Home Karnataka State Politics Updates Putin warns Poland: ಅವರನ್ನು ಮುಟ್ಟಿದ್ರೆ ನಮ್ಮನ್ನು ಮುಟ್ಟಿದಂತೆ: ರಷ್ಯಾ ಅಧ್ಯಕ್ಷ ಪುಟಿನ್ ವಾರ್ನಿಂಗ್!

Putin warns Poland: ಅವರನ್ನು ಮುಟ್ಟಿದ್ರೆ ನಮ್ಮನ್ನು ಮುಟ್ಟಿದಂತೆ: ರಷ್ಯಾ ಅಧ್ಯಕ್ಷ ಪುಟಿನ್ ವಾರ್ನಿಂಗ್!

Putin warns Poland
Image source: Zee news

Hindu neighbor gifts plot of land

Hindu neighbour gifts land to Muslim journalist

Putin warns Poland: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russia President Vladimir Putin) ಮಿತ್ರ ರಾಷ್ಟ್ರವಾದ ಬೆಲಾರಸ್ (Belarus) ಮೇಲಿನ ಯಾವುದೇ ದಾಳಿಯನ್ನು ರಷ್ಯಾದ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ ಎಂದು ಪೋಲೆಂಡ್‌ಗೆ (poland) ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇದೀಗ ಪುಟಿನ್ ನೇರವಾಗಿ ಬೆಲಾರಸ್ ಪರ ಅಖಾಡ ಪ್ರವೇಶಿಸಿದ್ದು, ಬೆಲಾರಸ್‌ನ ಮುಟ್ಟಿದರೆ ನಮ್ಮ ಮೇಲೆ ಆಕ್ರಮಣ ಮಾಡಿದಂತೆ ಎಂದು ಪೋಲ್ಯಾಂಡ್‌ಗೆ ಖಡಕ್ ಎಚ್ಚರಿಕೆ (Warning) ನೀಡಿದ್ದಾರೆ.

ರಷ್ಯಾ ಖಾಸಗಿ ಸೇನೆ ಬಂಡಾಯ ಎದ್ದು ಗಲಾಟೆ ಮಾಡಿದಾಗ ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ (Aleksandr lukashenko) ಮಧ್ಯಪ್ರವೇಶಿಸಿ ಸಮಾಧಾನ ಮಾಡಿದ್ದರು. ಇದರಿಂದಾಗಿ ಸಮಸ್ಯೆ ಬಗೆಹರಿದಿತ್ತು. ಆದರೆ ಈಗ ಇದೇ ಕಾರಣಕ್ಕೆ ಬೆಲಾರಸ್ ಟಾರ್ಗೆಟ್ ಅಗಿದೆ ಎಂಬ ಆರೋಪ ಕೇಳಿಬಂದಿದೆ. ಬೆಲಾರಸ್‌ನಲ್ಲಿ ರಷ್ಯಾದ ಖಾಸಗಿ ಸೈನಿಕರು ಕವಾಯತು ನಡೆಸುತ್ತಿದ್ದಾರೆ ಎಂದು ಪೋಲ್ಯಾಂಡ್ ಆರೋಪಿಸುತ್ತಿದೆ. ಇದರಿಂದ ರೊಚ್ಚಿಗೆದ್ದ ಪುಟಿನ್‌, ತನ್ನ ಮಿತ್ರರಾಷ್ಟ್ರದ ತಂಟೆಗೆ ಬರಬಾರದೆಂದು, ವಾರ್ನಿಂಗ್ (Putin warns Poland) ನೀಡಿದ್ದಾರೆ.

ಈಗಾಗಲೇ ರಷ್ಯಾ, ಬೆಲಾರಸ್ ಗಡಿಗೆ ಭಾರಿ ಪ್ರಮಾಣದ ಪಡೆಗಳನ್ನು ಕಳುಹಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ತನ್ನ ಪರಮಾಣು ಅಸ್ತ್ರಗಳನ್ನ ಬೆಲಾರಸ್ ಗಡಿ ಭಾಗದಲ್ಲಿ ಸಿದ್ಧವಾಗಿ ನಿಲ್ಲಿಸಿದೆ. ಇದೇ ಸಂದರ್ಭದಲ್ಲಿ ಪೋಲ್ಯಾಂಡ್ ಕೂಡ ಬೆಲಾರಸ್ ಗಡಿಗೆ ಸೇನೆ ಕಳುಹಿಸುತ್ತಿದೆ ಎನ್ನಲಾಗಿದೆ.

ಸಣ್ಣ ಜಗಳವಾಗಿದ್ದ ರಷ್ಯಾ ಮತ್ತು ಉಕ್ರೇನ್ ಯುದ್ಧವು ಇದೀಗ ಜಗತ್ತೇ ಬೆಚ್ಚಿ ಬೀಳುವಂತಹ ಭೀಕರ ಯುದ್ಧವಾಗುತ್ತಿದೆ. ಅದರಲ್ಲೂ ಒಂದು ಕಡೆ ಪಾಶ್ಚಿಮಾತ್ಯರು ಹಾಗೇ ಇನ್ನೊಂದು ಕಡೆ ರಷ್ಯಾ ನಡುವೆ ಘನಘೋರ ಯುದ್ಧ ಶುರುವಾಗಿದೆ. ಇದೀಗ ರಷ್ಯಾ ಮತ್ತು ಉಕ್ರೇನ್ ಯುದ್ಧದ ಬೆಂಕಿ ಹೊತ್ತಿ ಉರಿಯುತ್ತಿರುವ ನಡುವೆ , ಪೋಲ್ಯಾಂಡ್ (Poland) ಮತ್ತು ಬೆಲಾರಸ್ ನಡುವೆ ಕಿರಿಕ್ ಶುರುವಾಗಿದ್ದೂ, ಹೊಸ ಗಲಾಟೆ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ.

 

ಇದನ್ನು ಓದಿ: Daily Horoscope: ವ್ಯಾಪಾರ ವ್ಯವಹಾರಗಳಲ್ಲಿ ಹಿರಿಯರ ಸಲಹೆ ತೆಗೆದುಕೊಳ್ಳುವುದು, ಪುಣ್ಯಕ್ಷೇತ್ರಗಳಿಗೆ ಭೇಟಿ ಲಾಭ ಈ ರಾಶಿಯವರಿಗೆ!