Types of Tears: ನೀವು ಸುಖ ನೆಮ್ಮದಿಯಿಂದ ಇರಬೇಕಾ, ಹಾಗಾದ್ರೆ ನೀವು ಕಣ್ಣೀರು ಹಾಕಲೇ ಬೇಕು !
latest news intresting news Types of Tears If you want to be happy, you have to cry
Types of Tears: ಮನಸ್ಸಿಗೆ (Heart) ನೋವಾದಾಗ (Pain) ಕಣ್ಣೀರು (Tears) ಬರುತ್ತದೆ. ಮನಸ್ಸಿನ ನೋವು, ದುಃಖವನ್ನು ಕಣ್ಣೀರು ಹೊರ ಹಾಕುತ್ತದೆ. ಅಲ್ಲದೆ ಅತಿಯಾಗಿ ಸಂತೋಷವಾದಾಗ ಆನಂದ ಭಾಷ್ಪವಾಗಿ ಕಣ್ಣೀರು ಹೊರಬರುತ್ತದೆ. ಹೀಗೆ ವಿವಿಧ ಭಾವನೆಗಳಿಗೆ ಕಣ್ಣೀರು ಹೊರಬರುತ್ತದೆ. ಆದರೆ ನಿಮಗೆ ಗೊತ್ತಾ? ಕಣ್ಣೀರಿನಲ್ಲೂ ವ್ಯತ್ಯಾಸವಿದೆಯಂತೆ!!
ಹೌದು ವಿವಿಧ ಭಾವನೆಗಳಿಗೆ (Different situation) ಸುರಿಸುವ ಕಣ್ಣೀರಿನಲ್ಲಿ ವಿವಿಧ ರೀತಿಯ ಅಣುಗಳು ತುಂಬಿಕೊಂಡಿದ್ದು, ಎಲ್ಲಾ ಕಣ್ಣೀರುಗಳು ಒಂದೇ ಅಲ್ಲ. ಅವುಗಳಲ್ಲೂ ವ್ಯತ್ಯಾಸವಿದೆ ಎಂದು ಛಾಯಾಗ್ರಾಹಕರೊಬ್ಬರು ಹೇಳಿದ್ದಾರೆ. ಹಾಗಾದರೆ ಇವರ ಮಾತು ಎಷ್ಟು ಸತ್ಯ ಎಂಬುದನ್ನು ಮುಂದೆ ತಿಳಿಯೋಣ.
ವಿಭಿನ್ನ ಭಾವನೆಗಳ ಆಧಾರದ ಮೇಲೆ ಕಣ್ಣೀರು ವಿಭಿನ್ನ ಅಣುಗಳನ್ನು ಹೊಂದಿರುತ್ತದೆ. ಸೂಕ್ಷ್ಮದರ್ಶಕದ ಮೂಲಕ ನೋಡಿದಾಗ ಇವೆಲ್ಲವೂ ವಿಭಿನ್ನವಾಗಿ ಗೋಚರಿಸುತ್ತದೆ. “ದಿ ಟೋಪೋಗ್ರಫಿ ಆಫ್ ಟಿಯರ್ಸ್” ಪುಸ್ತಕಕ್ಕಾಗಿ ಛಾಯಾಗ್ರಾಹಕ ರೋಸ್-ಲಿನ್ ಫಿಶರ್ ತೆಗೆದ ಫೋಟೋಗಳಲ್ಲಿ ಈ ವ್ಯತ್ಯಾಸವು ಸ್ಪಷ್ಟವಾಗಿದೆ.
“ಕಣ್ಣೀರಿನ ದೃಶ್ಯ ತನಿಖೆ” ಗಾಗಿ ಫಿಶರ್ ಡಿಜಿಟಲ್ ಮೈಕ್ರೋಸ್ಕೋಪಿ ಕ್ಯಾಮೆರಾದಲ್ಲಿ ಆಪ್ಟಿಕಲ್ ಸ್ಟ್ಯಾಂಡರ್ಡ್ ಲೈಟ್ ಮೈಕ್ರೋಸ್ಕೋಪ್(optical standard light microscope) ಬಳಸಿ ಕೆಲವು ಫೋಟೋಗಳನ್ನು ತೆಗೆದುಕೊಳ್ಳಲಾಗಿದೆ. ರೋಸ್ ಲಿನ್ ಫಿಶರ್ ಸತತ 8 ವರ್ಷಗಳ ಕಾಲ ಈ ಯೋಜನೆಗಾಗಿ ತನ್ನ ಭಾವನಾತ್ಮಕ ಕಣ್ಣೀರನ್ನು ಸಂಗ್ರಹಿಸಲು ಮತ್ತು ಛಾಯಾಚಿತ್ರ(photography) ಮಾಡಲು ಶ್ರಮಿಸಿದರು.
