Heart attack: ವಾರದ 7 ದಿನಗಳಲ್ಲಿ ಈ ದಿನ ಮಾತ್ರ ಅತ್ಯಂತ ಹೆಚ್ಚು ಹೃದಯಾಘಾತ, ಶಾಕಿಂಗ್ ಸತ್ಯ ಬಹಿರಂಗ !
Latest news health news Out of the 7 days of the week, most heart attacks occur only on this day
Heart attack: ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಜನರಲ್ಲಿ ದಿನೇ ದಿನೇ ಹೆಚ್ಚುತ್ತಾ ಹೋಗುತ್ತಿವೆ. ಇಂದು ಹೃದಯದ ಸಮಸ್ಯೆ ವ್ಯಾಪಕವಾಗಿ ವಿಶ್ವದಾದ್ಯಂತ ಕಂಡು ಬರುತ್ತಿರುವುದಕ್ಕೆ ನಾವು ಅನುಸರಿಸುವ ಒತ್ತಡದ ಜೀವನ ಶೈಲಿ, ಬದಲಾದ ಆಹಾರ ಪದ್ಧತಿ , ಹವಾಮಾನ ಹೀಗೆ ಹಲವು ಉತ್ತರಗಳನ್ನು ಕಂಡು ಕೊಳ್ಳಬಹುದು. ಈ ಬಗ್ಗೆ ಅನೇಕ ಆರೋಗ್ಯ ತಜ್ಞರು ಸಂಶೋಧನೆ ನಡೆಸಿದ್ದಾರೆ. ಇದೀಗ ಬ್ರಿಟಿಷ್ ಹಾರ್ಟ್ ಫೌಂಡೇಶನ್ ಹೃದಯಘಾತದ (Heart attack) ಬಗ್ಗೆ ಶಾಕಿಂಗ್ ಸತ್ಯವನ್ನು ಬಹಿರಂಗ ಮಾಡಿದ್ದು, ಅತಿ ಹೆಚ್ಚು ಹೃದಯಘಾತದ(Heart attack) ಪ್ರಕರಣಗಳು ನಡೆಯುವ ದಿನವನ್ನು ಬಹಿರಂಗಪಡಿಸಿದೆ.
ಹೌದು, ವರದಿಯ ಪ್ರಕಾರ ಸೋಮವಾರದಂದು ಹೃದಯಾಘಾತವು ಯಾವುದೇ ಸಮಯಕ್ಕಿಂತ ಹೆಚ್ಚಾಗಿ ಕಂಡುಬರುತ್ತದೆಯಂತೆ. ಇತರ ದಿನಗಳಿಗಿಂತಲೂ ಸೋಮವಾರದಂದು ಹೃದಯಘಾತಕ್ಕೆ ಒಳಗಾಗುವ ಸಾಧ್ಯತೆಗಳು ಶೇಕಡಾ 13 ರಷ್ಟು ಹೆಚ್ಚು. ಅಲ್ಲದೆ ಇದನ್ನು ‘ನೀಲಿ ಸೋಮವಾರ’ (blue Monday) ವಿದ್ಯಮಾನ ಎಂದೂ ಕರೆಯಲಾಗುತ್ತದೆ. ಎಂದು ಬ್ರಿಟಿಷ್ ಹಾರ್ಟ್ ಫೌಂಡೇಶನ್ ತಿಳಿಸಿದೆ.
