Railway Recruitment : ನೀವು SSLC, ITI ಪಾಸಾಗಿದ್ದೀರಾ? ಹಾಗಾದರೆ ರೈಲ್ವೆ ಇಲಾಖೆಯಲ್ಲಿದೆ ನಿಮಗಾಗಿ ಸಾವಿರಕ್ಕಿಂತಲೂ ಅಧಿಕ ಉದ್ಯೋಗಾವಕಾಶ!

Latest Central Government job news Railway jobs IRCTC recruitment 2023 apply for various post

Railway Recruitment: ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹುದ್ದೆಗಳ ಮಾಹಿತಿ ಹರಿದಾಡುತ್ತಿರುತ್ತದೆ. ಕೆಲವರು ಅರ್ಜಿ ಸಲ್ಲಿಸಿದ್ದರೆ ಇನ್ನೂ ಕೆಲವರು ಸಲ್ಲಿಸಿರೊಲ್ಲ. ಈ ಹುದ್ದೆಗಳು ನಿರುದ್ಯೋಗಿಗಳಿಗೆ ಬಹುಮುಖ್ಯವಾಗಿರುತ್ತದೆ. ಕೆಲಸವಿಲ್ಲದೆ ಅದೆಷ್ಟೋ ಜನ ಅಲೆದಾಡುವವರಿದ್ದಾರೆ. ಹಾಗಂತ ಕೆಲಸ ಇಲ್ಲ ಎಂದೇನಲ್ಲ. ಬಯಸಿದ ಕೆಲಸ ಸಿಗೋದಿಲ್ಲ. ಬಯಸಿರುವ ಕೆಲಸ ಸಿಗೋದಕ್ಕೆ ಶತಪ್ರಯತ್ನವೇ ಬೇಕು ಎಂದರೆ ತಪ್ಪಾಗಲಾರದು. ಸದ್ಯ ನಿರುದ್ಯೋಗಿಗಳಿಗೆ ಸಿಹಿಸುದ್ಧಿ ಇಲ್ಲಿದೆ.

ರೈಲ್ವೆ ಇಲಾಖೆಯು ವಿವಿಧ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ (Railway Recruitment) . ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ಹೆಸರು:
ಟೆಕ್ನಿಷಿಯನ್-|||/AC
ಟೆಕ್ನಿಷಿಯನ್ -|||/TL
ತಂತ್ರಜ್ಞ -|||//TRD
ಟೆಕ್ನಿಷಿಯನ್ -|||//TRS

ಹುದ್ದೆಗಳ ಸಂಖ್ಯೆ – 1016

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 18.07.2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 21-08-2023

ವಿದ್ಯಾರ್ಹತೆ : 10ನೇ ತರಗತಿ, ಐಟಿಐ, ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ: ಗರಿಷ್ಠ ವಯಸ್ಸು 42 ವರ್ಷಗಳು.

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಕೌಶಲ್ಯ ಪರೀಕ್ಷೆ, ಮೆರಿಟ್ ಪಟ್ಟಿ, ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ:
https://www.apprenticeshipindia.gov.in/ ವೆಬ್ ಸೈಟ್ ಗೆ ಭೇಟಿ ನೀಡಿ
• ಫೋಟೋ / ಫೋಟೋದಂತಹ ದಾಖಲೆಗಳನ್ನು, ಪ್ರಮಾಣಪತ್ರಗಳು ಇತ್ಯಾದಿಗಳನ್ನು ಅಪ್ ಲೋಡ್ ಮಾಡಿ.
• ಅರ್ಜಿ ಶುಲ್ಕ ಅನ್ವಯವಾಗಿದ್ದರೆ, ಶುಲ್ಕವನ್ನು ಆನ್ ಲೈನ್ ನಲ್ಲಿ ಭರ್ತಿ ಮಾಡಿ.
• ಫಾರ್ಮ್ ಅನ್ನು ಸಬ್ ಮಿಟ್ ಮಾಡಿ, ಫಾರ್ಮ್ ನ ಪ್ರಿಂಟ್ ಔಟ್
ತೆಗೆದುಕೊಳ್ಳಿ.

ಇದನ್ನೂ ಓದಿ: Gruha lakshmi Scheme: ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆ ಯಜಮಾನಿ ಮೃತಪಟ್ಟಿದ್ರೆ ದುಡ್ಡು ಯಾರ ಕೈಗೆ ಸೇರುತ್ತೆ? ಇಲ್ಲಿದೆ ಉತ್ತರ!!

Leave A Reply

Your email address will not be published.