ರೋಸ್ ಲಿನ್ ಫಿಶರ್ ವಿಜ್ಞಾನಿಯಲ್ಲ, ಕೇವಲ ದೃಶ್ಯ ಕಲಾವಿದೆ. ಆಕೆ ನಡೆಸಿದ ಕಣ್ಣೀರಿನ ಸಂಶೋಧನೆಯಲ್ಲಿ ವಿವಿಧ ರೀತಿಯ ಕಣ್ಣೀರಿನ ಫೋಟೋಗಳು ಆಕೆಯನ್ನು ಆಶ್ಚರ್ಯಗೊಳಗಾಗುವಂತೆ ಮಾಡಿತು. ಸೂಕ್ಷ್ಮದರ್ಶಕದ ಅಡಿಯಲ್ಲಿ ನೋಡಿದಾಗ ಕಣ್ಣೀರು ವಿಭಿನ್ನವಾಗಿ ಕಾಣುತ್ತಿತ್ತು. ನೋವು, ಸಂತೋಷದಲ್ಲಿ, ಈರುಳ್ಳಿ ಕತ್ತರಿಸುವುದರಿಂದ ಬರುವ ಕಣ್ಣೀರು ಬೇರೆ ಬೇರೆಯಾಗಿತ್ತು. ಇದರ ಫೋಟೋ ಇಲ್ಲಿದೆ.
ಕಣ್ಣೀರಿನಲ್ಲಿ ಬೇರೆ ಬೇರೆ ವಿಧಗಳಿವೆ (Types of Tears). ಒಂದೊಂದು ಕಣ್ಣೀರು ಒಂದೊಂದು ರೀತಿಯಲ್ಲಿ ಕಣ್ಣಿಗೆ ಸಹಾಯ ಮಾಡುತ್ತವೆ. ಇತ್ತ ಕೆಲವು ಸಂಶೋಧಕರು ಕಣ್ಣೀರನ್ನು ಈ ರೀತಿಯಾಗಿ ವಿಂಗಡಿಸಿದ್ದಾರೆ.
ರಪ್ಲೆಕ್ಸ್ ಟಿಯರ್ಸ್ (Reflex Tears ): ಈರುಳ್ಳಿ ಕಟ್ ಮಾಡಿದಾಗ, ಕಣ್ಣಿಗೆ ಆಕಸ್ಮಿಕವಾಗಿ ಏನಾದರೂ ತಾಕಿದಾಗ ಕಣ್ಣಿನಲ್ಲಿ ನೀರು ಬರುತ್ತದೆ. ಈ ಕಣ್ಣೀರಿನಿಂದ ಕಣಗಳು, ಧೂಳನ್ನು ತೆಗೆದು ಹಾಕಲು , ಕಣ್ಣಿನ ಉರಿಯನ್ನು ತಗ್ಗಿಸಲು ಸಹಾಯ ಮಾಡುತ್ತದೆ
ಎಮೋಷನಲ್ ಟಿಯರ್ಸ್ (Emotional Tears ): ಹೆಚ್ಚಾಗಿ ಭಾವೋದ್ವೇಗಕ್ಕೆ ಒಳಗಾದಾಗ ಕಣ್ಣೀರು ಒತ್ತರಿಸಿ ಬರುತ್ತದೆ. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಒಬ್ಬ ವ್ಯಕ್ತಿಯು ದುಃಖ, ಸಂತೋಷ, ಭಯ ಅಥವಾ ಇತರ ಭಾವನೆಗಳನ್ನು ಅನುಭವಿಸಿದಾಗ ಉತ್ಪತ್ತಿಯಾಗುವ ಕಣ್ಣೀರಿನಲ್ಲಿ ಹೆಚ್ಚುವರಿ ಹಾರ್ಮೋನುಗಳು ಮತ್ತು ಪ್ರೋಟೀನ್‌ಗಳು ಇರುತ್ತದೆ.
ಅತ್ತಾಗ, ಆಕ್ಸಿಟೋಸಿನ್ (Oxytocin), ಎಂಡಾರ್ಫಿನ್ (Endorphin)ಎಂಬ ಫೀಲ್ ಗುಡ್ ರಾಸಾಯನಿಕಗಳು (Feel good Chemical’s) ಬಿಡುಗಡೆ ಆಗುತ್ತವೆ. ಇವು ಮನುಷ್ಯರ ಮೂಡನ್ನು ಬದಲಿಸುತ್ತವೆ ಹಾಗೂ ನೋವನ್ನು ಮರೆಸಿ ಸಂತೋಷದಿಂದ ಇರುವಂತೆ ಮಾಡುತ್ತದೆ.
ಬಾಸಲ್ ಟಿಯರ್ಸ್ (Basel Tears): ಈ ಕಣ್ಣೀರಿನಲ್ಲಿ ನಿಮಿಷಕ್ಕೆ ಒಂದರಿಂದ ಎರಡು ಮೈಕ್ರೋ ಲೀಟರ್‌ವರೆಗೂ ನೀರು ಉತ್ಪತ್ತಿ ಆಗುತ್ತದೆ. ನಿಮ್ಮ ಕಣ್ಣುಗಳಲ್ಲಿನ (Eye) ಅಗತ್ಯ ತೇವಾಂಶ ಉಳಿಕೆಗೆ ಸಹಾಯ ಮಾಡುತ್ತದೆ. ಅಲ್ಲದೆ ಇದು ಪ್ರತಿರಕ್ಷಣಾ (Immune) ವ್ಯವಸ್ಥೆಯ ಒಂದು ಭಾಗವಾಗಿದ್ದು, ನಿಮ್ಮನ್ನು ಸೋಂಕಿನಿಂದ ರಕ್ಷಿಸಲು ಸಹಕಾರಿ ಆಗಿದೆ.