ಶಿವಮೊಗ್ಗ: ರೌಡಿಶೀಟರ್ ಮೇಲೆ ಏಕಾಏಕಿ ಮುಗಿಬಿದ್ದ ದುಷ್ಕರ್ಮಿಗಳು, ತಲ್ವಾರ್ ದಾಳಿಗೆ ಬಲಿ

Latest news death news rowdy named Mujeeb of Shimoga was murdered

Share the Article

ಶಿವಮೊಗ್ಗದ ಕುಖ್ಯಾತ ರೌಡಿ‌ ಶೀಟರ್ ಮುಜೀಬ್ (32) ಎಂಬಾತನನ್ನು‌ ಮಾರಕಾಸ್ತ್ರಗಳಿಂದ‌ ಕೊಚ್ಚಿ‌ ಕೊಲೆಗೈದ ಘಟನೆ ಕಳೆದ ರಾತ್ರಿ ಭದ್ರಾವತಿಯಲ್ಲಿ ನಡೆದಿದೆ. ಶಿವಮೊಗ್ಗದ ಬೊಮ್ಮನಕಟ್ಟೆ ಬಳಿಯ ಹಳೆ ನಂಜಾಪುರದಲ್ಲಿ ಘಟನೆ ಜರುಗಿದೆ. ಮುಜೀಬ್ ಈ ಹಿಂದೆ ಹಲವು ಅಪರಾಧ ಮತ್ತು ಕೊಲೆ ಪ್ರಕರಣವೊಂದರಲ್ಲಿ ಪ್ರಮುಖ‌ ಆರೋಪಿಯಾಗಿದ್ದ.

ನಿನ್ನೆ ರಾತ್ರಿ ಊಟ ಮಾಡಿ ಮನೆಯಿಂದ ಹೊರಗಡೆ ಬಂದು ಗೇಟ್ ಬಳಿ ಆತ ನಿಂತಿದ್ದ. ಈ ವೇಳೆ ಏಕಾಏಕಿ ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಆತನ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ ವ್ಯಕ್ತವಾಗಿದೆ.

ಇಂದು ಬೆಳಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶಿವಮೊಗ್ಗದ ಪೇಪರ್‌ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಜೀಬ್‌ಗೆ ಎರಡು ಮದುವೆಯಾಗಿದ್ದು, ಮೊದಲನೇ ಪತ್ನಿಗೆ ಇಬ್ಬರು ಮತ್ತು ಎರಡನೇ ಪತ್ನಿಗೆ ಒಂದು‌ ಮಗುವಿದೆ. ಹತ್ಯೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದು ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ.

 

ಇದನ್ನು ಓದಿ: Liquor Rate Hike: ಮದ್ಯದ ಬೆಲೆ ಏರಿಕೆ ಆಗೇ ಹೋಯ್ತು ! ನಿಮ್ಮ ಬ್ರಾಂಡಿನ ಬೆಲೆ ಎಷ್ಟಾಗಿದೆ ತಿಳ್ಕೋಬೇಕಾ ? 

Leave A Reply