ಆರೋಗ್ಯ ತಜ್ಞರ ಪ್ರಕಾರ, ಒಬ್ಬ ವ್ಯಕ್ತಿಯು ಒತ್ತಡದಲ್ಲಿದ್ದಾಗ, ಈ ಹಾರ್ಮೋನ್ ಮಟ್ಟಗಳು ಸಿರ್ಕಾಡಿಯನ್ ಲಯದ ಮೇಲೆ ಪರಿಣಾಮ ಬೀರುತ್ತವೆ, ಇವೆಲ್ಲವೂ ಹೃದಯಾಘಾತ ಅಥವಾ ಹೃದಯರಕ್ತನಾಳದ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಹೃದಯಘಾತವು ಬೆಳಗ್ಗೆ 6 ರಿಂದ 10 ರ ಒಳಗೆ ಸಂಭವಿಸಬಹುದು ಎಂದು ವರದಿಯು ತಿಳಿಸಿದೆ . ಇದಕ್ಕೆ ಕಾರಣ ಕಾರ್ಟಿಸೋಲ್ ಮತ್ತು ಇತರ ಹಾರ್ಮೋನ್‌ಗಳು ಒಬ್ಬ ವ್ಯಕ್ತಿಯು ಎಚ್ಚರಗೊಳ್ಳುತ್ತಿದ್ದಂತೆ ರಕ್ತದಲ್ಲಿ ಏರಿಕೆಯಾಗುತ್ತದೆ. ಇದರಿಂದ ಹೃದಯಘಾತವು ಸಂಭವಿಸಬಹುದು. ಇನ್ನು ಈ ‘ನೀಲಿ ಸೋಮವಾರ’ ಎಂಬ ವಿದ್ಯಮಾನದ ನಿಜವಾದ ಕಾರಣವೇನು? ಎಂಬುದನ್ನು ಸಂಶೋಧಕರು ಇಲ್ಲಿ ತಿಳಿಸಿದ್ದಾರೆ.
ತಜ್ಞರ ಪ್ರಕಾರ ಸಾಮಾನ್ಯವಾಗಿ, ಎಲ್ಲಾ ಕೆಲಸಗಳ ಪ್ರಾರಂಭದ ವಾರ ಎಂದರೆ ಅದು ಸೋಮವಾರ. ಇದು ಹೊಸ ಕೆಲಸದ ವಾರ ಮಾತ್ರವಲ್ಲದೆ ಹೊಸ ಒತ್ತಡ ಆತಂಕವನ್ನು ತರುತ್ತದೆ. ವೀಕೆಂಡ್ ನ ಮೋಜು ಮಸ್ತಿಯ ನಂತರ ಕೆಲಸಕ್ಕೆ ಮರಳುವ ವ್ಯಕ್ತಿಗಳು ಅನುಭವಿಸುವ ಸಾಮೂಹಿಕ ಒತ್ತಡವು ಸೋಮವಾರದಂದು ಮಾರಣಾಂತಿಕ ಹೃದಯಘಾತವಾಗಿ ಹೊರಹೊಮ್ಮುತ್ತದೆ. ಎಂದು ಸಂಶೋಧಕರು ತಿಳಿಸಿದ್ದಾರೆ.
ವಾರಾಂತ್ಯ ಅಂದಮೇಲೆ ಅಲ್ಲಿ ಮೋಜು-ಮಸ್ತಿ, ಪಾರ್ಟಿ ಇಂಥವುಗಳು ಇದ್ದದ್ದೇ. ಒಮ್ಮೆಲೇ ಆಹಾರ ಪದ್ಧತಿಯಲ್ಲಿ ಬದಲಾವಣೆ ಉಂಟಾಗುತ್ತದೆ. ಅಲ್ಲದೆ ನಿಮ್ಮ ನಿದ್ರಾ ವ್ಯವಸ್ಥೆ ಮತ್ತು ದಿನಚರಿ ಎಲ್ಲವೂ ವಾರಾಂತ್ಯದಲ್ಲಿ ನಿಂತುಬಿಡುತ್ತದೆ. ಅಷ್ಟು ಮಾತ್ರವಲ್ಲದೆ ಆಲ್ಕೋಹಾಲ್ ಸೇವನೆಗಳು, ಧೂಮಪಾನ ಇವೆಲ್ಲವೂ ನಿಮ್ಮ ಹೃದಯದ ಆರೋಗ್ಯವನ್ನು ಹಾಳು ಮಾಡಬಹುದು. ವೀಕೆಂಡ್ ಮುಗಿದು ಮತ್ತೆ ಸೋಮವಾರ ಬಂದಾಗ ತಮ್ಮ ದಿನಚರಿಯನ್ನು ಪ್ರಾರಂಭಿಸುತ್ತಾರೆ. ಈ ದಿಢೀರ್ ಬದಲಾವಣೆಯಿಂದ ನಿಮ್ಮ ಹೃದಯವು ಆಯಾಸಗೊಳ್ಳುತ್ತದೆ ಇದರಿಂದ ಹೃದಯಘಾತವಾಗುವ ಸಂಭವನೀಯತೆ ಕೂಡ ಹೆಚ್ಚು.
