SCS Scheme: ಹಿರಿಯ ನಾಗರೀಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ !! ಅಬ್ಬಬ್ಬಾ.. ಪ್ರತೀ ತಿಂಗಳೂ ಇಷ್ಟೊಂದು ದುಡ್ಡು ಸಿಗುತ್ತಾ?

Latest news political news central government has given good news to the senior citizens

ರೈತರು, ಮಹಿಳೆಯರು, ಸರ್ಕಾರಿ ನೌಕರರು(Government employees)ಎಂದು ಎಲ್ಲಾ ವರ್ಗದವರಿಗೂ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಆದರೀಗ ಈ ಬೆನ್ನಲ್ಲೇ ಕೇಂದ್ರ ಸರ್ಕಾರವು ಹಿರಿಯ ನಾಗರೀಕರಿಗೂ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.

ಹೌದು, ಪ್ರಾಯ ಇರುವ ಕಾಲಕ್ಕೆ ಚೆನ್ನಾಗಿ ದುಡಿದು, ಸಾಕಷ್ಟು ಉಳಿತಾಯ ಮಾಡಿ ಬಳಿಕ ವಯಸ್ಸಾದ ಮೇಲೆ ನೆಮ್ಮದಿಯಿಂದ ಜೀವನ ಮಾಡಬೇಕೆಂಬುದು ಹಲವರ ಕನಸು. ಹಲವು ಈ ಹಾದಿಯಲ್ಲೇ ನಡೆದರೆ ಇನ್ನು ಕೆಲವರಿಗೆ ಬಾಲ್ಯದಿಂದ ಬಂದಂತಹ ಕಷ್ಟಗಳು ಈ ಎಲ್ಲಾ ಕನಸುಗಳಿಗೆ ಅಡ್ಡಿಪಡಿಸುತ್ತದೆ. ಆದರೆ ಇನ್ನು ಮುಂದೆ ಚಿಂತಿಸ ಬೇಕಿಲ್ಲ ಹಿರಿಯ ನಾಗರಿಕರಿಗೆ ಕೇಂದ್ರ ಹಣಕಾಸು ಸಚಿವರು ಈಗ ‘ಹಿರಿಯ ನಾಗರಿಕ ಉಳಿತಾಯ ಯೋಜನೆ'(Hiriya nagarika ulitaya Scheme)ಮೂಲಕ ಹಿರಿಯ ನಾಗರಿಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

‘ಹಿರಿಯ ನಾಗರಿಕ ಉಳಿತಾಯ ಯೋಜನೆ’ ಎಂದರೇನು ? :
ನಿವೃತ್ತಿಯ ನಂತರ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ದೇಶದ ಹಿರಿಯ ನಾಗರಿಕರಿಗಾಗಿ ಆರಂಭಿಸಲಾಗಿದೆ. ಈ ಯೋಜನೆಯಡಿ, ಹಿರಿಯ ನಾಗರಿಕರು ಪ್ರತಿ ತಿಂಗಳು ಬಡ್ಡಿಯ ರೂಪದಲ್ಲಿ ಹಣವನ್ನು ಪಡೆಯುವುದು ಸಾಧ್ಯವಾಗುತ್ತದೆ. 60 ವರ್ಷ ಅಥವಾ 55 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ನಿವೃತ್ತಿ ಹೊಂದಿದವರಿಗೆ ಅಥವಾ ಸ್ವಯಂಪ್ರೇರಿತ ಅಥವಾ ವಿಶೇಷ ಸ್ವಯಂಪ್ರೇರಿತ ಯೋಜನೆಯಡಿಯಲ್ಲಿ ಅಥವಾ 50 ವರ್ಷಗಳ ರಕ್ಷಣಾ ಸೇವೆಗಳ ನಿವೃತ್ತ ಸಿಬ್ಬಂದಿಗೆ (ನಾಗರಿಕ ರಕ್ಷಣಾ ನೌಕರರನ್ನು ಹೊರತುಪಡಿಸಿ) ಈ ಯೋಜನೆಯನ್ನು ನೀಡಲಾಗುತ್ತದೆ.

