Home News Viral video: ಗೆಳೆಯನ ಜೊತೆ ಸುತ್ತಾಡ್ತಿದ್ದಾಗಲೇ ಪತಿಯ ಕೈಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಪತ್ನಿ ;...

Viral video: ಗೆಳೆಯನ ಜೊತೆ ಸುತ್ತಾಡ್ತಿದ್ದಾಗಲೇ ಪತಿಯ ಕೈಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಪತ್ನಿ ; ಮುಂದೇನಾಯ್ತು ಅನ್ನೋದು ವಿಡಿಯೋದಲ್ಲಿದೆ ನೋಡಿ !

Viral video

Hindu neighbor gifts plot of land

Hindu neighbour gifts land to Muslim journalist

Viral video: ಮಹಿಳೆಯೋರ್ವಳು ತನ್ನ ಪತಿಯ ಜೊತೆಗೆ ಸುತ್ತಾಡೋದನ್ನು ಬಿಟ್ಟು ಗೆಳೆಯನೊಂದಿಗೆ ಕೈಕೈ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಸುತ್ತಾಡಿದ್ದಾಳೆ. ಈ ರೀತಿ ಸುತ್ತಾಡಿ ಆಕೆ ಪತಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಜನಜಂಗುಳಿಯಲ್ಲೇ ಪತಿ-ಪತ್ನಿ ಜಗಳಕ್ಕಿಳಿದಿರುವ
ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral video) ಆಗಿದೆ.

ಮಾಲ್ ಒಂದರಲ್ಲಿ ಮಹಿಳೆ ಹಾಗೂ ಆಕೆಯ ಪ್ರಿಯತಮ ಕೈಕೆ ಹಿಡಿದುಕೊಂಡು ಸಾಗುತ್ತಿರೋದು ವಿಡಿಯೋದಲ್ಲಿ ಕಾಣಬಹುದು. ಅವರ ಹಿಂದೆಯೇ ಪತಿಯೂ ಬರುತ್ತಿದ್ದಾನೆ. ಪತಿ ಆಕೆಯನ್ನು ಅನೇಕ ದಿನಗಳಿಂದ ಅವಳನ್ನು ಹಿಂಬಾಲಿಸುತ್ತಿದ್ದಾನೆ. ಆದರೆ, ಸದ್ಯ ಪತ್ನಿ ಪತಿಯ ಮುಂದೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾಳೆ.

ವಿಪರ್ಯಾಸ ಏನೆಂದರೆ ಪತಿ-ಪತ್ನಿ ಇಬ್ಬರೂ ಪ್ರೀತಿಸಿ, ಓಡಿ ಹೋಗಿ ಮದುವೆಯಾಗಿದ್ದರು. ಆದರೆ, ಇದೀಗ ಆತನ ಪತ್ನಿ ಬೇರೊಬ್ಬನ ಜೊತೆಗೆ ಸುತ್ತಾಡುತ್ತಿದ್ದಾಳೆ. ಗೆಳೆಯನೊಂದಿಗೆ ಸುತ್ತಾಡುವಾಗ ಪತಿಯನ್ನು ಕಂಡು ಆಶ್ಚರ್ಯ ಗೊಂಡ ಆಕೆ ಈತ ಗೆಳೆಯ ಅಷ್ಟೇ ಎಂದು ಸಮಜಾಯಿಷಿ ನೀಡುತ್ತಾಳೆ. ಆದರೆ, ಇದನ್ನೊಪ್ಪದ ಪತಿ
ಅವಳಿಗೆ ಬೈಯಲು ಶುರು ಮಾಡುತ್ತಾನೆ. ಇಷ್ಟು ವರ್ಷಗಳ ಕಾಲ ಪ್ರೀತಿಸಿ (Love) ಮದುವೆಯಾದರೂ, ನನಗೂ ನನ್ನ ಮನೆಯವರಿಗೂ ಈ ರೀತಿ ಮೋಸ ಮಾಡಿದೆಯಲ್ಲ ಎಂದು ಬೇಸರದಿಂದ ಕಿರುಚುತ್ತಾನೆ.

ತನ್ನ ಜೀವನವನ್ನು ನರಕವನ್ನಾಗಿ ಮಾಡಿದ್ದಕ್ಕಾಗಿ ಅವಳನ್ನು ದೂಷಿಸುತ್ತಾನೆ. ಕೊನೆಗೆ ಡಿವೋರ್ಸ್ ನೀಡುವುದಾಗಿ ಹೇಳುತ್ತಾನೆ.
ಈ ವೇಳೆ ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿರುವುದನ್ನು ಕಂಡ ಮಹಿಳೆ ಕೋಪಗೊಂಡು ಜೋರಾಗಿ ಕೂಗುತ್ತಾ ಅವನಿಗೆ ಹೊಡೆಯಲು ಯತ್ನಿಸುತ್ತಾಳೆ. ವಿಡಿಯೋ ಆಗುತ್ತಿದ್ದ ಗಂಡನ ಮೊಬೈಲ್​ ಕಿತ್ತುಕೊಂಡು ಗಂಡನ ಮೇಲೆ ಹಲ್ಲೆ ಮಾಡಲು ಯತ್ನಿಸುತ್ತಾಳೆ. ತಕ್ಷಣವೇ ಸ್ಥಳದಲ್ಲಿ ಜನರು ಸೇರಿ ಇಬ್ಬರನ್ನೂ ಸಮಾಧಾನಪಡಿಸಲು ಯತ್ನಿಸಿದರು. ಆದರೆ, ಪ್ರಯತ್ನ
ವಿಫಲವಾಗಿ ದಂಪತಿಗಳು ಎರಡನೇ ವ್ಯಕ್ತಿಯೊಂದಿಗೆ ಪೊಲೀಸ್ ಠಾಣೆಗೆ ಮೆಟ್ಟಿಲೇರಿದ್ದಾರೆ ಎನ್ನಲಾಗಿದೆ.

 

 

ಇದನ್ನು ಓದಿ: Richest Actors: ದಕ್ಷಿಣದ ಶ್ರೀಮಂತ ನಟ ಯಾರು ಗೊತ್ತಾ?! ಟಾಪ್ ಐದು ಶ್ರೀಮಂತ ಹೀರೋಗಳ ಲಿಸ್ಟ್ ಇಲ್ಲಿದೆ