Bath room Tips: ಮನೆಯ ಎಲ್ಲರೂ ಒಂದೇ ಸೋಪ್ ಬಳಸಬೇಕಾ, ಬೇಡವಾ ? ಇಂಟರೆಸ್ಟಿಂಗ್ ಮಾಹಿತಿ !
latest news life style Bath room Tips Are everyone using the same soap at home
Health Tip: ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮತ್ತು ಮಧ್ಯಮ ವರ್ಗದ ಕುಟುಂಬದವರು ಹೆಚ್ಚಾಗಿ ಮನೆಯವರೆಲ್ಲರೂ ಒಂದೇ ಸೋಪ್ ಬಳಸುತ್ತಾರೆ. ಆದರೆ ಈ ಕುರಿತು ತಜ್ಞರು ನಡೆಸಿರುವ ಸಂಶೋಧನೆಯಿಂದ ಕಂಡುಕೊಂಡ ಕೆಲವೊಂದು ಆರೋಗ್ಯ ಮಾಹಿತಿ (Health Tip) ಇಲ್ಲಿ ತಿಳಿಸಲಾಗಿದೆ.
2006 ರಲ್ಲಿ ಇಂಡಿಯನ್ ಜರ್ನಲ್ ಆಫ್ ಡೆಂಟಲ್ ರಿಸರ್ಚ್‌ನಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ ಪ್ರತಿಯೊಬ್ಬ ಸ್ನಾನಕ್ಕೆ ಬಳಸುವ ಸೋಪ್ ಎರಡರಿಂದ ಐದು ವಿಭಿನ್ನ ರೀತಿಯ ಸೂಕ್ಷ್ಮಜೀವಿಗಳನ್ನು ಒಳಗೊಂಡಿದೆ ಎಂದು ಕಂಡುಹಿಡಿದಿದೆ.
ಆರೋಗ್ಯ ತಜ್ಞರ ಪ್ರಕಾರ, ಸೋಪಿನ ಮೇಲಿರುವ ಸೂಕ್ಷ್ಮಾಣುಗಳಾದ ಸಾಲ್ಮೊನೆಲ್ಲಾ ಮತ್ತು ಶಿಗೆಲ್ಲ ಬ್ಯಾಕ್ಟೀರಿಯಾಗಳು, ಹಾಗೆಯೇ ನೊರೊವೈರಸ್ ಮತ್ತು ರೋಟವೈರಸ್ ಮತ್ತು ಸ್ಟ್ಯಾಫ್‌ನಂತಹ ವೈರಸ್‌ಗಳನ್ನು ಒಳಗೊಂಡಿರಬಹುದು.
ಕೆಲವು ಚರ್ಮದ ಮೇಲೆ ಗಾಯಗಳು ಅಥವಾ ಗೀರುಗಳಿಂದ ಹರಡಬಹುದು, ಆದರೆ ಇತರವು ಮಲದಿಂದ ಹರಡುತ್ತದೆ. ಆದ್ದರಿಂದ ಒಂದೇ ಸೋಪ್ ಬಳಸುವುದು ಅಷ್ಟು ಸುರಕ್ಷಿತಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ.
ಇದಲ್ಲದೇ 2015 ರ ಅಮೇರಿಕನ್ ಜರ್ನಲ್ ಆಫ್ ಇನ್ಫೆಕ್ಷನ್ ಕಂಟ್ರೋಲ್‌ನ ಅಧ್ಯಯನದ ಪ್ರಕಾರ ಸುಮಾರು 62 ಪ್ರತಿಶತದಷ್ಟು ಬಾರ್ ಸೋಪ್‌ಗಳು ಕಲುಷಿತವಾಗಿದೆ ಎಂದು ಕಂಡುಹಿಡಿದಿದೆ. ಸೋಪಿನ ಮೇಲಿರುವ ಬ್ಯಾಕ್ಟೀರಿಯಾಗಳು ಒಂದೇ ಸೋಪ್ ಬಳಸುವ ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಇನ್ನು ಇದೆಲ್ಲದರ ಹೊರತು ಸೋಪುಗಳಲ್ಲಿ ನಾನಾ ವಿಧಗಳಿವೆ. ಮತ್ತು ನಮ್ಮ ದೇಹದ ಚರ್ಮದಲ್ಲಿ ಬೇರೆ ಬೇರೆ ರೀತಿಯ ಸೂಕ್ಷ್ಮ ಸಮಸ್ಯೆಗಳು ಇರುತ್ತವೆ. ಆದ್ದರಿಂದ ದೇಹಕ್ಕೆ ಸೂಕ್ತವಾದ ಸೋಪು ಆಯ್ಕೆ ಮಾಡುವುದು ಸಹ ಮುಖ್ಯವಾಗಿದೆ.