PM Kisan Yojana: ಪಿಎಂ ಕಿಸಾನ್ 14 ನೇ ಕಂತಿಗೆ ಮುಂಚೆ ರೈತರಿಗೆ ಬಿಗ್ ನ್ಯೂಸ್ ! ಖುಷಿ ಸುದ್ದಿ ಪ್ರಕಟಿಸಿದ ಕೇಂದ್ರ ಕೃಷಿ ಸಚಿವ !

Latest news Good news for farmers about PM Kisan Yojana-14th Installment

PM Kisan Yojana-14th Installment: ದೇಶದ ರೈತರನ್ನು (Farmers) ಆರ್ಥಿಕವಾಗಿ ಸದೃಢವಾಗಿಸುವ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ಹೀಗಾಗಿ, ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ (Agriculture Activity) ಪ್ರೋತ್ಸಾಹ ನೀಡುತ್ತಾ ಬಂದಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Yojana) ಮೂಲಕ ರೈತರಿಗೆ ಆರ್ಥಿಕ ನೆರವನ್ನು ಕೂಡ ನೀಡುತ್ತಿದೆ.

 

ಇದೀಗ ಈ ಯೋಜನೆಯ 14 ನೇ ಕಂತಿನ ಹಣಕ್ಕಾಗಿ ಜನರು ಕಾತುರದಿಂದ ಕಾದು ಕುಳಿತಿದ್ದಾರೆ. ಸದ್ಯ ಕೇಂದ್ರ ಕೃಷಿ ಸಚಿವರು ಕಿಸಾನ್ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. 14ನೇ ಕಂತಿನ ಪಿಎಂ ಕಿಸಾನ್ ನಿಧಿ (PM Kisan Yojana-14th Installment) ಮೊತ್ತವನ್ನು ಈ ತಿಂಗಳು ಅಂದರೆ ಜುಲೈ 28 ರಂದು ರೈತರ ಖಾತೆಗೆ ವರ್ಗಾಯಿಸಲಾಗುವುದು ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ಆದರೆ ಕಿಸಾನ್ ಹಣವನ್ನು ಪಡೆಯಲು ನೀವು ಕೆಲ ಪ್ರಮುಖ ಕೆಲಸಗಳನ್ನು ಮಾಡಬೇಕಿದೆ‌. ಈ ಕೆಲಸ ಮಾಡಿದ ನಂತರವೇ 14ನೇ ಕಂತಿನ ಹಣ ನಿಮ್ಮ ಖಾತೆಗೆ ಬರುತ್ತದೆ. ಹೌದು, ಈ ಹಿಂದೆ ಇ-ಕೆವೈಸಿ ಮಾಡದ ರೈತರಿಗೆ ಸರ್ಕಾರ ಯೋಜನೆಯ ಕಂತಿನ ಹಣ ನೀಡಿಲ್ಲ, ಆದರೆ ಇನ್ನೂ ಅನೇಕ ರೈತರ ಇ-ಕೆವೈಸಿ ಪೂರ್ಣಗೊಳಿಸಿಲ್ಲ. ಇದಕ್ಕಾಗಿ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ವಿಶೇಷ ಅಭಿಯಾನವನ್ನೂ ಸಹ ನಡೆಸಲಾಗುತ್ತಿದೆ.

ಇದನ್ನು ಓದಿ: ಧರ್ಮಸ್ಥಳ ಸೌಜನ್ಯ ಪ್ರಕರಣ: ದೂರದ ಮೈಸೂರಲ್ಲಿ ಹೋರಾಟ – ದಕ್ಷಿಣ ಕನ್ನಡದ ಶಾಸಕ, ಸಂಸದ, ಮಂತ್ರಿ, ಮಠಾಧೀಶರ ಅಸಹನೀಯ ರಣ ಮೌನ !

ಇದುವರೆಗೆ e-kyc ಮಾಡುವ ಸೌಲಭ್ಯವು OTP ಅಥವಾ ‘ಬೆರಳಚ್ಚು’ ಮೂಲಕ ಮಾತ್ರ ಲಭ್ಯವಿತ್ತು. ಆದರೆ ಕಿಸಾನ್ ಫಲಾನುಭವಿಗಳು ಇದೀಗ OTP ಅಥವಾ ‘ಬೆರಳಚ್ಚು’ ಇಲ್ಲದೆಯೇ ತಮ್ಮ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ಇ-ಕೆವೈಸಿ ಪೂರ್ಣಗೊಳಿಸಬಹುದು. ಇದಕ್ಕಾಗಿ ಸರ್ಕಾರ ಮೊಬೈಲ್ ಅಪ್ಲಿಕೇಶನ್‌ನಲ್ಲಿ ‘ಫೇಸ್ ಅಥೆಂಟಿಕೇಶನ್’ ಸೌಲಭ್ಯವನ್ನು ಪರಿಚಯಿಸಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM Kisan Scheme Latest News) ಸರ್ಕಾರವು ರೈತರಿಗೆ ವಾರ್ಷಿಕ 6000 ರೂ. ಒದಗಿಸುತ್ತಿದ್ದು, ಈ ಬಾರಿ ದೇಶದ 9 ಕೋಟಿ ರೈತರಿಗೆ ಪ್ರಧಾನಿ ಕಿಸಾನ್ ನಿಧಿಯ ಹಣವನ್ನು 14ನೇ ಕಂತಿನ (PM Kisan 14th Instalment) ರೂಪದಲ್ಲಿ ನೀಡಲಾಗುವುದು ಎನ್ನಲಾಗಿದೆ. ಪ್ರಧಾನಿ ಮೋದಿ ಜುಲೈ 28 ರಂದು ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ರೈತರ ಖಾತೆಗೆ 18 ಸಾವಿರ ಕೋಟಿ ರೂಪಾಯಿಗಳನ್ನು ವರ್ಗಾಯಿಸಲಿದ್ದಾರೆ.‍

ಇದನ್ನು ಓದಿ: Snake garden video: ಹೂವಿನ ಬದಲು ರಾಶಿ ರಾಶಿ ಹಾವುಗಳನ್ನು ಬಿಡೋ ಅಪರೂಪದ ಮರ ! ವೈರಲ್ ವೀಡಿಯೋ ! 

Leave A Reply

Your email address will not be published.