Conjunctivitis: ಕರ್ನಾಟಕದಲ್ಲಿ ಹೆಚ್ಚಾಯ್ತು ಮದ್ರಾಸ್ ಐ ರೋಗ! ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ!!!
Latest news Conjunctivitis Madras eye disease increased in Karnataka
Conjunctivitis: ರಾಜ್ಯದಲ್ಲಿ ಮದ್ರಾಸ್ ಐ ರೋಗ ಹೆಚ್ಚಾಗಿದೆ. ಪಿಂಕ್ ಐ ಅಥವಾ ಕಾಂಜಂಕ್ಟಿವಿಟಿಸ್ (Conjunctivitis) ಅಥವಾ ಮದ್ರಾಸ್ ಐ ರೋಗ ಎಂದು ಕರೆಯಲ್ಪಡುವ ಈ ಕಾಯಿಲೆ ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತಿದೆ. ಇದರಿಂದಾಗಿ ಪೋಷಕರಲ್ಲಿ ಆತಂಕ ಹೆಚ್ಚಿದ್ದು, ಸದ್ಯ ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟವಾಗಿದೆ.
ಈ ರೋಗ ರಾಜ್ಯದಲ್ಲಿ ದಿನೇ ದಿನೇ ಏರಿಕೆಯಾದ ಹಿನ್ನೆಲೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (Health Department) ಮಾರ್ಗಸೂಚಿ ಹೊರಡಿಸಿದೆ. ಜೊತೆಗೆ ರೋಗದ ಲಕ್ಷಣಗಳು, ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದೆ. ಮಾಹಿತಿ ಈ ಕೆಳಗಿನಂತಿದೆ.
ಮದ್ರಾಸ್ ಐ ರೋಗದ ಲಕ್ಷಣಗಳು :-
ಕಣ್ಣು ಕೆಂಪಾಗುವುದು, ನೀರು ಸೋರುವಿಕೆ, ಅತಿಯಾದ ಕಣ್ಣೀರು,
ಕಣ್ಣಿನಲ್ಲಿ ತುರಿಕೆ, ಸತತ ಕಣ್ಣು ನೋವು ಮತ್ತು ಚುಚ್ಚುವಿಕೆ, ಬೆಳಕನ್ನು ನೋಡಲು ಸಾಧ್ಯವಾಗದೇ ಇರುವುದು, ದೃಷ್ಟಿ ಮಂಜಾಗುವುದು ಹಾಗೂ ಕಣ್ಣಿನ ಎರಡು ರೆಪ್ಪೆಗಳು ಕೀವು ಮಿಶ್ರಿತದಿಂದ ಕೂಡಿರುವ ಲಕ್ಷಣಗಳು ಕಂಡುಬರುತ್ತದೆ.
ಮದ್ರಾಸ್ ಐ ಬರದಂತೆ ತಡೆಗಟ್ಟುವಿಕೆ:-
• ವೈಯಕ್ತಿಕವಾಗಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿ.
• ಆಗಾಗ ಸೋಪು ಹಾಗೂ ನೀರಿನಿಂದ ಕೈಗಳನ್ನು ತೊಳೆಯರಿ.
• ಈ ಸೊಂಕು ಇರುವ ವ್ಯಕ್ತಿಯೊಂದಿಗೆ ಕಣ್ಣಿನ ನೇರ ಸಂಪರ್ಕದಿಂದ ದೂರವಿರಿ.
• ಸೊಂಕಿತ ವ್ಯಕ್ತಿ ಬಳಸಿದ ಕರವಸ್ರ್ತ ಮತ್ತು ಇತರ ವಸ್ತುಗಳನ್ನು ಬಳಸಬೇಡಿ.
• ಶೀತ, ಜ್ವರ, ಕೆಮ್ಮು ಇದ್ದರೆ ಕೂಡಲೇ ಪರೀಕ್ಷಿಸಿ ಚಿಕಿತ್ಸೆ ಪಡೆಯಬೇಕು
• ಮದ್ರಾಸ್ ಐ ಸೋಂಕಿತ ಟವಲ್, ಬಟ್ಟೆಗಳು, ದಿಂಬುಗಳು, ಹೊದಿಕೆ, ಹಾಸುವ ಬಟ್ಟೆಗಳನ್ನು ಪ್ರತ್ಯೇಕವಾಗಿ ಇರಿಸಿ.
ಪಿಂಕ್ ಐ ಹರಡುವುದನ್ನು ತಡೆಯಲು ಕ್ರಮಗಳು :-
• ಈ ಸೊಂಕು ಕಂಡು ಬಂದ ತಕ್ಷಣವೇ ನೇತ್ರ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.
• ಸೋಂಕಿತರು ಕೈಗಳಿಂದ ಪದೇ ಪದೇ ಕಣ್ಣುಗಳನ್ನು ಮುಟ್ಟಬೇಡಿ.
• ಕಣ್ಣುಗಳಿಗೆ ವಿಶ್ರಾಂತಿ ನೀಡುವುದು.
• ಮೊಬೈಲ್ ಹಾಗೂ ಕಂಪ್ಯೂಟರ್ ಪರದೆಯಿಂದ ದೂರವಿರಬೇಕು.
• ಸೂರ್ಯನ ಬೆಳಕಿಗೆ ನೇರವಾಗಿ ಕಣ್ಣುಗಳನ್ನು ಒಡ್ಡಬಾರದು
• ಕಣ್ಣು, ಕೈ, ಮುಖಗಳನ್ನು ಆಗಾಗ ಮುಟ್ಟುತ್ತಿರಬೇಡಿ.