Home Karnataka State Politics Updates Fishcurry in Mid day meal: ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ; ಇನ್ಮುಂದೆ ಸರ್ಕಾರಿ...

Fishcurry in Mid day meal: ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ; ಇನ್ಮುಂದೆ ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಲಿದೆ ಬಿಸಿಯೂಟದಲ್ಲಿ ಮೀನು ಸಾರು !

Fishcurry in Mid day meal
image source: Tv 9 kannada

Hindu neighbor gifts plot of land

Hindu neighbour gifts land to Muslim journalist

Fishcurry in Mid day meal: ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟದ ಜೊತೆಗೆ ಮೀನು ಸಾರು (Fishcurry in Mid day meal) ಸೇರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. ಈ ಕುರಿತು ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದು, ಪ್ರತಿ ವಿದ್ಯಾರ್ಥಿಗೆ ಎಷ್ಟು ಗ್ರಾಂ ಮಾಂಸ ಬೇಕು, ಎಷ್ಟು ಮೀನು ನೀಡಬೇಕು, ವಾರದಲ್ಲಿ ಎಷ್ಟು ದಿನ ನೀಡಬೇಕು, ನಿಧಿ ಸಂಗ್ರಹಿಸುವ ಕುರಿತು ಕಾರ್ಯ ಯೋಜನೆ ಹಾಕಿಕೊಂಡಿದ್ದಾರೆ.

ರಾಜ್ಯದ ಶಾಲಾ ಮಕ್ಕಳಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸುವ ಸಲುವಾಗಿ ಈಗಾಗಲೇ, ಬಿಸಿಯೂಟದ (mid day meal) ಜೊತೆಗೆ ಕೋಳಿ (chicken),ಮೊಟ್ಟೆ (egg) ನೀಡಲಾಗುತ್ತಿದೆ. ಜೊತೆಗೆ ಬಾಳೆಹಣ್ಣು, ಚಿಕ್ಕಿ, ಬೇಳೆ ಸಾರು ಸೇರಿದಂತೆ ಇತರ ಪೌಷ್ಠಿಕಾಂಶಯುಕ್ತ ಆಹಾರವನ್ನು ಕರ್ನಾಟಕ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಶಾಲಾ ಮಕ್ಕಳಿಗೆ ಬಿಸಿಯೂಟದಲ್ಲಿ ನೀಡಲಾಗ್ತಿದೆ.

ಸರ್ಕಾರಿ ಶಾಲೆಗಳಿಗೆ (Government school) ಅರ್ಧಕ್ಕಿಂತಲೂ ಹೆಚ್ಚು ಪಾಲು ಬಡವರು ಮತ್ತು ಮಧ್ಯಮ ವರ್ಗದ ಮಕ್ಕಳು ಬರುತ್ತಾರೆ. ಹೀಗಾಗಿ ಆ ಮಕ್ಕಳ ದೇಹದಲ್ಲಿ ಪೌಷ್ಠಿಕಾಂಶ ಹೆಚ್ಚಿಸುವ ಉದ್ದೇಶದಿಂದ, ಮಕ್ಕಳಿಗೆ ಬಿಸಿಯೂಟದ ಜೊತೆಗೆ ಮೀನಿನ ಸಾರು ನೀಡಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂಬ ಅಂಶ ತಿಳಿದು ಬಂದಿದೆ. ಆದರೆ, ಈ ಯೋಜನೆ ಸದ್ಯ ಚರ್ಚೆಯಲ್ಲಿರೋದು ಕರ್ನಾಟಕದಲ್ಲಿ(Karnataka) ಅಲ್ಲ, ಬದಲಿಗೆ ತೆಲಂಗಾಣದಲ್ಲಿ.

ಹೌದು, ತೆಲಂಗಾಣ ರಾಜ್ಯ ಸರ್ಕಾರವು(Telangana government) ಶಾಲಾ ಮಕ್ಕಳ ಪೌಷ್ಠಿಕತೆ ಹೆಚ್ಚಳ ಮಾಡಲು ರಾಜ್ಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದ (Government school Mod day meal scheme) ಜತೆ ಮೀನು ಸಾರು (fish curry) ಸೇರಿಸಬೇಕೆಂಬ ಯೋಜನೆಗೆ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ತೆಲಂಗಾಣ ಸರ್ಕಾರ ಸಾರ್ವಜನಿಕ ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಜೊತೆಗೆ ರಾಗಿ ಜಾವ, ಅನ್ನ ಮತ್ತು ಕೋಳಿ ಮೊಟ್ಟೆ ನೀಡಲಾಗುತ್ತಿದೆ. ಇದರ ಜೊತೆ ಮೀನಿನ ಕರಿ ಸೇರಿಸಬೇಕೆಂಬ ಯೋಜನೆಯನ್ನು ರೂಪಿಸುತ್ತಿದೆ.

ಈ ಬಗ್ಗೆ ಸರಕಾರಿ ಅಂಗನವಾಡಿ ಶಾಲೆ ಮುಖ್ಯಶಿಕ್ಷಕ ಶ್ರೀನಿವಾಸ ಮಾತನಾಡಿದ್ದು, ಈ ಯೋಜನೆ ಪೂರ್ಣಗೊಂಡ ಬಳಿಕ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಆದಾಗ್ಯೂ, ಆಯ್ದ ಶಾಲೆಗಳಲ್ಲಿ ಡಿಜಿಟಲ್ ತರಗತಿಗಳನ್ನು(Digital classes) ಪ್ರಾರಂಭಿಸುವ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

 

ಇದನ್ನು ಓದಿ: Crime News: ಮಹಿಳೆಯ ಮನೆಯಲ್ಲಿ 1 ಲಕ್ಷ ಜಿರಳೆಗಳು, 118 ಮೊಲಗಳು ; ಕೊನೆಗೂ ಅರೆಸ್ಟ್ ಆದ ಖತರ್ನಾಕ್ ಲೇಡಿ !