ಹೃದಯಘಾತವು ಸೋಮವಾರದಂದು ಹೆಚ್ಚಳವಾಗಲು ಇನ್ನೊಂದು ಕಾರಣವೆಂದರೆ,ವಾರಾಂತ್ಯದಲ್ಲಿ ಆರೋಗ್ಯ ವೃತ್ತಿಪರರು ಮತ್ತು ವೈದ್ಯಕೀಯ ಸೌಲಭ್ಯಗಳ ಲಭ್ಯತೆಯು ಕಡಿಮೆ ಇರುತ್ತದೆ. ವಾರಾಂತ್ಯದಲ್ಲಿ ತಮಗೆ ಹೃದಯಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಉಂಟಾಗುತ್ತಿದ್ದರು, ಅದನ್ನು ನಿರ್ಲಕ್ಷಿಸುತ್ತಾರೆ. ವೈದ್ಯಕೀಯ ಗಮನಕ್ಕೆ ತರಲು ವಿಫಲರಾಗುತ್ತಾರೆ. ಕೊನೆಗೆ ಸೋಮವಾರದಂದು ಮಾನಸಿಕ ಒತ್ತಡ, ಕೆಲಸದ ಒತ್ತಡ ಇವೆಲ್ಲರ ಪರಿಣಾಮವಾಗಿ ಹೃದಯದ ಆರೋಗ್ಯವು ಹದಗೆಡುವುದರಿಂದ ವ್ಯಕ್ತಿಯು ಹೃದಯಘಾತಕ್ಕೊಳಗಾಗಬಹುದು.
ಅನೇಕ ಜನರಿಗೆ ಸೋಮವಾರ ವೆಂದರೆ ಅದು ಒತ್ತಡದ ದಿನ. ಕೆಲಸ ಪ್ರಾರಂಭವಾಯಿತಲ್ಲಾ ಎಂಬ ಒತ್ತಡ ಮತ್ತು ಚಿಂತೆಯಿಂದಲೇ ಆ ದಿನವನ್ನು ಶುರು ಮಾಡುತ್ತಾರೆ. ಅಷ್ಟೇ ಅಲ್ಲದೆ ಜನ ಸಂಚಾರದ ದಟ್ಟನೆ ,ಪ್ರಯಾಣ,ವಾಯು ಮಾಲಿನ್ಯ ಇವೆಲ್ಲವೂ ಹೃದಯದ ಆರೋಗ್ಯವನ್ನು ಸುಸ್ತು ಮಾಡಿಬಿಡುತ್ತದೆ. ಇದರಿಂದ ಮಾನಸಿಕವಾಗಿ ಮಾತ್ರವಲ್ಲದೆ, ಹೃದಯದ ಆರೋಗ್ಯಕ್ಕೆ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದನ್ನು ತಜ್ಞರು ಅಧ್ಯಯನದಿಂದ ಕಂಡುಕೊಂಡಿದ್ದಾರೆ.
ಇದನ್ನು ಓದಿ: Daily Horoscope: ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ, ಮಿಶ್ರ ಫಲಗಳ ಈ ದಿನ ಯಾವ ರಾಶಿಯವರಿಗೆ ಹೇಗಿರಲಿದೆ ?!
Comments are closed.