Home Karnataka State Politics Updates BJP-JDS: ಕೊನೆಗೂ ಜೆಡಿಎಸ್ ಗೆ ಶಾಕ್ ಕೊಟ್ಟ ಬಿಜೆಪಿ ?! ಮೈತ್ರಿ, ದೋಸ್ತಿ ಇಲ್ದೆ ಕುಮಾರಸ್ವಾಮಿ...

BJP-JDS: ಕೊನೆಗೂ ಜೆಡಿಎಸ್ ಗೆ ಶಾಕ್ ಕೊಟ್ಟ ಬಿಜೆಪಿ ?! ಮೈತ್ರಿ, ದೋಸ್ತಿ ಇಲ್ದೆ ಕುಮಾರಸ್ವಾಮಿ ಅತಂತ್ರ ??

BJP-JDS

Hindu neighbor gifts plot of land

Hindu neighbour gifts land to Muslim journalist

BJP-JDS: ರಾಜ್ಯ ರಾಜಕೀಯದಲ್ಲಿ ಕೆಲವೊಂದು ಊಹಿಸಲಾಗದ ಬೆಳವಣಿಗೆಗಳಾಗುತ್ತಿವೆ. ಯಾರು ಯಾರೊಂದಿಗೆ ಮೈತ್ರಿ ಮಾಡಿಕೊಳ್ತಾರೆ, ದೋಸ್ತಿ ಮಾಡಿಕೊಳ್ತಾರೆ ಅನ್ನೋದು ಊಹೆಗೂ ನಿಲುಕದಂತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬಿಜೆಪಿ(BJP) ಹಾಗೂ ಜೆಡಿಎಸ್(BJP-JDS) ಮೈತ್ರಿ ಬಗ್ಗೆ ಗರಿಗೆದರಿದ ಬೆಳವಣಿಗೆಗಳು. ಆದರೆ ಈ ಬೆನ್ನಲ್ಲೇ ಬಿಜೆಪಿ, ಜೆಡಿಎಸ್ ಗೆ ಶಾಕ್ ಕೊಡ್ತಾ? ದೋಸ್ತಿ ಕತೆ ಏನಾಯ್ತು? ಕುಮಾರಸ್ವಾಮಿ ಅತಂತ್ರವಾಗಿಬಿಟ್ಟರಾ? ಅನ್ನೋ ಪ್ರಶ್ನೆಗಳು ಗರಿಗೆದರಿವೆ.

ಹೌದು, ರಾಜ್ಯ ರಾಜಕೀಯದಲ್ಲಿ ಇಂತಹ ಒಂದು ಪ್ರಶ್ನೆ ಸದ್ಧಿಲ್ಲದೆ ಹುಟ್ಟಿಕೊಳ್ಳುತ್ತಿದೆ. ಇದಕ್ಕೆ ಕಾರಣ ಮೊನ್ನೆ ಮೊನ್ನೆ ತಾನೆ ದೆಹಲಿಯಲ್ಲಿ ನಡೆದ NDA ಮೈತ್ರಿ ಪಕ್ಷಗಳ ಸಭೆ. ಹೌದು, ದೆಹಲಿಯ ಅಶೋಕ್ ಹೋಟೆಲ್(Ashok hotel) ನಲ್ಲಿ ನಡೆದ ಬಿಜೆಪಿಯ 38 ಮಿತ್ರಪಕ್ಷಗಳ ಸಭೆಗೆ ಜೆಡಿಎಸ್ ಗೆ ಎಂಟ್ರಿ ಇರಲಿಲ್ಲ. ಅಂದರೆ ಬಿಜೆಪಿ ದಳಪತಿಗಳಿಗೆ ಯಾವುದೇ ಆಹ್ವಾನ ನೀಡಿಲ್ಲ. ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಗೆ ಆರಂಭಿಕ ಹಿನ್ನಡೆ ಆದಂತೆ ಕಾಣುತ್ತಿದೆ. ಇದಕ್ಕೆ ಎರಡೂ ಪಕ್ಷದಿಂದ ವಿರೋಧ ವ್ಯಕ್ತವಾಗಿದೆ ಎನ್ನಲಾಗ್ತಿದೆ.

