AN Shamseer: ಮೊದಲ ಪ್ಲಾಸ್ಟಿಕ್‌ ಸರ್ಜರಿ ನಡೆದದ್ದು ಗಣೇಶನಿಗೆ, ರಾವಣನ ಪುಷ್ಪಕ ವಿಮಾನ – ಎಲ್ಲಾ ಮೂಢನಂಬಿಕೆ ಎಂದಿದ್ದ ಸ್ಪೀಕರ್; ಸ್ಪೀಕರ್ ಕ್ಷಮೆ ಕೇಳಲ್ಲ ಎಂದ ಪಕ್ಷ

Latest news AN Shamseer insulted Hindu beliefs in his speech

AN Shamseer: ಕೇರಳ ವಿಧಾನಸಭೆ ಸ್ಪೀಕರ್ ಎ.ಎನ್.ಶಂಸೀರ್(AN Shamseer) ಅವರು ನೀಡಿರುವ ಹಿಂದೂ ನಂಬಿಕೆಗಳನ್ನು ಅವಮಾನಿಸುವ ಭಾಷಣದ ಕುರಿತು ರಾಜ್ಯದಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಈ ಕುರಿತು ಎ.ಎನ್‌.ಶಂಶೀರ್‌ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ. ಬೇಕಿದ್ದರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ(Resign) ನೀಡುತ್ತಾರೆ ಎಂದು ಆಡಳಿತಾರೂಢ ಸಿಪಿಎಂ (CPM) ಹೇಳಿದೆ.

 

ಈ ಕುರಿತು ಹೇಳಿಕೆ ನೀಡಿರುವ ಸಿಪಿಎಂ ನಾಯಕರು, ಸಭಾಪತಿಗಳು ತಮ್ಮ ಹೇಳಿಕೆಯಿಂದ ಯಾವುದೇ ಧರ್ಮದ ಭಾವನೆಗಳನ್ನು ನೋಯಿಸಲು ಬಯಸುವುದಿಲ್ಲ ಮತ್ತು ವೈಜ್ಞಾನಿಕ ಮನೋಧರ್ಮವನ್ನು ಉತ್ತೇಜಿಸಲು ವಿದ್ಯಾರ್ಥಿಗಳನ್ನು ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು. ಆದರೆ ಕಾಂಗ್ರೆಸ್‌ ಹಾಗೂ ಬಿಜೆಪಿ ಇದಕ್ಕೆ ಕೋಮು ಬಣ್ಣ ಲೇಪಿಸಿ ಗಲಭೆ ಸೃಷ್ಟಿಸಿದ್ದಾರೆ. ಕಾಂಗ್ರೆಸ್‌ ತಮ್ಮ ಮೊದಲ ಪ್ರಧಾನಿ ನೆಹರು ಅವರ ತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿದೆ ಎಂದು ಆರೋಪಿಸಿದರು.

ಇತ್ತೀಚೆಗೆ ಎರ್ನಾಕುಲಂ ಜಿಲ್ಲೆಯಲ್ಲಿ ನಡೆದ ಶಾಲಾ ಸಮಾರಂಭದಲ್ಲಿ ಶಂಸೀರ್ ಅವರು ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಧನೆ ಮಾಡುವ ಬದಲು ಹಿಂದೂ ಪುರಾಣಗಳನ್ನು ಕಲಿಸಲಾಗುತ್ತಿದೆ. ವಿಶ್ವದಲ್ಲಿ ಮೊದಲ ಪ್ಲಾಸ್ಟಿಕ್‌ ಸರ್ಜರಿ ನಡೆಸಿದ್ದು ಗಣೇಶನಿಗೆ, ರಾವಣ ಪುಷ್ಪಕ ವಿಮಾನ ಬಳಸುತ್ತಿದ್ದ ಎಂಬುದೆಲ್ಲಾ ಮೂಢನಂಬಿಕೆ. ಇದರ ಬದಲು ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಬೇಕು ಎಂದಿದ್ದಾರೆ.

ವಿಮಾನವನ್ನು ರೈಟ್ ಸಹೋದರರು ಕಂಡುಹಿಡಿದರು, ಆದರೆ ಹಿಂದುತ್ವದ ನಂಬಿಕೆಯುಳ್ಳವರಿಗೆ ಮೊದಲ ವಿಮಾನ ರಾವಣನ ಪುಷ್ಪಕ ವಿಮಾನ ಎಂದು ಸ್ಪೀಕರ್ ಹೇಳಿದರು. ಹಿಂದುತ್ವವಾದಿಗಳು ಪ್ಲಾಸ್ಟಿಕ್ ಸರ್ಜರಿ ಮೂಲಕವೇ ಗಣೇಶನ ಮುಖವನ್ನು ಪಡೆದುಕೊಂಡಿದ್ದಾರೆ. ಅವರು ವಿಜ್ಞಾನದ ಬದಲಿಗೆ ಅಂತಹ ಪುರಾಣಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಸ್ಪೀಕರ್(Kerala speaker AN Shamseer) ಹೇಳಿದರು.

ಬಿಜೆಪಿ, ನಾಯರ್ ಸರ್ವೀಸ್ ಸೊಸೈಟಿ (ಎನ್‌ಎಸ್‌ಎಸ್) ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಂತಹ ಬಲಪಂಥೀಯ ಸಂಘಟನೆಗಳು ಶಂಸೀರ್ ವಿರುದ್ಧ ಬೇಷರತ್ ಕ್ಷಮೆಯಾಚನೆಗೆ ಒತ್ತಾಯಿಸಿ ಅಭಿಯಾನವನ್ನು ಪ್ರಾರಂಭಿಸಿವೆ. ಆದರೆ ಸಿಪಿಎಂ ಪಕ್ಷ ಶಂಸೀರ್ ಅವರ ಹೇಳಿಕೆಗಳ ಕುರಿತು ಸಂಘ ಪರಿವಾರದ ಪ್ರಚಾರವನ್ನು ಖಂಡಿಸಿದೆ.

 

ಇದನ್ನು ಓದಿ: Viral Video: ಪಾತ್ರೆಯೊಳಗೆ ತಲೆ ಸಿಲುಕಿ ಬಾಲಕನ ಪರದಾಟ, ವಿಭಿನ್ನ ರೀತಿಯಲ್ಲಿ ಪಾತ್ರೆ ಕತ್ತರಿಸಿ ತೆಗೆದ ಪೊಲೀಸ್ : ವಿಡಿಯೋ ವೈರಲ್ ! 

Comments are closed.