BJP tweet on Congress guarantee: ಗೃಹ ಜ್ಯೋತಿ ತಲೆ ಮೇಲೆ ಟೋಪಿ, ಅನ್ನಭಾಗ್ಯ ಕಿವಿ ಮೇಲೆ ಲಾಲ್ ಬಾಗ್ – ಸರ್ಕಾರದ ಮೇಲೆ ಬಿಜೆಪಿ ಟ್ವೀತಾಸ್ತ್ರ !

Latest news political news Gruha Jyothi scheme Anna bhagya Scheme BJP tweet on Congress guarantee

BJP tweet on Congress guarantee: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ಇಲ್ಲಿಯವರೆಗೂ ಟೀಕೆ ಮಾಡುತ್ತಲೇ ಬಂದಿದೆ. ಈಗಾಗಲೇ ‘ಅನ್ನಭಾಗ್ಯ’, ‘ಗೃಹ ಜ್ಯೋತಿ’ ಮತ್ತು ‘ಶಕ್ತಿ’ ಯೋಜನೆ ಜಾರಿ ಮಾಡಿದ್ದು, ರಾಜ್ಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದರೂ ಕೂಡ, ಈ ಕುರಿತು ಬಿಜೆಪಿ ಮಾತ್ರ ಟೀಕಾಪ್ರಹಾರ ನಡೆಸುತ್ತಾ ಬಂದಿದೆ. ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಬಿಜೆಪಿ(BJP tweet on Congress guarantee), ಅನ್ನಭಾಗ್ಯ (Anna bhagya Scheme) ಮತ್ತು ಗೃಹಜ್ಯೋತಿ ಯೋಜನೆಗಳ (Gruha Jyothi scheme) ಬಗ್ಗೆ ವ್ಯಂಗ್ಯವಾಡಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ, “ರಾಜ್ಯದಲ್ಲಿ ಸಿದ್ದರಾಮಯ್ಯ ಅವರ #ATMSarakara ಎಡಬಿಡಂಗಿ ‌ನಿರ್ಧಾರಗಳು” ಎಂದು ‘ಗೃಹಜ್ಯೋತಿ’ ಯೋಜನೆ ಬಗ್ಗೆ ವ್ಯಂಗ್ಯ ಮಾಡಿದೆ. “ಗೃಹಜ್ಯೋತಿ ತಲೆಮೇಲೆ ಟೋಪಿ. ಎಲ್ಲರಿಗೂ ಫ್ರೀ 200 ಯುನಿಟ್ ವಿದ್ಯುತ್ ಎಂದು ಚುನಾವಣೆಯ(election) ಮೊದಲು ಘೋಷಿಸಿದ್ದರು. ಆದರೆ, ಈಗ ಹೊಸ‌ ಮನೆ ನಿರ್ಮಿಸಿಕೊಂಡವರಿಗೆ, ಬಾಡಿಗೆದಾರರಿಗೆ ಉಚಿತ ವಿದ್ಯುತ್‌ ಇಲ್ಲ” ಎಂದು ಕುಟುಕಿದೆ.

“ಜುಲೈ ಅಥವಾ ಆಗಸ್ಟ್ ತಿಂಗಳಿಂದ ಉಚಿತ ವಿದ್ಯುತ್ (free electricity) ಎಂದು ಕಾಂಗ್ರೆಸ್ ಹೇಳಿತ್ತು. ಆದರೆ, ಜೂನ್ 17 ಮತ್ತು 18ರಂದು ಹಾಕಿದ ಅರ್ಜಿಗಳು ಸ್ವೀಕೃತಗೊಂಡಿಲ್ಲ..!, ಸರ್ವರ್ ಬ್ಯೂಸಿ ಅರ್ಜಿಗಳು ಸ್ವೀಕಾರ ಆಗುತ್ತಿಲ್ಲ..! ಮತ್ತು ಗೃಹ ಜ್ಯೋತಿ ಕೊಡುವ ಮುನ್ನವೇ ಮತ್ತೆ ಹೆಚ್ಚುವರಿ 200 ರೂ. ವಿದ್ಯುತ್ ಬಿಲ್..!”ಎಂದು ಗೃಹ ಜ್ಯೋತಿ ಯೋಜನೆ ಬಗ್ಗೆ ವ್ಯಂಗ್ಯವಾಡಿದೆ.

