌದು, ಆಟೋ, ಮ್ಯಾಕ್ಸಿಕ್ಯಾಬ್‌ ಚಾಲಕರ ಅನುಕೂಲಕ್ಕಾಗಿ ಸಾರಿಗೆ ಇಲಾಖೆಯಿಂದಲೇ ಆ್ಯಪ್‌ವೊಂದನ್ನು (Transport Department App For Auto Cab driver) ಅಭಿವೃದ್ಧಿಪಡಿಸಲಾಗುತ್ತಿದೆ. ಈ ಬಗ್ಗೆ ಸಾರಿಗೆ ಸಚಿವರು ಮಹತ್ವದ ಘೋಷಣೆ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ”ಸರಕಾರದ ಆ್ಯಪ್‌ ಆಧಾರಿತ ಸೇವೆಯಡಿಯಲ್ಲಿಯೇ ಎಲ್ಲ ಆಟೋ, ಟ್ಯಾಕ್ಸಿಗಳು ಕಾರ್ಯ ನಿರ್ವಹಿಸಲಿವೆ, ಇದಕ್ಕೆ ಕೆಲವೇ ತಿಂಗಳಲ್ಲಿ ಚಾಲನೆ ನೀಡಲಾಗುವುದು,” ಎಂದು ತಿಳಿಸಿದರು.

ಆ್ಯಪ್‌ ಆಧಾರಿತ ಖಾಸಗಿ ಕಂಪೆನಿಗಳು ಚಾಲಕರಿಗೆ ಕಡಿಮೆ ದರ ಪಾವತಿಸಿ, ಅಧಿಕ ಲಾಭ ಗಳಿಸುತ್ತಿರುವ ದೂರುಗಳಿವೆ. ಅಲ್ಲದೆ, ಆಪ್ ಗಾಗಿ ನಿರ್ಮಾಣಕ್ಕೆ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆ ‘ನೋ ಲಾಸ್‌, ನೋ ಪ್ರಾಫಿಟ್‌’ ಪರಿಕಲ್ಪನೆಯಲ್ಲಿ ಆ್ಯಪ್‌ ಬರಲಿದೆ. ಮೊದಲಿಗೆ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಈ ಆ್ಯಪ್‌ಗೆ ಚಾಲನೆ ನೀಡಲಾಗುವುದು. ನಂತರ ರಾಜ್ಯದೆಲ್ಲೆಡೆ ವಿಸ್ತರಿಸಲಾಗುತ್ತದೆ. ನಾಲ್ಕೈದು ತಿಂಗಳೊಳಗೆ ಆ್ಯಪ್‌ ಸೇವೆಗೆ ಸಿದ್ಧವಾಗಲಿದೆ ಎಂದು ಸಚಿವರು ಹೇಳಿದರು. ಈ ಮೂಲಕ ಖಾಸಗಿ ಕಂಪನಿಗಳು ಪ್ರಯಾಣಿಕರನ್ನು ಸುಲಿಗೆ ಮಾಡುವುದನ್ನು ತಪ್ಪಿಸಲು ಸರ್ಕಾರ ಮುಂದಾಗಿದೆ.

ಈ ಹೊಸ ಆ್ಯಪ್‌ನಲ್ಲಿ ಆಟೋ, ಟ್ಯಾಕ್ಸಿ ಸೇರಿದಂತೆ ಎಲ್ಲ ಸಾರಿಗೆ ವಾಹನಗಳು ಇರಲಿದೆ. ಕಡಿಮೆ ದರ ಇರಲಿದ್ದು, ಸಾರಿಗೆ ಸಂಸ್ಥೆಯ ಆ್ಯಪ್‌ನಲ್ಲಿ ಏಕರೂಪ ದರವಿರಲಿದೆ. ಆದರೆ, ದರ ನಿಗದಿ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಹಾಗೆಯೇ ಆ್ಯಪ್‌ ಆಧಾರಿತ ಸೇವೆಗೆ ನೋಂದಣಿ ಮಾಡಿಕೊಳ್ಳಬೇಕು.

ಇದನ್ನೂ ಓದಿ: Free Health Insurance: ರಾಜ್ಯದ ಜನರಿಗೆ 25 ಲಕ್ಷ ಮೊತ್ತದ ಉಚಿತ ಆರೋಗ್ಯ ವಿಮೆ ; ಬಿಗ್ ಘೋಷಣೆ ಮಾಡಿದ ಆ ಸರ್ಕಾರ !

Comments are closed.