ಇಷ್ಟೇ ಅಲ್ಲದೆ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಮಾತುಕತೆಗೆ ತಾತ್ಕಾಲಿಕವಾಗಿ ಬ್ರೇಕ್‌ ಹಾಕಲಾಗಿದೆ ಎನ್ನಲಾಗ್ತಿದೆ. ಯಾಕೆಂದರೆ ಈ ಮೈತ್ರಿಗೆ ಜೆಡಿಎಸ್‌ನಲ್ಲೇ (BJP) ಕೆಲವು ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಬಿಜೆಪಿಯಲ್ಲೂ(BJP) ಇದಕ್ಕೆ ಅಪಸ್ವರ ಕೇಳಿ ಬರುತ್ತಿದೆ. ಇತ್ತೀಚಿನ ಸಂದರ್ಶನದಲ್ಲಿ ಕುಮಾರಸ್ವಾಮಿ(H D Kumaraswamy )ಅವರು NDA ಸಭೆಗೆ ಆಹ್ವಾನ ನೀಡಿದರೆ ಹೋಗುವೆ ಎಂದು ಹೇಳಿದ್ದರು. ಆದರೆ ಈ ನಡುವೆಯೇ ಸಾಕಷ್ಟು ಬೆಳವಣಿಗೆ ಆದಂತೆ ಕಾಣುತ್ತಿದೆ.

ಅಂದಹಾಗೆ ಸುಮಾರು ಒಂದು ತಿಂಗಳಿನಿಂದ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ(alliance) ಬಗ್ಗೆ ಹೆಚ್ಚು ಚರ್ಚೆಯಾಗುತ್ತಿತ್ತು. ವಿಧಾನಸಭಾ ವಿರೋಧ ಪಕ್ಷದ ನಾಯಕರಾಗಿ ಮಾಜಿ ಸಿಎಂ , ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ(H D Kumaraswamy )ಅವರು ಅವರೇ ಆಯ್ಕೆ ಆಗುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದ್ರೆ ಎನ್‌ಡಿಎ ಮೈತ್ರಿ ಕೂಟದ ಸಭೆಗೆ(NDA alliance meeting) ಜೆಡಿಎಸ್‌ಗೆ ಆಹ್ವಾನ ಬಂದಿಲ್ಲ. 38 ಪಕ್ಷಗಳಿಗೆ ಆಹ್ವಾನ ಕೊಟ್ಟ ಬಿಜೆಪಿ ಜೆಡಿಎಸ್‌ಗೆ ಯಾಕೆ ಕೊಟ್ಟಿಲ್ಲ ಎಂಬುದೇ ಪ್ರಶ್ನೆಯಾಗಿದೆ. ಇನ್ನೂ ಇದರ ಬಗ್ಗೆ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರು ಶಾಸಕರ ಜೊತೆ ಸಭೆಯನ್ನು ಸಹ ನಡೆಸಲಿದ್ದಾರೆ ಎಂಬ ಮಾಹಿತಿ ಒದಗಿದೆ. ಹೀಗಾಗಿ ಮೈತ್ರಿ ವಿಚಾರ ಮುರಿದು ಬಿತ್ತಾ ಎನ್ನುವ ಚರ್ಚೆ ಶುರುವಾಗಿದೆ.

 

ಇದನ್ನು ಓದಿ: Free Tomato offer: ಶಕ್ತಿ ಯೋಜನೆ ಲಾಸ್ ಟೊಮೆಟೋದಿಂದ ವಾಪಸ್ ; ಆಟೋದಲ್ಲಿ ಪ್ರಯಾಣಿಸಿದ್ರೇ 1ಕೆಜಿ ಟೊಮೆಟೊ ಫ್ರೀ..!