Home Interesting Chanakya Niti: ಚಾಣಕ್ಯನ ನೀತಿಯ ಈ ಪವರ್ ಫುಲ್ ಮಂತ್ರಗಳನ್ನು ಅಳವಡಿಸಿ, ಸಕ್ಸಸ್ ನಿಮ್ಮ ಕಾಲ...

Chanakya Niti: ಚಾಣಕ್ಯನ ನೀತಿಯ ಈ ಪವರ್ ಫುಲ್ ಮಂತ್ರಗಳನ್ನು ಅಳವಡಿಸಿ, ಸಕ್ಸಸ್ ನಿಮ್ಮ ಕಾಲ ಬುಡದಲ್ಲಿ!!!

Chanakya Niti
Image source: Zee news

Hindu neighbor gifts plot of land

Hindu neighbour gifts land to Muslim journalist

Chanakya Niti: ಜೀವನವನ್ನು ಸರಿಯಾದ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗಲು ಜ್ಞಾನಿಗಳ ಮಾರ್ಗದರ್ಶನ, ಆದರ್ಶ ಮಾತು ನಮಗೆ ದಾರಿ ದೀಪವಾಗುತ್ತದೆ. ಅಂತೆಯೇ, ಆಚಾರ್ಯ ಚಾಣಕ್ಯರ ನೀತಿ (Chanakya Niti) ಶಾಸ್ತ್ರ ಸುಂದರ ಬದುಕು ಮತ್ತು ಯಶಸ್ಸಿಗೆ ನಮಗೆ ದಾರಿ ತೋರಿಸುತ್ತದೆ. ಇನ್ನು ಚಾಣಕ್ಯ ದೇಶ ಕಂಡ ಮಹಾನ್ ವಿದ್ವಾಂಸರಾಗಿದ್ದು, ಅವರ ನೀತಿ-ನಿಯಮಗಳು ನಮ್ಮ ಬದುಕಿಗೆ ಬೇಕಾದ ಎಲ್ಲಾ ಮೌಲ್ಯಗಳನ್ನು ಒದಗಿಸುತ್ತವೆ.

ನೀವು ಸಹ ಜೀವನದಲ್ಲಿ ಯಶಸ್ಸು ಬೇಕು ಅಂತಾ ಬಯಸುತ್ತಿದ್ದರೆ, ಚಾಣಕ್ಯ ಅವರ ನೀತಿ-ನಿಯಮಗಳನ್ನು, ಅವರು ಬದುಕಿಗೆ ಕೊಟ್ಟಿರುವ ಸಲಹೆಗಳನ್ನು ಒಮ್ಮೆ ನೋಡಿ.

ವಿದ್ಯಾವಂತ ವ್ಯಕ್ತಿಗೆ ಎಲ್ಲೆಡೆ ಗೌರವ ಸಿಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ಸೌಂದರ್ಯ ಮತ್ತು ಯೌವನವನ್ನು ಸೋಲಿಸುವ ಶಕ್ತಿ ಶಿಕ್ಷಣಕ್ಕಿದೆ. ಶಿಕ್ಷಣ, ಜ್ಞಾನವನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬುವುದು ಚಾಣಕ್ಯರ ನೀತಿ. ಹೀಗಾಗಿ ನಿಮಗೂ ಯಶಸ್ಸು ಬೇಕು ಎಂದಾದಲ್ಲಿ ಶಿಕ್ಷಣದ ಕಡೆ ನಿಮ್ಮ ಗಮನ ಹೆಚ್ಚಿರಲಿ.

ಚಾಣಕ್ಯ ನೀತಿ ಮೊದಲು ನಮ್ಮಲ್ಲಿರುವ ಸೋಮರಿತನವನ್ನು ತೊಡೆದು ಹಾಕುವಂತೆ ಸಲಹೆ ನೀಡುತ್ತದೆ. ಯಶಸ್ಸು ಬೇಕು ಎಂದರೆ ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು, ಶ್ರಮ ವಹಿಸಬೇಕು. ನಾಳೆ ಮಾಡ್ತೀವಿ, ನಾಡಿದ್ದು ಮಾಡ್ತೀವಿ ಅಂತಾ ಸೋಮಾರಿತನ ಪ್ರದರ್ಶಿಸಬಾರದು ಎನ್ನುತ್ತದೆ ಚಾಣಕ್ಯ ನೀತಿ.

ಒಬ್ಬರನ್ನು ನೋಡಿ ಕಲಿಯುವುದು, ಅವರ ಅನುಭವಗಳಿಂದ ಕಲಿಯುವುದು ಸಾಕಷ್ಟಿರುತ್ತದೆ. ಹಾಗೆಯೇ ನಮ್ಮ ತಪ್ಪುಗಳಿಂದ ಕಲಿಯುವುದರ ಜೊತೆ ಇತರರಿಂದ ಕಲಿಯುವ ದೊಡ್ಡ ಗುಣವನ್ನು ಕೂಡ ನಾವು ಅಳವಡಿಸಿಕೊಳ್ಳಬೇಕು. ಈ ಗುಣ ಒಬ್ಬರನ್ನು ಯಶಸ್ಸಿನ ತುತ್ತತುದಿಗೆ ಕರೆದೊಯ್ಯುತ್ತದೆ ಎಂದು ಚಾಣಕ್ಯ ನೀತಿ ಹೇಳುತ್ತದೆ.

