7th pay commission: ಸರ್ಕಾರಿ ನೌಕರರಿಗೆ ಹೊಡೀತು ಬಂಪರ್ ಲಾಟ್ರಿ ; ಇದೇ ದಿನ ನೋಡಿ ವೇತನ ಹೆಚ್ಚಳ ಅನುಮೋದನೆ !
Latest news 7th Pay Commission DA of central employees and pensioners will increase
7th Pay Commission : ಸರ್ಕಾರಿ ನೌಕರರು ತುಟ್ಟಿಭತ್ಯೆ ಹೆಚ್ಚಳದ (DA hike) ನಿರೀಕ್ಷೆಯಲ್ಲಿದ್ದಾರೆ. ಸದ್ಯ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಜುಲೈ 1 ರಿಂದ ಕೇಂದ್ರ ನೌಕರರು (7th Pay Commission) ಮತ್ತು ಪಿಂಚಣಿದಾರರ ಡಿಎ ಹೆಚ್ಚಾಗಲಿದೆ ಎಂದು ತಿಳಿದುಬಂದಿದೆ. ಇದರಿಂದ ಒಂದು ಕೋಟಿಗೂ ಅಧಿಕ ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಪ್ರಯೋಜನ ದೊರೆಯಲಿದೆ.
ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಸರ್ಕಾರವು ಪ್ರತಿ ವರ್ಷ ಎರಡು ಬಾರಿ ಹೆಚ್ಚಿಸುತ್ತಿದೆ. ಇದನ್ನು ಜನವರಿ 1 ಮತ್ತು ಜುಲೈ 1 ರಿಂದ ಜಾರಿಗೆ ತರಲಾಗುವುದು. ಸರ್ಕಾರದ ಹಣಕಾಸು ಸಚಿವಾಲಯ ಇದನ್ನು ಅನುಮೋದಿಸುತ್ತದೆ.
ಸದ್ಯ ಕಾರ್ಮಿಕ ಸಚಿವಾಲಯವು ಜೂನ್ 2023 ರ AICPI ಸೂಚ್ಯಂಕ ಡೇಟಾವನ್ನು ಬಿಡುಗಡೆ ಮಾಡಿದೆ. ಇದರ ಆಧಾರದ ಮೇಲೆ, ನೌಕರರ ತುಟ್ಟಿಭತ್ಯೆಯಲ್ಲಿ ಬಂಪರ್ ಹೆಚ್ಚಳವಾಗಲಿದೆ.
ಜೂನ್ 2023 ರ AICPI ಸೂಚ್ಯಂಕವು 136.4 ಪಾಯಿಂಟ್‌ಗಳಷ್ಟು ಏರಿಕೆ ಕಂಡಿದೆ. ಮೇ ತಿಂಗಳಲ್ಲಿ ಈ ಅಂಕಿ ಅಂಶವು 134.7 ಅಂಕಗಳಷ್ಟಿತ್ತು. ಅಂದರೆ, ಜೂನ್ ನಲ್ಲಿ 1.7 ಅಂಕಗಳ ಏರಿಕೆ ದಾಖಲಾಗಿದೆ. ಜನವರಿಯಿಂದ ಜುಲೈವರೆಗಿನ ಅಂಕಿಅಂಶಗಳನ್ನು ಆಧರಿಸಿ, ಡಿಎ ಹೆಚ್ಚಳವು ಶೇಕಡಾ 46 ರ ದರದಲ್ಲಿ ಇರಲಿದೆ. ಇದುವರೆಗೆ ನೌಕರರ ತುಟ್ಟಿಭತ್ಯೆ ಶೇ.42ರಷ್ಟಿದ್ದು, ಈಗ ಅದು ಶೇ.46ಕ್ಕೆ ಏರಿಕೆಯಾಗಲಿದೆ.
ಈ ಅಂಕಿ ಅಂಶ ಬಂದ ನಂತರ, ಕೇಂದ್ರ ಉದ್ಯೋಗಿಗಳ ತುಟ್ಟಿಭತ್ಯೆ 46 ಶೇಕಡಾ ದರದಲ್ಲಿ ಘೋಷಿಸಲಾಗುತ್ತದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಸರ್ಕಾರವು ಹೊಸ ತುಟ್ಟಿಭತ್ಯೆಯನ್ನು ಘೋಷಿಸಬಹುದು. ಹೊಸ ತುಟ್ಟಿಭತ್ಯೆಯನ್ನು ಸೆಪ್ಟೆಂಬರ್ ತಿಂಗಳ ವೇತನದಲ್ಲಿಯೇ ಪಾವತಿಸಲಾಗುವುದು. ಆದರೆ, ಇದರೊಂದಿಗೆ ನೌಕರರು ಮತ್ತು ಪಿಂಚಣಿದಾರರಿಗೆ ಮೂರು ತಿಂಗಳ ಬಾಕಿಯನ್ನೂ ನೀಡಲಾಗುವುದು.
ಇದನ್ನು ಓದಿ: Optical Illusion: 10 ಸೆಕೆಂಡ್‌ನಲ್ಲಿ Z ನ ಗುಂಪಿನಲ್ಲಿ ಎಷ್ಟು 7 ಗಳನ್ನು ಮರೆಮಾಡಲಾಗಿದೆ? ಕಂಡು ಹಿಡಿಯುವಿರಾ ಸ್ನೇಹಿತರೇ?
Comments are closed.