KSRTC BUS: ‘ಸಾಂದರ್ಭಿಕ ಒಪ್ಪಂದ’ದ ಮೇಲೆ ‘KSRTC ಬಸ್’ ಬುಕ್ ಮಾಡುವವರಿಗೆ ಬಿಗ್ ಶಾಕ್: ಕಿ.ಮೀ ದರ ಹೆಚ್ಚಳ ! ಈ ದಿನಾಂಕದಂದು ಜಾರಿ

Latest news free bus big shock to the people who get KSRTC buses on rent

KSRTC BUS: ಬಾಡಿಗೆಗಾಗಿ ಕೆಎಸ್ಆರ್ ಟಿಸಿ ಬಸ್ ಗಳನ್ನು (KSRTC BUS) ಪಡೆಯುವ ಜನರಿಗೆ ಕೆಎಸ್ಆರ್ಟಿಸಿಯು ಬಿಗ್ ಶಾಕ್ ನೀಡಿದೆ. ಸಾಂದರ್ಭಿಕ ಒಪ್ಪಂದದ ಮೇಲೆ ನೀಡುವ ಎಲ್ಲಾ ಮಾದರಿಯ ಬಸ್ ಗಳ ಬಾಡಿಗೆ ದರವನ್ನು ಕೆಸ್ಆರ್ ಟಿಸಿ ಪರಿಷ್ಕರಣೆ ಮಾಡಿದ್ದು, ದರವನ್ನು ಹೆಚ್ಚಳಗೊಳಿಸಿದೆ.

ಮದುವೆ, ಪ್ರವಾಸ, ಶೈಕ್ಷಣಿಕ ಪ್ರವಾಸ ಮತ್ತು ಇತರೆ ಸಭೆ ಸಮಾರಂಭಗಳಿಗೆ ಒಪ್ಪಂದದ ಮೂಲಕ ನೀಡಲಾಗುವ ಎಲ್ಲಾ ಬಸ್ ಗಳ ಬಾಡಿಗೆ ದರವನ್ನು ಕೆಎಸ್ಆರ್ ಟಿಸಿ ಪರಿಷ್ಕರಣೆ ಮಾಡಿದ್ದು, ದರ ಹೆಚ್ಚಿಸಿದೆ.

ಕೆ ಎಸ್ ಆರ್ ಟಿ ಸಿಯು (KSRTC) ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದ್ದು, ಶಕ್ತಿ ಯೋಜನೆ (Shakti scheme) ಅನುಷ್ಠಾನದ ಬಳಿಕ ಸಾಮಾನ್ಯ, ವೇಗದೂತ ಹಾಗೂ ನಗರ ಸಾರಿಗೆ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಹಾಗೂ ನಿಗಮದ ವಾಹನಗಳ ಕಾರ್ಯಾಚರಣಾ ವೆಚ್ಚ ಹೆಚ್ಚಿದೆ. ಹೀಗಾಗಿ, ಸಾಂದರ್ಭಿಕ ಒಪ್ಪಂದದ ಮೇಲೆ ವಿಧಿಸಲಾಗುತ್ತಿರುವ ದರ, ಕಿಲೋಮೀಟರ್ ಮತ್ತು ಷರತ್ತುಗಳ ನಿಬಂಧನೆಯನ್ನು ಪರಿಷ್ಕರಿಸಲಾಗಿದೆ.

ಪರಿಷ್ಕೃತ ದರದಂತೆ ಕರ್ನಾಟಕ ಸಾರಿಗೆ ಸಂಸ್ಥೆಯ 55, 47, 49 ಆಸನಗಳ ಸಂಖ್ಯೆಗಳ ಬಸ್‌ಗಳಿಗೆ ಕನಿಷ್ಠ 350 ಕಿಲೋಮೀಟರ್ ದಿನಕ್ಕೆ ನಿಗದಿಯಂತೆ ರಾಜ್ಯದೊಳಗೆ ರೂ.47 ಅನ್ನು ನಿಗದಿಪಡಿಸಲಾಗಿದೆ. ಅಂತರ್ ರಾಜ್ಯಕ್ಕೆ ಕರೆದೊಯ್ಯುವಂತ ಬಸ್ ಗಳಿಗೆ ರೂ.50 ಅನ್ನು ನಿಗದಿಪಡಿಸಲಾಗಿದೆ.