ಇನ್ನು ಹೊಸದಾಗಿ ಏನನ್ನಾದರೂ ಶುರು ಮಾಡುವಾಗ ಕೆಲ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ ಎನ್ನುತ್ತದೆ ಚಾಣಕ್ಯ ನೀತಿ.
ನಾನು ಈ ಕೆಲಸವನ್ನು ಏಕೆ ಮಾಡುತ್ತಿದ್ದೇನೆ?
ಫಲಿತಾಂಶಗಳು ಏನಾಗಿರಬಹುದು?
ನಾನು ಅದರಲ್ಲಿ ಯಶಸ್ವಿಯಾಗಬಹುದೇ?
ಈ ಪ್ರಶ್ನೆಗಳು ನಿಮಗೆ ಕೆಲಸದಲ್ಲಿ ಏಕಾಗ್ರತೆ ವಹಿಸಲು ಮತ್ತು ಯಶಸ್ಸು ಪಡೆಯಲು ಅನುವು ಮಾಡುತ್ತದೆ ಎಂದು ಚಾಣಕ್ಯ ನೀತಿ ಹೇಳುತ್ತದೆ.

ಇನ್ನು ಸಾಲದಲ್ಲಿರುವ ವ್ಯಕ್ತಿಯು ಅವಮಾನವನ್ನು ಎದುರಿಸಬೇಕಾಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ಅದಕ್ಕಾಗಿಯೇ ಒಬ್ಬರು ಸಾಲವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲು ಪ್ರಯತ್ನಿಸಬೇಕು ಮತ್ತು ಸಾಲ ತೆಗೆದುಕೊಂಡರೂ ಬೇಗ ಅದನ್ನು ಮರುಪಾವತಿಸಬೇಕು ಎನ್ನುತ್ತದೆ ಚಾಣಕ್ಯ ನೀತಿ.

ಒಂದೊಮ್ಮೆ ಇಡೀ ಜಗತ್ತು ನಿಮ್ಮನ್ನು ಮತ್ತು ನಿಮ್ಮ ಸಾಮರ್ಥ್ಯವನ್ನು ನಂಬದಿದ್ದರೂ ನಿಮಗೆ ಮಾತ್ರ ನಿಮ್ಮಲ್ಲಿ ನಂಬಿಕೆ ಬೇಕು. ಜತೆಗೆ, ಎಲ್ಲದರಲ್ಲೂ ಧನಾತ್ಮಕತೆಯನ್ನು ಹುಡುಕುವ ಪ್ರಯತ್ನವನ್ನು ಮಾಡಬೇಕು. ಸಕಾರಾತ್ಮಕ ಯೋಚನೆಗಳು ಮನಸ್ಸನ್ನು ಇನ್ನಷ್ಟು ಶುದ್ಧಗೊಳಿಸುತ್ತದೆ. ಆತ್ಮವಿಶ್ವಾಸ ನಿಮ್ಮನ್ನು ಯಶಸ್ಸಿನ ದಡ ಸೇರಿಸುತ್ತದೆ.

ಯಶಸ್ಸಿನ ಹಾದಿಯಲ್ಲಿ ಸಾಗಬೇಕೆಂದಿರುವವರು ಖಂಡಿತಾ ತಾಳ್ಮೆಯಿಂದ ಇರುವುದನ್ನೂ ರೂಢಿಸಿಕೊಳ್ಳಬೇಕು. ಮನಸ್ಸು ಶಾಂತವಾಗಿದ್ದಾಗ ಪರಿಸ್ಥಿತಿಯನ್ನು ನಿಭಾಯಿಸುವುದು ಸುಲಭ. ಜತೆಗೆ, ಕಷ್ಟಕಾಲದಲ್ಲಿಯೂ ಗಾಬರಿಯಾಗದೆ, ಗೊಂದಲಕ್ಕೊಳಗಾದೆ ಇರುವವರು ಜಯ ಸಾಧಿಸುತ್ತಾರೆ ಎನ್ನುವುದನ್ನು ನಾವು ಚಾಣಕ್ಯ ನೀತಿಯಿಂದ ತಿಳಿದುಕೊಳ್ಳಬಹುದು.

ಇದನ್ನೂ ಓದಿ: Karnataka DCET 2023: ಡಿಪ್ಲೊಮ ಸಿಇಟಿ 2023 ಕ್ಕೆ ಅರ್ಜಿ ಆಹ್ವಾನ: ‘ಕೆಇಎ’ ಯಿಂದ ಮಹತ್ವದ ಪ್ರಕಟಣೆ