Army Canteen: ಆರ್ಮಿ ಕ್ಯಾಂಟೀನ್ ನಲ್ಲಿ ವಸ್ತುಗಳು ಅರ್ಧಕರ್ಧ ಬೆಲೆಯಲ್ಲಿ ಸಿಗೋ ಅಸಲಿ ಕಾರಣ ಗೊತ್ತಾ ?

Latest news Do you know why items are available at half price in the army canteen

Army Canteen: ಭಾರತ ಸರ್ಕಾರವು ದೇಶದ ವೀರ ಸೈನಿಕರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಸೈನಿಕರು ಪ್ರತಿ ಕ್ಷಣವೂ ಗಡಿಯಲ್ಲಿ ನಿಂತು ದೇಶವನ್ನು ರಕ್ಷಿಸುತ್ತಾರೆ. ಇದರ ಪ್ರತಿಯಾಗಿ ಯೋಧರ ಕುಟುಂಬಸ್ಥರಿಗೆ ಅನುಕೂಲವಾಗುವಂತೆ ಹಲವಾರು ಸೌಲಭ್ಯಗಳ ಮೇಲೆ ರಿಯಾಯಿತಿ ಘೋಷಿಸಲಾಗಿದೆ.

ಆರ್ಮಿ ಕ್ಯಾಂಟೀನ್ (Army Canteen) ಅಧಿಕೃತ ಹೆಸರು ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟೆಂಟ್. ರಕ್ಷಣಾ ಕ್ಯಾಂಟೀನ್‌ಗಳು ಸೈನಿಕರು, ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ಮದ್ಯ, ಎಲೆಕ್ಟ್ರಾನಿಕ್ಸ್ ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡುತ್ತವೆ

ಹೌದು, ಆರ್ಮಿ ಕ್ಯಾಂಟೀನ್ ಬಗ್ಗೆ ಕೆಲವೊಂದು ಮಾಹಿತಿ ತಿಳಿಯೋಣ ಬನ್ನಿ. ಈ ಆರ್ಮಿ ಕ್ಯಾಂಟೀನ್‌ಗಳಲ್ಲಿ ಕಡಿಮೆ ದರದಲ್ಲಿ ಸರಕು ದೊರೆಯುತ್ತದೆ. ಸೇನಾ ಕ್ಯಾಂಟೀನ್‌ನಲ್ಲಿ ನೀವು ದಿನಸಿ ವಸ್ತುಗಳು, ಅಡಿಗೆ ವಸ್ತುಗಳು, ಇತರ ವಸ್ತುಗಳು, ಆಟೋಮೊಬೈಲ್‌ಗಳು ಮತ್ತು ಮದ್ಯವನ್ನು ಸಹ ಖರೀದಿಸಬಹುದು.
ಇಲ್ಲಿ ಕಾರುಗಳು ಮತ್ತು ಬೈಕ್‌ಗಳನ್ನು ಸಹ ಖರೀದಿಸಬಹುದು, ಇದರಲ್ಲಿ ನಿಮಗೆ ಉತ್ತಮ ರಿಯಾಯಿತಿ ಸಿಗುತ್ತದೆ. ಜೊತೆಗೆ ಇಲ್ಲಿ ಅನೇಕ ವಿದೇಶಿ ವಸ್ತುಗಳು ದೊರೆಯುತ್ತವೆ.

ಆದರೆ ಸೇನಾ ಕ್ಯಾಂಟೀನ್‌ನಲ್ಲಿನ ಸರಕುಗಳು ಎಷ್ಟು ಅಗ್ಗ ಮತ್ತು ಸಾಮಾನ್ಯ ವ್ಯಕ್ತಿಗಳು ಇಲ್ಲಿಂದ ಸರಕುಗಳನ್ನು ಖರೀದಿಸಬಹುದೇ ನಿಮಗೆ ಗೊಂದಲ ಇರಬಹುದು.
ಮೊದಲೆಲ್ಲ ಯಾವುದೇ ವ್ಯಕ್ತಿ ಆರ್ಮಿ ಕ್ಯಾಂಟೀನ್ ಕಾರ್ಡ್ ಮೂಲಕ ಎಷ್ಟು ಬೇಕಾದರೂ ಖರೀದಿಸಬಹುದು. ಆದರೆ ಇತ್ತೀಚೆಗೆ ಸರಕುಗಳು ಯೋಧರ ಕುಟುಂಬಸ್ಥರಿಗೆ ಸಿಗದಂತಾದಾಗ ಮಿತಿ ಹೇರಲಾಯ್ತು. ಸದ್ಯ ಒಬ್ಬರನ್ನು ಪ್ರತಿ ತಿಂಗಳ ಮಿತಿಯೊಳಗೆ ಸರಕು ಇಲ್ಲಿ ಖರೀದಿಸಬಹುದು.

ಇನ್ನು ಲೇಹ್ ನಿಂದ ಅಂಡಮಾನ್ ಮತ್ತು ನಿಕೋಬಾರ್‌ವರೆಗೆ ದೇಶದಾದ್ಯಂತ ಒಟ್ಟು 33 ಸೇನಾ ಕ್ಯಾಂಟೀನ್ ಡಿಪೋಗಳಿವೆ ಮತ್ತು ಸುಮಾರು 3700 ಯುನಿಟ್ ರನ್ ಕ್ಯಾಂಟೀನ್‌ಗಳಿವೆ. ಇಲ್ಲಿ ಸೈನಿಕರಿಂದ ಪ್ರತಿ ವಸ್ತುವಿನ ಮೇಲೆ ಕೇವಲ 50 ಪ್ರತಿಶತ ತೆರಿಗೆಯನ್ನು ತೆಗೆದುಕೊಳ್ಳುವುದಿಲ್ಲ. ಬೇರೆ ಕಡೆ ಶೇ.18ರಷ್ಟು ತೆರಿಗೆ ಇದ್ದರೆ, ಆರ್ಮಿ ಕ್ಯಾಂಟೀನ್‌ನಲ್ಲಿ ಆ ವಸ್ತುವಿಗೆ ಕೇವಲ 9 ಪ್ರತಿಶತ ತೆರಿಗೆ ಹಾಕಲಾಗುತ್ತದೆ.

 

ಇದನ್ನು ಓದಿ: UT Khader: ಹಳೆಯ ಸೇಡಿನಿಂದ ಅಮಾನತ್ತಾದ್ರಾ ಬಿಜೆಪಿಯ10 ಶಾಸಕರು ? ಹೊಳೆಯಲ್ಲಿ ಹುಳಿ ತೊಳೆಯುವ ದುಡುಕಿನ ನಿರ್ಧಾರ ಬೇಕಿತ್ತಾ ಸ್ಪೀಕರ್ ಖಾದರ್ ‘ ರವರೇ ?

Leave A Reply

Your email address will not be published.