ಇನ್ನು ಅನ್ನಭಾಗ್ಯ ಯೋಜನೆಯ ಬಗ್ಗೆ ಟ್ರೀಟಾಸ್ತ್ರ ಮಾಡಿರುವ ಬಿಜೆಪಿಯು, ” ಅನ್ನಭಾಗ್ಯ ಯೋಜನೆ ಹೆಸರಿನಲ್ಲಿ ಜನರ ಕಿವಿ ಮೇಲೆ ಲಾಲ್ ಬಾಗ್ ಇಡಲಾಗಿದೆ.10 ಕೆಜಿ ಅಕ್ಕಿ ಎಲ್ಲರಿಗೂ ಪ್ರೀ..! 5 ಕೆಜಿ ಅಕ್ಕಿ ಎಫ್‌ಸಿಐ ಕೊಡುತ್ತಿಲ್ಲ..!, ಯಾವ ರಾಜ್ಯದಲ್ಲೂ ಅಕ್ಕಿ ಸಿಗುತ್ತಿಲ್ಲ..!, 5 ಕೆಜಿ ಕೇಂದ್ರ ಸರ್ಕಾರದ ಅಕ್ಕಿ ಜೊತೆ 5 ಕೆಜಿ ಅಕ್ಕಿ ಹಣ..!, 5 ಕೆಜಿ ಪ್ರಧಾನಿ ಮೋದಿ ಸರ್ಕಾರದ ಅಕ್ಕಿಯಲ್ಲಿ #ATMSarkaraಕ್ಕೆ 2 ಕೆಜಿ ಕಮಿಷನ್..! ಮತ್ತು ಪಡಿತರ ಚೀಟಿದಾರರಿಗೆ (Ration card) ಕೇವಲ 3 ಕೆಜಿ ಅಕ್ಕಿ ಮಾತ್ರ ವಿತರಣೆ..!’ ಎಂದು ಬಿಜೆಪಿ ಆರೋಪಿಸಿದೆ.

“ರಾಜ್ಯದ #ATMSarkaraದ ಆಡಳಿತದಿಂದಾಗಿ ಜನತೆ ಹೊಟ್ಟೆ ತುಂಬಾ ಒಂದೊಪ್ಪತ್ತಿನ ಊಟ ಮಾಡಲು ಎರೆಡೆರಡು ಬಾರಿ ಯೋಚಿಸುವಂತಾಗಿದೆ. ತರಕಾರಿ, ಹಾಲು, ದಿನಸಿ ಪದಾರ್ಥಗಳ ಬೆಲೆ ಕಾಂಗ್ರೆಸ್ ಸರ್ಕಾರದಡಿಯಲ್ಲಿ ಏರಿದೆ, ಇನ್ನೂ ಏರಲಿದೆ! ಇಷ್ಟು ಸಾಲದ್ದಕ್ಕೆ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಈಗ ಆ ಪಟ್ಟಿಗೆ ಮೀನುಗಳ ದರವೂ (Fish price hike) ಸೇರಿದ್ದು, ಮಾಂಸಹಾರಿಗಳ ಜೇಬು ಬರಿದಾಗುತ್ತಿದೆ. ಬರ ಹಾಗೂ ಬೆಲೆಯೇರಿಕೆಯಿಂದ ಬಸವಳಿದಿದ್ದ ರೈತರಿಗೆ, ಈಗ ಹಾಲಿನ ದರವನ್ನು ಸಹ ಕಡಿತಗೊಳಿಸುವ ಮೂಲಕ #ATMSarkara ಗಾಯದ ಮೇಲೆ ಬರೆ ಎಳೆದಿದೆ.”ಎಂದು ಬಿಜೆಪಿ ಕಾಂಗ್ರೆಸ್ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದೆ.

 

https://twitter.com/BJP4Karnataka/status/1680445220083888129?ref_src=twsrc%5Etfw

 

ಇದನ್ನು ಓದಿ: ಸವಣೂರು: ಅನಾರೋಗ್ಯದಿಂದ ಬಳಲುತ್ತಿರುವ ಕೂಲಿಕಾರ್ಮಿಕ ,ನೆರವಿನ ನಿರೀಕ್ಷೆಯಲ್ಲಿ ಕುಟುಂಬ 

Leave A Reply

Your email address will not be published.