ರಾಜಹಂಸ ಎಕ್ಸಿಕ್ಯೂಟಿವ್(Rajahamsa executive) 36 ಆಸನಗಳ ಬಸ್ ದರವನ್ನು ರಾಜ್ಯದೊಳಗೆ ಪ್ರತಿ ಕಿಲೋಮೀಟರ್ ಗೆ ರೂ.48, ಅಂತರರಾಜ್ಯಗಳಿಗೆ ರೂ.53 ನಿಗದಿಪಡಿಸಲಾಗಿದೆ. ರಾಜಹಂಸ 39 ಆಸನದ ಬಸ್ಸುಗಳಿಗೆ ದಿನವೊಂದಕ್ಕೆ 350 ಕನಿಷ್ಠ ಕಿ.ಮೀ ನಿಗದಿಪಡಿಸಿ, ಪ್ರತಿ ಕಿಲೋಮೀಟರ್ ಗೆ ರಾಜ್ಯದೊಳಗೆ ರೂ.51, ಅಂತ ರಾಜ್ಯಕ್ಕೆ ರೂ.55 ಅನ್ನು ನಿಗದಿಪಡಿಸಲಾಗಿದೆ. ರಾಜಹಂಸ 12 ಮೀಟರ್ ಚಾಸಿಸ್ 44 ಆಸನಗಳ ಬಸ್ಗಳಿಗೆ 350 ಕನಿಷ್ಠ ಕಿ.ಮೀ ಮಿತಿ ಹೇರಲಾಗಿದೆ. ಪ್ರತಿ ಕಿ.ಮೀಗಳಿಗೆ 53 ರೂ ರಾಜ್ಯದೊಳಗೆ, 57 ರೂ ಹೊರ ರಾಜ್ಯಕ್ಕೆ ನಿಗದಿಪಡಿಸಿದೆ.

ಮೈಸೂರು ನಗರ ಸಾರಿಗೆ ಸೆಮಿ ಲೋಪ್ಲೋರ್ 42 ಆಸನದ ಬಸ್ಸುಗಳಿಗೆ ದಿನವೊಂದಕ್ಕೆ ಕನಿಷ್ಠ 300 ಕಿಲೋಮೀಟರ್
ನಿಗದಿಪಡಿಸಲಾಗಿದೆ. ರಾಜ್ಯದೊಳಗೆ ಪ್ರತಿ ಕಿಲೋಮೀಟರ್ ಗೆ ರೂ.45 ನಿಗದಿ ಪಡಿಸಲಾಗಿದೆ. ಮಿಡಿ ಬಸ್ಸುಗಳಿಗೆ ಪ್ರತಿ ಕಿಲೋಮೀಟರ್ ಗೆ ರೂ.40 ನಿಗದಿಪಡಿಸಲಾಗಿದೆ.

ನಾನ್ ಎಸಿ ಸ್ಲಿಪರ್ 32 ಆಸನದ ಬಸ್ಸುಗಳಿಗೆ ದಿನಕ್ಕೆ ಕನಿಷ್ಠ 400 ಕಿಲೋಮೀಟರ್ ನಿಗದಿಪಡಿಸಿ, ರಾಜ್ಯದೊಳಗೆ ಪ್ರತಿ ಕಿಲೋಮೀಟರ್ ಗೆ ರೂ.55, ಅಂತರ್ ರಾಜ್ಯಕ್ಕೆ 60 ರೂ ನಿಗದಿ ಪಡಿಸಲಾಗಿದೆ. ಇನ್ನೂ ಮೈಸೂರು ಗಂಟೆಗಳ ಆಧಾರದಲ್ಲಿ ವಾಹನಗಳನ್ನು ಒದಗಿಸುವ ವ್ಯವಸ್ಥೆಯನ್ನು ರದ್ದುಪಡಿಸಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಜಾರಿಗೊಳಿಸಿರುವಂತಹ ಪರಿಷ್ಕೃತ ದರಗಳು ಆಗಸ್ಟ್.1 ರಿಂದ ಜಾರಿಗೆ ಬರಲಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸುತ್ತೋಲೆಯಲ್ಲಿ ತಿಳಿಸಿದೆ

Leave A Reply

Your email address will not be published.