ಮಂಗಳೂರು: ಪಕ್ಕದ ಮನೆ ಮಹಿಳೆ ಸ್ನಾನವನ್ನು ಕದ್ದು ನೋಡಿ ವೀಡಿಯೋ ರೆಕಾರ್ಡ್, ಅರೆಸ್ಟ್ ಆದ ಹುಡುಗ !
Latest Karnataka news A boy arrested for recording video of women bathing in Mangalore


Mangaluru: ಯುವಕನೋರ್ವ ಪಕ್ಕದ ಮನೆಯ ಮಹಿಳೆ ಸ್ನಾನ ಮಾಡುತ್ತಿರುವುದನ್ನು ಕದ್ದು ನೋಡಿ ತನ್ನ ಮೊಬೈಲ್ ನಲ್ಲಿ (Mobile) ವಿಡಿಯೋ ರೆಕಾರ್ಡ್ ಮಾಡಿರುವ ಘಟನೆ ಇಲ್ಲಿನ (Mangaluru) ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಕ್ಷಿಕೆರೆ ಹೊಸಕಾಡು ಎಂಬಲ್ಲಿ ನಡೆದಿದ್ದು, ಸದ್ಯ ಯುವಕ ಪೊಲೀಸರ ಅತಿಥಿಯಾಗಿದ್ದಾನೆ. ಬಂಧಿತನನ್ನು ಪಕ್ಷಿಕೆರೆ ಹೊಸಕಾಡು ನಿವಾಸಿ ಸುಮಂತ್ ಪೂಜಾರಿ (22) ಎನ್ನಲಾಗಿದೆ.

ಬುಧವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಆರೋಪಿ ಸುಮಂತ್ ತನ್ನ ನೆರೆ ಮನೆಯ ಬಚ್ಚಲು ಕೋಣೆಯಲ್ಲಿ ಮಹಿಳೆ ಸ್ನಾನ ಮಾಡುವುದನ್ನು ಕದ್ದು ನೋಡುತ್ತಾ, ವೀಡಿಯೊ ಮಾಡುತ್ತಿದ್ದ. ಈ ವೇಳೆ ಯುವಕ ವಿಡಿಯೋ ಮಾಡುತ್ತಿರುವುದು ಮಹಿಳೆಯ ಗಮನಕ್ಕೆ ಬಂದಿದ್ದು, ಭಯದಿಂದ ಜೋರಾಗಿ ಕಿರುಚಾಡಿದ್ದಾರೆ. ಮಹಿಳೆಯ ಧ್ವನಿ ಕೇಳಿ ನೆರೆಮನೆಯವರು ಓಡೋಡಿ ಬಂದು ಆರೋಪಿ ಸುಮಂತ್ ನನ್ನು ಹಿಡಿದು ಥಳಿಸಿದ್ದಾರೆ ಎಂದು ಹೇಳಲಾಗಿದೆ.
ನಂತರ ಘಟನೆ ಕುರಿತು ಸ್ಥಳೀಯರು ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿ ಕೈಯಲ್ಲಿದ್ದ ಮೊಬೈಲ್ ಸಮೇತ ಆತನನ್ನು ವಶಕ್ಕೆ ಪಡೆದು ಠಾಣೆ ಕರೆದೊಯ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Comments are closed.