ಹಿಂದಿನ ಯೋಜನೆ ಹಾಗೂ ಪ್ರಸ್ತುತ ಆದ ಬದಲಾವಣೆ:
ಈ ಹಿಂದಿನ ಯೋಜನೆಯ ಅವಧಿಯಲ್ಲಿ 15ಲಕ್ಷದಷ್ಟು ಹೂಡಿಕೆ ಮಾಡಿದರೆ 7.6ಪ್ರತಿಶತ ಬಡ್ಡಿದರದಂತೆ ಮೆಚ್ಯುರಿಟಿ ವೇಳೆ 20.70ಲಕ್ಷ ರೂ. ಸಿಗುತ್ತದೆ. ಆಗ ವಾರ್ಷಿಕವಾಗಿ 1.14ಲಕ್ಷ ಸಿಗುತ್ತದೆ ಆಗ ಮಾಸಿಕವಾಗಿ 9, 500ರೂ. ನಂತೆ ಹಣ ಸಿಗುತ್ತದೆ. ಆದರೆ ಈಗ ಹೂಡಿಕೆಯ ಮಿತಿ ಹೆಚ್ಚಿಸಿದ್ದು ತಿಂಗಳಲ್ಲಿ ಬರುವ ಬಡ್ಡಿದರದ ಪ್ರಮಾಣ ಕೂಡ ಅಧಿಕವಾಗಲಿದೆ.

ಪ್ರಸ್ತುತ:
ಈಗ ಹೂಡಿಕೆಯ ಮಿತಿಯನ್ನು 30ಲಕ್ಷ ರೂ. ಗೆ ಏರಿಸಿದ್ದ ಕಾರಣ ಬಡ್ಡಿದರವು 8.2% ಬಡ್ಡಿದರ‌ ಆದ ಹಿನ್ನೆಲೆ 5 ವರ್ಷದ ಅವಧಿಗೆ ನಿಮಗೆ ಉತ್ತಮ ಲಾಭವಾಗಲಿದೆ. 42.30 ಲಕ್ಷ ರೂ. ಸಿಗಲಿದ್ದು ನೀವು ಹೂಡಿಕೆ ಮಾಡಿದ್ದಕ್ಕಿಂತ ಅಧಿಕವಾಗಿ 12.30 ಲಕ್ಷದ ಅಧಿಕ ಲಾಭವೆ ನಿಮ್ಮದಾಗಲಿದೆ. ಅದರ ಆಧಾರದಲ್ಲಿ ವಾರ್ಷಿಕ 2.46 ಲಕ್ಷ ಹಾಗೂ ಮಾಸಿಕವಾಗಿ ನೀವು 20,500ರೂ. ಪಡೆಯಲಿದ್ದೀರಿ‌. ಹೀಗೆ ಹಣ ವಿನಿಯೋಗ ಮಾಡಿದ್ದ ಹಿರಿಯ ನಾಗರಿಕರಿಗೆ ಬಡ್ಡಿ ಮೊತ್ತದ ಅಧಿಕ ಲಾಭ ಸಿಗಲಿದೆ.

1.5 ಲಕ್ಷದವರೆಗಿನ ತೆರಿಗೆ ರಿಯಾಯಿತಿ :
ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ, ಸರ್ಕಾರವು ತ್ರೈಮಾಸಿಕ ಆಧಾರದ ಮೇಲೆ ಬಡ್ಡಿ ದರವನ್ನು ಪರಿಷ್ಕರಿಸುತ್ತದೆ. ಇದರಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಬೇರೆ ಬೇರೆ ಖಾತೆ ಅಥವಾ ಜಂಟಿ ಖಾತೆಯನ್ನು ತೆರೆಯಬಹುದು. ವಿಶೇಷವೆಂದರೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ, ಇದರಲ್ಲಿ ಹೂಡಿಕೆಯ ಮೇಲೆ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು.

ಅಕಾಲಿಕ ಮುಚ್ಚುವಿಕೆ:
ಖಾತೆಯನ್ನು ತೆರೆದ ಒಂದು ವರ್ಷದ ನಂತರ ವ್ಯಕ್ತಿಗಳು ಮೊತ್ತವನ್ನು ಹಿಂಪಡೆಯಬಹುದು. ಖಾತೆಯನ್ನು ತೆರೆದ ಒಂದು ವರ್ಷದೊಳಗೆ ಅಕಾಲಿಕ ಮುಚ್ಚುವಿಕೆಗೆ ಯಾವುದೇ ಶುಲ್ಕವಿಲ್ಲ. ಆದಾಗ್ಯೂ, ಖಾತೆಯನ್ನು ಒಂದು ವರ್ಷದ ನಂತರ ಮುಚ್ಚಿದರೆ ಆದರೆ ಅದನ್ನು ತೆರೆದ ಎರಡು ವರ್ಷಗಳೊಳಗೆ ಮೂಲ ಮೊತ್ತದಿಂದ 1.5% ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ. ಎರಡು ವರ್ಷಗಳ ನಂತರ ಖಾತೆಯನ್ನು ಮುಚ್ಚಿದರೆ ಆದರೆ ಅದನ್ನು ತೆರೆದ ಐದು ವರ್ಷಗಳೊಳಗೆ ಮೂಲ ಮೊತ್ತದಿಂದ 1% ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ.

