Arecanut price: ಅಡಿಕೆ ಬೆಳೆಗಾರರಿಗೆ ಬಿಗ್ ಶಾಕ್ – ದಿಢೀರ್ ಎಂದು ಕುಸಿದ ಅಡಿಕೆ ಬೆಲೆ – ರೈತರು ಕಂಗಾಲು !!

Latest agriculture news arecanut price today update sudden decrease rate of arecanut

Arecanut price: ಮಳೆ, ಕೊಳೆಯಿಂದಾದ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಅಡಿಕೆ ಬೆಳೆಗಾರರು ಕೆಲವು ವಾರಗಳಿಂದ ನಿರಂತರವಾಗಿ ಅಡಿಕೆ ಬೆಲೆ ಏರಿಕೆ ಕಾಣುತ್ತಿದ್ದರಿಂದ ತುಂಬಾ ಸಂತಸದಿಂದಿದ್ದರು. ಆದರೀಗ ಈ ಬೆನ್ನಲ್ಲೇ ಅಡಿಕೆ ಬೆಳೆಗಾರರಿಗೆ (Arecanut price) ಬಿಗ್ ಶಾಕ್ ಎದುರಾಗಿದ್ದು, ಅಡಿಕೆ ಬೆಲೆಯು ಇದ್ದಕ್ಕಿದ್ದಂತೆ ಕುಸಿತ ಕಂಡಿದೆ.

ಹೌದು, ಕೆಲ ಸಮಯದಿಂದ ದಾವಣಗೆರೆ(Davangere) ಅಡಿಕೆ ಧಾರಣೆಯಲ್ಲಿ (ಜು10) ದಿನದಿಂದ ದಿನಕ್ಕೆ ಭಾರೀ ಚೇತರಿಕೆ ಕಂಡಿದ್ದು ರೈತರು ನಿಟ್ಟುಸಿರು ಬಿಟ್ಟಿದ್ದರು. ಆದರೀಗ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರದಲ್ಲಿ ನಿನ್ನೆ ದಿನ ಡಿಢೀರ್ ಎಂದು 2,300 ದರ ಇಳಿಕೆಯಾಗಿದೆ . ಕಳೆದ ಒಂದು ತಿಂಗಳಿಂದ ಅಡಿಕೆ ಬೆಲೆ ಏರಿಕೆಯಾಗುತ್ತಾ ಬಂದಿತ್ತು, ಇದೀಗ ಕುಸಿತದ ಕಡೆ ಮುಖ ಮಾಡಿರುವುದು ರೈತರು ಕಂಗಾಲಾಗುವಂತೆ ಮಾಡಿದೆ.

ಅಂದಹಾಗೆ ಹಿಂದಿನ ದಿನದ ಬೆಲೆ ಕ್ವಿಂಟಾಲ್ ಗೆ‌ 57,399 ರೂ. ಇತ್ತು. ಇದೀಗ ಬೆಲೆ ಕುಸಿತದಿಂದಾಗಿ ನಿನ್ನೆ ದಿನ ಇಂದು(17) ಜಿಲ್ಲೆಯಲ್ಲಿ 55,699 ದರಕ್ಕೆ ಮಾರಾಟವಾಗಿದೆ. ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇ ನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ನಲ್ಲಿ 50 ಸಾವಿರ ಗಡಿ ದಾಟಿದ್ದ ಬೆಲೆ, ಜುಲೈನಲ್ಲಿ 57 ಸಾವಿರ ಗಡಿ ದಾಟಿತ್ತು.

ಇಷ್ಟೇ ಅಲ್ಲದೆ ನಿನ್ನೆ (ಜು.17) ಉತ್ತಮ ರಾಶಿ ಅಡಿಕೆ ಗರಿಷ್ಠ ಬೆಲೆ 55,699 ರೂ.ಗೆ ಮಾರಾಟವಾಗಿದೆ. ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಜು.17ರಂದು ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 52,212 ಗರಿಷ್ಠ ಬೆಲೆ 55,699 ಹಾಗೂ ಸರಾಸರಿ ಬೆಲೆ 54,435 ರೂ.ಗೆ ಮಾರಾಟವಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಬೆಲೆ ಏರುತ್ತದೆಯೋ ಇಲ್ಲ ಇಳಿಮುಖ ಕಾಣುತ್ತದೆಯೋ ನೋಡಬೇಕು.

ಇದನ್ನೂ ಓದಿ: ಇನ್ನು ಮುಂದೆ ಮನೆ ಆಸ್ತಿ ದಾಖಲೆಗಳು ಮನೆಗೇ ಬರಲಿದೆ – ಡಿಕೆ ಶಿವಕುಮರ್ ಕೊಟ್ರು ಬಿಗ್ ಅಪ್ಡೇಟ್ !

Leave A Reply

Your email address will not be published.