Kerala Temple: ಸೀರೆಯುಟ್ಟ ಪುರುಷರಿಗೆ ಮಾತ್ರ ಈ ದೇವಾಲಯಕ್ಕೆ ಸಿಗುತ್ತೆ ಎಂಟ್ರಿ..!
Latest news Kerala Temple Only men wearing saree can enter this temple
Kerala Temple: ನಾವು ದೇವರನ್ನು ಪೂಜಿಸುವ ವಿಧಾನ ಬೇರೆ ಬೇರೆ ಆಗಿದ್ದರು ನಮ್ಮಲ್ಲಿರುವ ಭಕ್ತಿ ಒಂದೇ. ಅಂತೆಯೇ ಎಲ್ಲಾ ದೇವಾಲಯಗಳ ನಿಯಮಗಳು ಒಂದೇ ರೀತಿ ಇರುವುದಿಲ್ಲ. ಪ್ರತಿಯೊಂದು ದೇವಾಲಯಗಳು (Kerala Temple ) ತಮ್ಮದೇ ಆದ ನಿಯಮಗಳನ್ನು ಪಾಲಿಸುತ್ತದೆ. ಕೆಲವು ದೇವಾಲಯಗಳಿಗೆ ಹೋಗುವಾಗ ಪುರುಷರು ಮೇಲಂಗಿಯನ್ನು ಧರಿಸಬಾರದು, ಮಹಿಳೆಯರಿಗೆ ಪ್ರವೇಶವಿಲ್ಲ ಎಂಬ ಇತರ ನಿಯಮಗಳು ಕೆಲವು ದೇವಾಲಯಗಳಲ್ಲಿದೆ.
ವಿಶೇಷ ಎಂದರೆ ಪುರುಷರಿಗೆ ಪ್ರವೇಶವಿಲ್ಲದ ದೇವಾಲಯವೂ ಸಹ ನಮ್ಮ ದೇಶದಲ್ಲಿದೆ. ಈ ದೇವಾಲಯದಲ್ಲಿ ಪೂಜೆ ಮಾಡಲು ಸ್ತ್ರೀಯರಿಗೆ ಮತ್ತು ಮಂಗಳಮುಖಿಯರಿಗೆ ಯಾವುದೇ ನಿರ್ಬಂಧವಿಲ್ಲ, ಆದರೆ ಪುರುಷರು ಈ ದೇವಾಲಯದಲ್ಲಿ ಪೂಜೆ ಮಾಡಬೇಕಾದರೆ, ಮಹಿಳೆಯರಂತೆ ಅಲಂಕಾರವನ್ನು ಮಾಡಿಕೊಂಡು ಬರಬೇಕೆನ್ನುವ ನಿಯಮವಿದೆ.
ಸ್ಥಳೀಯ ದಂತಕಥೆಗಳ ಮಾಹಿತಿ ಪ್ರಕಾರ, ಹಲವು ವರ್ಷಗಳ ಹಿಂದೆ ಈ ಸ್ಥಳದಲ್ಲಿ ಕೆಲವು ಕುರುಬರು ಮಹಿಳೆಯರ ಉಡುಪುಗಳನ್ನು ಧರಿಸಿ ಕಲ್ಲಿಗೆ ಹೂವುಗಳನ್ನು ಅರ್ಪಿಸಿ ಪೂಜೆಯನ್ನು ಮಾಡಿದರೆನ್ನುವ ನಂಬಿಕೆಯಿದೆ. ನಂತರ ಆ ಕಲ್ಲಿನಿಂದ ದೈವಿಕ ಶಕ್ತಿ ಹೊರಹೊಮ್ಮಲು ಪ್ರಾರಂಭಿಸಿತು. ಇದಾದ ನಂತರ ಅದಕ್ಕೆ ದೇವಸ್ಥಾನದ ರೂಪ ನೀಡಲಾಯಿತು. ಅಂದಿನಿಂದ ಇಂದಿನವರೆಗೂ ಇಲ್ಲಿ ಪೂಜೆ – ಪುನಸ್ಕಾರಗಳು ನಡೆಯುತ್ತದೆ.
ಈ ದೇವಾಲಯ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಕೊಟ್ಟಂಕುಳಂಗರ ದೇವಿ ದೇವಸ್ಥಾನವಿದ್ದು ಇಲ್ಲಿ ಪ್ರತಿ ವರ್ಷ ಚಾಮ್ಯವಿಳಕ್ಕು ಉತ್ಸವವನ್ನು ಆಚರಿಸಲಾಗುತ್ತದೆ. ಈ ಉತ್ಸವಕ್ಕೆ ಪ್ರತಿ ವರ್ಷ ಸಾವಿರಾರು ಪುರುಷ ಭಕ್ತರು ಆಗಮಿಸುತ್ತಾರೆ. ಆದರೆ, ಈ ಸಂದರ್ಭದಲ್ಲಿ ಪುರುಷರು ಪುರುಷರಂತೆ ದೇವಾಲಯವನ್ನು ಪ್ರವೇಶಿಸಲು ಸಾಧ್ಯವಿಲ್ಲ.