ಅರ್ಹತೆಗಳು:
• 60 ವರ್ಷ ಮೇಲ್ಪಟ್ಟ ವ್ಯಕ್ತಿಗಳು.
• 55 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 60 ವರ್ಷಕ್ಕಿಂತ ಕೆಳಗಿನ ನಿವೃತ್ತ ನಾಗರಿಕ ನೌಕರರು. ಆದಾಗ್ಯೂ, ನಿವೃತ್ತಿ * ಪ್ರಯೋಜನಗಳನ್ನು ಸ್ವೀಕರಿಸಿದ 1 ತಿಂಗಳೊಳಗೆ ಹೂಡಿಕೆ ಮಾಡಬೇಕು.
• 50 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 60 ವರ್ಷಕ್ಕಿಂತ ಕೆಳಗಿನ ನಿವೃತ್ತ ರಕ್ಷಣಾ ನೌಕರರು. ಆದಾಗ್ಯೂ, ನಿವೃತ್ತಿ ಪ್ರಯೋಜನಗಳನ್ನು ಸ್ವೀಕರಿಸಿದ 1 ತಿಂಗಳೊಳಗೆ ಹೂಡಿಕೆ ಮಾಡಬೇಕು.
• ಅನಿವಾಸಿ ಭಾರತೀಯರು (NRIಗಳು) ಮತ್ತು ಹಿಂದೂ ಅವಿಭಜಿತ ಕುಟುಂಬಗಳು (HUFs) SCSS ತೆರೆಯಲು ಅರ್ಹರಲ್ಲ.

ಅರ್ಜಿ ಹಾಕುವುದು ಹೇಗೆ?
ಪೋಸ್ಟ್ ಆಫೀಸ್ ಮೂಲಕ ಸಲ್ಲಿಸಬಹುದು:
ನೀವು SCSS ಅರ್ಜಿ ನಮೂನೆಯನ್ನು ಅಂಚೆ ಕಛೇರಿ ಶಾಖೆಯಲ್ಲಿ ಅಥವಾ ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸಂಗ್ರಹಿಸಬಹುದು

ಬ್ಯಾಂಕ್ ಮೂಲಕ ಸಲ್ಲಿಸಬಹುದು:
ಬ್ಯಾಂಕ್‌ನಲ್ಲಿ SCSS ಖಾತೆಯನ್ನು ತೆರೆಯುವುದು ಹೇಗೆ?
ಅಧಿಕೃತ ಬ್ಯಾಂಕ್‌ನೊಂದಿಗೆ SCSS ಖಾತೆಯನ್ನು ತೆರೆಯಲು ಈ ಕೆಳಗಿನ ಹಂತಗಳಿವೆ:
ಹಂತ 1: ಹತ್ತಿರದ ಅಧಿಕೃತ ಬ್ಯಾಂಕ್ ಶಾಖೆಗೆ ಹೋಗಿ ಮತ್ತು SCSS ಅರ್ಜಿ ನಮೂನೆಯನ್ನು ಸಂಗ್ರಹಿಸಿ.
ಹಂತ 2: ಅರ್ಜಿ ನಮೂನೆಯಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
ಹಂತ 2: ಅರ್ಜಿ ನಮೂನೆಯಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
ಹಂತ 3: ಅಗತ್ಯ ದಾಖಲೆಗಳನ್ನು ಲಗತ್ತಿಸಿ.
ಹಂತ 4: ಅರ್ಜಿ ನಮೂನೆ, ದಾಖಲೆಗಳು ಮತ್ತು ಠೇವಣಿ ಹಣವನ್ನು ಬ್ಯಾಂಕ್ ಸಿಬ್ಬಂದಿಗೆ ಸಲ್ಲಿಸಿ.
ಹಂತ 5: ಬ್ಯಾಂಕ್ ಉದ್ಯೋಗಿಗಳು ಅರ್ಜಿಯನ್ನು ಪ್ರಕ್ರಿಯೆಗೊಳಿಸುತ್ತಾರೆ ಮತ್ತು SCSS ಖಾತೆಯನ್ನು ತೆರೆಯುತ್ತಾರೆ.

 

ಇದನ್ನು ಓದಿ: ಹಾಸನ: ಕಾರು-ಲಾರಿ ಮಧ್ಯೆ ಭೀಕರ ಅಪಘಾತ!! ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತ್ಯು 

Leave A Reply

Your email address will not be published.