Home News Sandra Bullock Birthday: ಖ್ಯಾತ ನಟಿಯ ಬರ್ತ್ ಡೇ ಗೆ ಬೆತ್ತಲೆ ವಿಡಿಯೋ ಶೇರ್ ಮಾಡಿದ...

Sandra Bullock Birthday: ಖ್ಯಾತ ನಟಿಯ ಬರ್ತ್ ಡೇ ಗೆ ಬೆತ್ತಲೆ ವಿಡಿಯೋ ಶೇರ್ ಮಾಡಿದ ನಟ! ವಿಡಿಯೋ ವೈರಲ್

Sandra Bullock Birthday
image source: Womans day

Hindu neighbor gifts plot of land

Hindu neighbour gifts land to Muslim journalist

Sandra Bullock Birthday: ಖ್ಯಾತ ಹಾಲಿವುಡ್ ನಟಿ ಸಾಂಡ್ರಾ ಬುಲಕ್ ಹುಟ್ಟುಹಬ್ಬಕ್ಕೆ (Sandra Bullock Birthday) ನಟ ರಯಾನ್ ರೆನಾಲ್ಡ್ಸ್ ಬೆತ್ತಲೆ ವಿಡಿಯೋ ಶೇರ್ ಮಾಡಿ ಶುಭಾಶಯ ಕೋರಿದ್ದು, ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಹೌದು, ಸೆಲೆಬ್ರೆಟಿಗಳ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿಭಿನ್ನವಾಗಿ ಆಚರಿಸುತ್ತಾರೆ. ಇನ್ನು ಚಿತ್ರರಂಗದ ಸ್ನೇಹಿತರು ವಿಶೇಷವಾಗಿ ಶುಭ ಕೋರುತ್ತಾರೆ. ಅಂತೆಯೇ ಸ್ಪೆಷಲ್ ಫೋಟೊ, ವಿಡಿಯೋ ಶೇರ್ ಮಾಡಿ ವಿಶೇಷವಾಗಿ ಕ್ಯಾಪ್ಷನ್ ಕೊಡ್ತಾರೆ. ಇದೀಗ ಜುಲೈ 26 ರಂದು ಸಾಂಡ್ರಾ ಬುಲಕ್ ತಮ್ಮ 59 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಆಕೆಯ 59ನೇ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸಹ ಕಲಾವಿದರು ಮತ್ತು ಸ್ನೇಹಿತರು ಶುಭ ಹಾರೈಸಿದ್ದಾರೆ.

ಸದ್ಯ ಸಾಂಡ್ರಾ ಬುಲಕ್ ಹುಟ್ಟುಹಬ್ಬಕ್ಕೆ ‘ದಿ ಪ್ರಪೋಸಲ್’ ಚಿತ್ರದ ಅಸಭ್ಯಕರ ವಿಡಿಯೋ ಶೇರ್ ಮಾಡಿ ರಯಾನ್ ರೆನಾಲ್ಡ್ಸ್ ಶುಭ ಕೋರಿದ್ದಾರೆ. ಅದರಲ್ಲಿ ಇಬ್ಬರು ಬೆತ್ತಲಾಗಿ ಒಬ್ಬರನ್ನೊಬ್ಬರಯ ತಬ್ಬಿಕೊಳ್ಳುವುದನ್ನು ನೋಡಬಹುದು. ‘ಅಪ್ರತಿಮ ಮತ್ತು ಅದ್ಭುತ ಪ್ರತಿಭೆ ಹೊಂದಿರುವ ಸಾಂಡ್ರಾ ನಿನಗೆ ಹುಟ್ಟುಹಬ್ಬ ಶುಭಾಶಯ” ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್‌ಗೆ ನೆಟ್ಟಿಗರು ಹಲವಾರು ರೀತಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಖ್ಯಾತ ಸಾಂಡ್ರಾ ಅವರು ಬೋಲ್ಡ್ ಆಗಿ ‘ಸಾಂಡ್ರಾ ಸ್ಪೀಡ್’, ‘ಗ್ರಾವಿಟಿ’, ‘ದಿ ಲಾಸ್ಟ್ ಸಿಟಿ;, ‘ದಿ ಪ್ರಪೋಸಲ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. ಅಂತೆಯೇ ‘ದಿ ಪ್ರಪೋಸಲ್’ ಚಿತ್ರದಲ್ಲಿ ರಯಾನ್ ರೆನಾಲ್ಡ್ಸ್ ಹಾಗೂ ಸಾಂಡ್ರಾ ಬುಲಕ್ ಒಟ್ಟಿಗೆ ನಟಿಸಿದ್ದರು.

ಕೇವಲ ಸಹನಟಿ ಎಂಬ ಕಾರಣಕ್ಕೆ, ರಯಾನ್ ರೆನಾಲ್ಡ್ಸ್ ಇಷ್ಟು ಕೆಟ್ಟದಾಗಿ ಬೆತ್ತಲೆ ವಿಡಿಯೋ ಶೇರ್ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋಡುವ ಅಗತ್ಯ ಏನಿತ್ತು? ವೆಸ್ಟರ್ನ್ ಕಲ್ಚರ್ ಆದರೂ ಇದೆಲ್ಲ ಓವರ್ ಆಗಲಿಲ್ಲವೇ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.

https://www.instagram.com/reel/CvKa2BdMQ-H/?utm_source=ig_web_copy_link&igshid=MzRlODBiNWFlZA==

ಇದನ್ನು ಓದಿ: Narendra Modi – Jagan Mohan Reddy : ಮೋದಿ-ಜಗನ್ ; ಬಿಜೆಪಿಗೆ ಆನೆಬಲ- ಕೊನೆಗೂ ಕಾಂಗ್ರೆಸ್ ನಿಂದ ಬೆಂಬಲ!!!