Namaz: ಶುಕ್ರವಾರ ನಮಾಜ್’ಗೆ 1 ಗಂಟೆ ಅವಕಾಶ, ವಿಧಾನಸಭೆಯಲ್ಲಿ ನಮಾಜ್ – ನಿರ್ಧಾರ ಸರ್ಕಾರದ ಅಂಗಳದಲ್ಲಿ !

latest news political news One hour reserved for Friday Namaz

Namaz: ಮುಸಲ್ಮಾನರು ಪ್ರತಿ ಶುಕ್ರವಾರ ನಮಾಜ್ (Namaz) ಮಾಡುತ್ತಾರೆ. ಸದ್ಯ ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಮ್ ನೌಕರರ ಕ್ಷೇಮಾಭಿವೃದ್ಧಿ ಸಂಘ (Karnataka State Government Muslim Employees Welfare Association) ನಮಾಜ್ ಕುರಿತು ರಾಜ್ಯ ಸರ್ಕಾರಕ್ಕೆ ಮನವಿಯೊಂದನ್ನು ಸಲ್ಲಿಸಿದೆ. ಪ್ರತಿ ಶುಕ್ರವಾರದ ನಮಾಜ್​ಗೆ (Friday Namaz) ಒಂದು ಗಂಟೆ ಮೀಸಲು ಹಾಗೂ ರಂಜಾನ್ (Ramadan) ಮಾಸದಲ್ಲಿ ಅರ್ಧ ಗಂಟೆ ಬೇಗ ಹೊರಡಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕ್ಷೇಮಾಭಿವೃದ್ಧಿ ಸಂಘ ಮನವಿ ಸಲ್ಲಿಸಿದೆ. ಈ ಪತ್ರವನ್ನು ಸಚಿವ ರಹೀಮ್ ಖಾನ್ (Minister Rahim Khan) ಅವರಿಗೆ ಸಲ್ಲಿಕೆ ಮಾಡಲಾಗಿದೆ.

ಶುಕ್ರವಾರದ ಪ್ರಾರ್ಥನೆಗೆ ಒಂದು ಗಂಟೆಯ ಅವಕಾಶ ಮತ್ತು ರಂಜಾನ್ ತಿಂಗಳಲ್ಲಿ ಅರ್ಧ ಗಂಟೆ ಬೇಗ ಹೋಗುವ ಅವಕಾಶ ಕೇಂದ್ರ ಸರ್ಕಾರದ ಆದೇಶದಲ್ಲಿದೆ. ಆದರೆ, ಈ ಆದೇಶ ಹಳೆಯದಾಗಿದೆ, ಇದನ್ನು ಪುನಃ ಪರಿಶೀಲಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಮ್ ನೌಕರರ ಕ್ಷೇಮಾಭಿವೃದ್ಧಿ ಸಂಘ ಅಬ್ದುಲ್ ರಹೀಮ್ ಹೇಳಿದ್ದಾರೆ.

ಅಲ್ಲದೆ, ಮಧ್ಯಾಹ್ನದ ವೇಳೆ ವಿಧಾನಸೌಧದಲ್ಲಿ ನಮಾಜ್ ಮಾಡಲು ಅವಕಾಶ ಕೊಡಿ. ವಿಧಾನಸೌಧದಲ್ಲಿ ಎಲ್ಲಿಯಾದರೂ ಒಂದು ಕೊಠಡಿ ಕೊಡಿ, ಅದರಲ್ಲಿ ನಮಾಜ್ ಮಾಡುತ್ತೇವೆ ಎಂದು ಜೆಡಿಎಸ್​ ಎಂಎಲ್​ಸಿ ಬಿಎಂ ಫಾರೂಕ್ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಸಚಿವರಾದ ಹೆಚ್​ಕೆ ಪಾಟೀಲ್ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಸಭಾಪತಿಗಳ ಜೊತೆ ಚರ್ಚೆ ಮಾಡೋಣ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇಷ್ಟು ಮಾತ್ರವಲ್ಲದೆ, ಇನ್ನೂ ಹಲವು ಬೇಡಿಕೆಗಳನ್ನು ಕ್ಷೇಮಾಭಿವೃದ್ಧಿ ಸಂಘ ರಾಜ್ಯ ಸರ್ಕಾರದ ಮುಂದಿಟ್ಟಿದೆ. ಕ್ರಿಯಾಶೀಲ ಅಧಿಕಾರಿ, ಉದ್ಯೋಗಿಯನ್ನು ಗುರುತಿಸಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಸನ್ಮಾನಿ ಉತ್ತೇಜಿಸುವುದು ಆಮೇಲೆ 1 ರಿಂದ 8ನೇತ ತರಗತಿ ಮಕ್ಕಳಿಗೆ ನೀಡಲಾಗುವುದ ಎನ್​ಪಿಎಸ್​ ವಿದ್ಯಾರ್ಥಿ ವೇತನ ಆರಂಭಿಸುವುದು ಈ ಬೇಡಿಕೆಯಲ್ಲಿ ಸೇರಿದೆ.

ಕರ್ನಾಟಕ ಉರ್ದು ಅಕಾಡೆಮಿಗೆ ಅಧ್ಯಕ್ಷರ ನೇಮಕ ಮಾಡುವುದು. ಡಿಸೆಂಬರ್ 18ರಂದ ಪುನಃ ಅಲ್ಪಸಂಖ್ಯಾತರ ದಿನಾಚರಣೆಗೆ ಅವಕಾಶ ನೀಡುವುದು. ಕೆಪಿಎಸ್​ಸಿ ತಜ್ಞರ ಸಮಿತಿಯಲ್ಲಿ ಸಮುದಾಯದ ತಜ್ಞರನ್ನು ಪರಿಗಣಿಸುವುದು. ಇಷ್ಟೂ ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟಿದೆ. ಈ ಬಗ್ಗೆ ಸಚಿವ ರಹೀಮ್ ಖಾನ್ ಪ್ರತಿಕ್ರಿಯೆ ನೀಡಿದ್ದು, ಎಲ್ಲಾ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.

Leave A Reply

Your email address will not be published.