ಪುರುಷರು ದೇವಾಲಯವನ್ನು ಪ್ರವೇಶಿಸಲು, ಮಹಿಳೆಯರ ಉಡುಪುಗಳನ್ನು ಧರಿಸಬೇಕು ಮತ್ತು ಅವರಂತೆ ಷೋಡಶ ಅಲಂಕಾರ ಅಂದರೆ 16 ರೀತಿಯ ಮೇಕಪ್‌ಗಳನ್ನು ಮಾಡಿಕೊಂಡು ಮಹಿಳೆಯ ರೂಪವನ್ನು ಪಡೆಯಬೇಕು. ಇದಾದ ನಂತರವೇ ಅವರು ದೇವಸ್ಥಾನಕ್ಕೆ ಹೋಗಬಹುದು. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಸ್ತ್ರೀಯರ ಉಡುಪುಗಳನ್ನು ಧರಿಸುವುದು ಕಡ್ಡಾಯ. ಅದಕ್ಕಾಗಿಯೇ ದೇವಾಲಯದಲ್ಲಿ ಅವರಿಗಾಗಿ ಪ್ರತ್ಯೇಕ ಮೇಕಪ್ ರೂಂನ್ನು ಆಯೋಜಿಸಲಾಗುತ್ತದೆ. ಅಲ್ಲಿ ಪುರುಷರು ಮಹಿಳೆಯರಂತೆ ಸರಿಯಾಗಿ ಡ್ರೆಸ್ ಮಾಡಿಕೊಳ್ಳಬಹುದಾಗಿದೆ. ಪುರುಷರು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಅವರು ತಮ್ಮ ಹೆಂಡತಿ, ಸಹೋದರಿ ಅಥವಾ ತಾಯಿಯ ಸಹಾಯವನ್ನು ಸಹ ತೆಗೆದುಕೊಳ್ಳಬಹುದು. ಅವರು ತಮ್ಮೊಂದಿಗೆ ಇತರ ಪುರುಷರ ಸಹಾಯವನ್ನು ಸಹ ತೆಗೆದುಕೊಳ್ಳಬಹುದು.
ವಿಶೇಷ ಸಂಪ್ರದಾಯ ಮತ್ತು ನಂಬಿಕೆಗಳಿಗೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಈ ದೇವಾಲಯವು ಯಾವುದೇ ರೀತಿಯ ಛಾವಣಿಯನ್ನು ಹೊಂದಿಲ್ಲ. ಗರ್ಭಗುಡಿಯ ಮೇಲೆ ಮೇಲ್ಛಾವಣಿ ಅಥವಾ ಕಲಶವಿಲ್ಲದ ರಾಜ್ಯದ ಏಕೈಕ ದೇವಾಲಯ ಇದಾಗಿದೆ. ದೇವಾಲಯದ ಮೇಲೆ ಮೇಲ್ಛಾವಣಿ ನಿರ್ಮಿಸಿದರೆ ಅಶುಭ ಎಂದು ನಂಬಲಾಗಿದೆ, ಅದಕ್ಕಾಗಿಯೇ ದೇವಾಲಯದ ಛಾವಣಿಯನ್ನು ಮಾಡಲಾಗಿಲ್ಲ.
ಈ ದೇವಾಲಯದಲ್ಲಿ ಪುರುಷರು ಮತ್ತು ಮಹಿಳೆಯರಲ್ಲದೆ, ಮಂಗಳಮುಖಿಯರು ಕೂಡ ಪೂಜೆಗೆ ಬರುತ್ತಾರೆ. ಈ ದೇವಾಲಯದಲ್ಲಿ ಸ್ಥಾಪಿಸಲಾದ ದೇವಿಯ ವಿಗ್ರಹವು ಸ್ವಯಂಭು ವಿಗ್ರಹ ಎನ್ನುವ ನಂಬಿಕೆಯಿದೆ.
ಈ ಕೊಟ್ಟಂಕುಳಂಗರ ದೇವಿ ದೇವಸ್ಥಾನವು ಕೇರಳದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಪ್ರತಿ ವರ್ಷ ಮಾರ್ಚ್ 23 ಮತ್ತು 24ರಂದು ಚಾಮ್ಯವಿಳಕ್ಕು ಉತ್ಸವವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಹೆಣ್ಣಿನ ವೇಷ ಧರಿಸಿ ದೇವಿಯನ್ನು ಪೂಜಿಸುವುದರಿಂದ ಒಳ್ಳೆಯ ಉದ್ಯೋಗ ದೊರೆಯುತ್ತದೆ ಮತ್ತು ಸುಂದರ ಪತ್ನಿ ದೊರೆಯುತ್ತಾಳೆ ಎಂಬುದು ಸ್ಥಳೀಯ ನಂಬಿಕೆ. ಈ ಕಾರಣಕ್ಕಾಗಿಯೇ ಈ ಹಬ್ಬದಲ್ಲಿ ದೇಶ ವಿದೇಶಗಳಿಂದ ಸಾವಿರಾರು ಪುರುಷರು ಇಲ್ಲಿಗೆ ಬಂದು ಸ್ತ್ರೀಯರ ವೇಷ ಧರಿಸಿ ದೇವಿಯನ್ನು ಪೂಜಿಸುತ್ತಾರೆ. ನೀವೂ ಈ ದೇವಾಲಯಕ್ಕೆ ಭೇಟಿ ನೀಡುವುದಾದರೆ ಮಹಿಳೆಯರಂತೆ ಅಲಂಕಾರ ಮಾಡಿಕೊಂಡು ಹೋಗಬೇಕು.
ಇದನ್ನು ಓದಿ: Viral News: ರಾತ್ರಿಯೆಲ್ಲಾ ಕ್ಯಾಬ್ ನಲ್ಲಿ ಮಹಿಳೆಯ ಸುತ್ತಾಟ ; ಬೆಳಗಾದರೆ ಬಿಲ್ ಕೊಡಲು ಕ್ಯಾತೆ !