Yelahanka: ಟೊಮ್ಯಾಟೋ ಆಸೆಗೆ ಬೊಲೆರೋ ಕದ್ದೊಯ್ದ ಖದೀಮರು, ಕೊನೆಗೆ ಟೊಮ್ಯಾಟೋ ಅಪ್ಪಚ್ಚಿ ಹೇಗಾಯ್ತು ?

Latest news tomato news Yelahanka news Thieves stole bolero for tomato desire

Yelahanka: ಕಳ್ಳರು ಸಮಯಕ್ಕೆ ತಕ್ಕಂತೆ ಬದಲಾಗುತ್ತಾರೆ. ಸದ್ಯಕ್ಕೆ ಟೊಮೆಟೊ (Tomato) ಬೆಲೆ ಏರಿಕೆಯನ್ನು ಗಮನದಲ್ಲಿಟ್ಟು ಕಳ್ಳರು ಟೊಮೆಟೊ ಕಳ್ಳತನಕ್ಕೆ ಇಳಿದಿದ್ದಾರೆ. ಹೌದು, ಈಗಾಗಲೇ ಯಲಹಂಕ(Yelahanka) ಬಳಿಯ ಚಿಕ್ಕಜಾಲ ಗ್ರಾಮದ ಬಳಿ ಸುಮಾರು 2 ಸಾವಿರ ಕೆ.ಜಿ ಗೂ ಅಧಿಕ ಟೊಮೆಟೊ ಇದ್ದ ಬೊಲೆರೋ ವಾಹನವನ್ನ ಖದೀಮರು ಕಳ್ಳತನ ಮಾಡಿದ್ದು, ಇದೀಗ ಈ ಕುರಿತಂತೆ ಕಳ್ಳರ ಸುಳಿವು ದೊರೆತಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

ಜುಲೈ 8 ಶನಿವಾರದಂದು ರೈತರೊಬ್ಬರು ಅಂದಾಜು 3 ಲಕ್ಷ ಮೌಲ್ಯದ ಟೊಮೆಟೊವನ್ನು ಬೊಲೆರೋದಲ್ಲಿ ತುಂಬಿಕೊಂಡು ಹಿರಿಯೂರಿನಿಂದ ಕೋಲಾರಕ್ಕೆ ಸಾಗಿಸುತ್ತಿದ್ದರು. ಇದನ್ನು ಗಮನಿಸಿದ ಮೂವರು ಅಪರಿಚಿತರು ಕಾರಿನಲ್ಲಿ ಬೊಲೆರೋ ವಾಹನವನ್ನ ಹಿಂಬಾಲಿಸಿಕೊಂಡು ಬಂದಿದ್ದಾರೆ. ಬಳಿಕ ಆರ್​ಸಿಎಂ ಯಾರ್ಡ್​ ಠಾಣೆಯ ವ್ಯಾಪ್ತಿಯಲ್ಲಿ ಅಡ್ಡಗಟ್ಟಿ, ರೈತ ಮತ್ತು ಬೊಲೆರೋ ಚಾಲಕನಿಗೆ ಹಲ್ಲೆ ಮಾಡಿ, ಬೊಲೆರೋವನ್ನ ತೆಗೆದುಕೊಂಡು ಎಸ್ಕೇಪ್​ ಆಗಿದ್ದರು. ಈ ಕುರಿತು ರೈತರು ಠಾಣೆಗೆ ದೂರು ದಾಖಲಿಸಿದ್ದರು.

ಟೊಮೆಟೊ ತುಂಬಿದ ಬೊಲೆರೋ ಕಳ್ಳತನ ಮಾಡಿದ ಖದೀಮರು, ತಮ್ಮ ನಿವಾಸದಲ್ಲಿ ಕೂತು ಪ್ಲ್ಯಾನ್ ಮಾಡಿ ಬಳಿಕ ಚೆನ್ನೈ ಮಾರುಕಟ್ಟೆಗೆ ಹೋಗಿ ಟೊಮೆಟೊವನ್ನ ಮಾರಾಟ ಮಾಡಿದ್ದಾರೆ.

ಟೊಮೆಟೊವನ್ನ ಮಾರಾಟ ಮಾಡಿದ ನಂತರ ಖಾಲಿ ವಾಹನವನ್ನು ತಂದು ನಿಲ್ಲಿಸಿ ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ತಮಿಳುನಾಡು ಮೂಲದ ಭಾಸ್ಕರ್, ಸಿಂಧೂಜಾ ಎಂಬ ಆರೋಪಿಗಳನ್ನು ಆರ್​ಎಂಸಿ ಪೊಲೀಸರು(RMC Police) ಬಂಧಿಸಿದ್ದು, ತಲೆಮರೆಸಿಕೊಂಡ ಇನ್ನೂ ಮೂವರಿಗಾಗಿ ಹುಡುಕಾಟ ನಡೆಯುತ್ತಿದೆ.

 

ಇದನ್ನು ಓದಿ: Story of Sowjanya: ಧರ್ಮಸ್ಥಳ ಸೌಜನ್ಯ ಸ್ಟೋರಿಗೆ ಭಾರೀ ಟ್ವಿಸ್ಟ್ – ಸಿನಿಮಾಗೆ ಕುಟುಂಬದಿಂದ ತೀವ್ರ ವಿರೋಧ ! 

Leave A Reply

Your email address will not be published.