Holiday: ಈ ಊರಲ್ಲಿ ಭಾನುವಾರ ಬಂದರೆ ಸಾಕು, ಪ್ರಾಣಿಗಳಿಗೆ ವಿಶೇಷ ಸಂಭ್ರಮ

Sunday is a special celebration for domestic animals in this town

Holiday: ಭಾರತೀಯರಿಗೆ ವಾರ ಪೂರ್ತಿ ಕೆಲಸ ಮಾಡಿ ಸಂಡೇ ರಜೆ ತೆಗೆದುಕೊಂಡು ವಿಶ್ರಾಂತಿ ಪಡೆಯೋದು ವಾಡಿಕೆ. ಅದಲ್ಲದೆ ಭಾನುವಾರ ಭಾರತದ ಜನರಿಗೆ ಸಾಮಾನ್ಯ ರಜಾದಿನವಾಗಿದೆ. ಆದ್ರೆ ಈ ಊರಲ್ಲಿ ಪ್ರಾಣಿಗಳಿಗೂ ಭಾನುವಾರ ರಜಾ ದಿನವಂತೆ.(Holiday)

ಹೌದು, ವಿಶೇಷ ಎಂದರೆ ಈ ಊರಿನಲ್ಲಿರೋ ಹಸು, ಎಮ್ಮೆ, ಗೂಳಿ ಭಾನುವಾರಕ್ಕೆ ಕಾಯುತ್ತವಂತೆ. ಈ ಪ್ರಾಣಿಗಳು ನಮಗಾಗಿ ಹಾಲು ಕೊಡುತ್ತವೆ. ಹೊಲಗಳನ್ನು ಉಳುಮೆ ಮಾಡುತ್ತವೆ. ಅದಕ್ಕೆ ಅವಕ್ಕೂ ಭಾನುವಾರ ರಜೆ ಬೇಕಂತೆ.

ಜಾರ್ಖಂಡ್‌ನ ಲತೇಹರ್ ಗ್ರಾಮದಲ್ಲಿ ಪ್ರಾಣಿಗಳಿಗೆ ಭಾನುವಾರ ರಜೆ ನೀಡುವ ಸಂಪ್ರದಾಯವಿದೆ. ಆ ದಿನ ಜನರು ಪ್ರಾಣಿಗಳ ಹತ್ತಿರ ಹೋಗುವುದಿಲ್ಲ. ಪ್ರಾಣಿಗಳಿಂದ ಯಾವ ಕೆಲಸವನ್ನೂ ಮಾಡಿಸಿಕೊಳ್ಳಲ್ಲ. ಇಡೀ ದಿನ ವಿಶ್ರಾಂತಿ ಇರುತ್ತೆ. ಈ ಸಂಪ್ರದಾಯದ ಆರಂಭದ ಹಿಂದೆ ಒಂದು ಕಥೆಯಿದೆ.

ಬರೋಬ್ಬರಿ ನೂರು ವರ್ಷಗಳ ಹಿಂದೆ, ಹೊಲದಲ್ಲಿ ಕೆಲಸ ಮಾಡುವಾಗ ಒಂದು ಹಸು ಸತ್ತಿತು. ಆ ಹಸು ಎಂದರೆ ಹಳ್ಳಿಯಲ್ಲಿ ಎಲ್ಲರಿಗೂ ಅಚ್ಚು ಮೆಚ್ಚು. ಆದರೆ ಅದರ ಸಾವಿನಿಂದ ಎಲ್ಲರೂ ದುಃಖಿತರಾಗಿದ್ದರು.

ಈ ಪರಿಣಾಮ ಭಾನುವಾರ ಪ್ರಾಣಿಗಳಿಗೆ ರಜೆ ನೀಡಲು ನಿರ್ಧರಿಸಲಾಗಿದೆ. ಅದಲ್ಲದೆ ಲತೇಹಾರ್ ಗ್ರಾಮಕ್ಕೆ ಸಮೀಪವಿರುವ ಹರ್ಖಾ, ಮುಂಗಾರ, ಲಾಲಗಡಿ, ಪಾಕ್ರ್ ಗ್ರಾಮಗಳಲ್ಲೂ ಇದೇ ರೀತಿ ಮಾಡಲಾಗುತ್ತಿದೆ.

 

ಇದನ್ನು ಓದಿ: Good News To Fisherman: ರಾಜ್ಯದ ಮೀನುಗಾರರೇ ಇತ್ತ ಗಮನಿಸಿ, ಸಿಗಲಿದೆ ಸಬ್ಸಿಡಿ ದರದಲ್ಲಿ ಪೆಟ್ರೋಲ್!!!

Leave A Reply

Your email address will not be published.