Home News Onion Storage: ರೈತರಿಗೆ ಗುಡ್ ನ್ಯೂಸ್: ಎಷ್ಟು ದಿನ ಆದ್ರೂ ಈರುಳ್ಳಿ ಕೊಳೆಯದೇ ಇರ್ಬೇಕಾ, ಹಾಗಿದ್ರೆ...

Onion Storage: ರೈತರಿಗೆ ಗುಡ್ ನ್ಯೂಸ್: ಎಷ್ಟು ದಿನ ಆದ್ರೂ ಈರುಳ್ಳಿ ಕೊಳೆಯದೇ ಇರ್ಬೇಕಾ, ಹಾಗಿದ್ರೆ ಈ ನ್ಯೂಸ್ ನಿಮಗಾಗಿ !

Onion Storage
image source: ABP news

Hindu neighbor gifts plot of land

Hindu neighbour gifts land to Muslim journalist

Onion Storage: ಅಡುಗೆಯಲ್ಲಿ ಅತ್ಯಗತ್ಯವಾಗಿರುವ ಈರುಳ್ಳಿಯನ್ನು ಆಹಾರಕ್ಕೆ ಸೇರಿಸುವುದರಿಂದ ರುಚಿ ಹೆಚ್ಚುವುದಲ್ಲದೆ ದೇಹಕ್ಕೆ ಆರೋಗ್ಯವೂ ಸಿಗುತ್ತದೆ. ಈರುಳ್ಳಿಯಲ್ಲಿ (Onion) ಸಲ್ಫರ್, ವಿಟಮಿನ್ ಸಿ, ಫೋಲೇಟ್, ವಿಟಮಿನ್ ಬಿ6 ಮತ್ತು ಪೊಟ್ಯಾಶಿಯಂನಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಆದ್ದರಿಂದ ಈರುಳ್ಳಿಗೆ ವರ್ಷ ಪೂರ್ತಿ ಬೇಡಿಕೆ ಇರುತ್ತದೆ.

ಆದರೆ ಪ್ರತಿ ವರ್ಷ ಈರುಳ್ಳಿ ದರ ಬಳಕೆದಾರರನ್ನು ಕಂಗಾಲು ಮಾಡುತ್ತಿದೆ, ಮತ್ತೊಂದೆಡೆ ಈರುಳ್ಳಿ ಕೊಳೆತು ಹೋಗುವುದರಿಂದ ರೈತಾಪಿ ವರ್ಗ ಕೂಡಾ ಸಂಕಷ್ಟಕ್ಕೆ ಈಡಾಗುತ್ತಿದೆ ಎಂಬ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಈರುಳ್ಳಿ ಜೀವಿತಾವಧಿ ಹೆಚ್ಚಳದ (Onion Storage) ನಿಟ್ಟಿನಲ್ಲಿ ವಿಕಿರಣ ಚಿಕಿತ್ಸೆ ನೀಡುವ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಿದೆ.

ಭಾರತದಲ್ಲಿ ಪ್ರತಿ ವರ್ಷ 3 ಕೋಟಿ ಟನ್‌ಗೂ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತದೆ. ಆದರೆ ಕಟಾವಿನ ನಂತರ ನಾನಾ ಕಾರಣದಿಂದ ಈರುಳ್ಳಿ ಹಾಳಾಗುವ ಪ್ರಮಾಣ ಶೇ. 25ರಷ್ಟಿದೆ. ಅದನ್ನು ಶೇ.10 – ಶೇ.12ಕ್ಕೆ ಇಳಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.

ಆದ್ದರಿಂದ ವಿಕಿರಣ ಚಿಕಿತ್ಸೆ ಯೋಜನೆಯ ಭಾಗವಾಗಿ ಮಹಾರಾಷ್ಟ್ರದ ಲಸಲ್‌ಗಾಂವ್‌ನಲ್ಲಿ 150 ಟನ್‌ಗಳಷ್ಟು ಈರುಳ್ಳಿಯನ್ನು ಕೋಬಾಲ್ಟ್‌-60 ಮೂಲಕ ಗಾಮಾ ವಿಕಿರಣಗಳಿಗೆ ಒಳಪಡಿಸಿ, ಅವು ಹೆಚ್ಚು ಕಾಲ ಕೆಡದಂತೆ ಕಾಪಾಡುವ ಪ್ರಯೋಗವನ್ನು ಆರಂಭಿಸಲಾಗಿದೆ. ಇದರಿಂದ ರೈತರು ತಾವು ಬೆಳೆದ ಬೆಳೆಯನ್ನು ಹೆಚ್ಚು ಕಾಲ ಮನೆಯಲ್ಲಿ, ಗೋದಾಮಿನಲ್ಲಿ ಅಥವಾ ಸರ್ಕಾರಗಳು ಶೀತಲಗೃಹದಲ್ಲಿ ಇಟ್ಟುಕೊಳ್ಳಬಹುದಾಗಿದೆ. ಇದರಿಂದ ಈರುಳ್ಳಿ ಕೊರತೆ ತಪ್ಪಿ, ಗ್ರಾಹಕರಿಗೆ ಸೂಕ್ತ ಬೆಲೆಯಲ್ಲಿ ಉತ್ಪನ್ನ ಲಭ್ಯವಾದರೆ, ರೈತರಿಗೆ ಕೊಳೆತು ಹೋಗುವುದರಿಂದ ಆಗುವ ನಷ್ಟ ತಪ್ಪಿ ಆದಾಯ ಹೆಚ್ಚುತ್ತದೆ.

ಈಗಾಗಲೇ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯುವು, ಪರಮಾಣು ಇಂಧನ ಇಲಾಖೆ ಮತ್ತು ಭಾಭಾ ಪರಮಾಣು ಸಂಶೋಧನಾ ಕೇಂದ್ರದ ನೆರವಿನೊಂದಿಗೆ ‘ಗಾಮಾ ರೇಡಿಯೇಷನ್‌’ (ವಿಕಿರಣ ಚಿಕಿತ್ಸೆ) ಎಂಬ ತಂತ್ರಜ್ಞಾನವನ್ನು ಈರುಳ್ಳಿ ಮೇಲೆ ಬಳಸಲು ನಿರ್ಧರಿಸಲಾಗಿದೆ. ಈ ಯೋಜನೆಯಡಿ ಈರುಳ್ಳಿ ಮೇಲೆ ಗಾಮಾ ಕಿರಣಗಳನ್ನು ಹಾಯಿಸಲಾಗುತ್ತದೆ. ಇದರಿಂದಾಗಿ ಈರುಳ್ಳಿ ಕೊಳೆಯುವುದು ಕಡಿಮೆಯಾಗುತ್ತದೆ ಮತ್ತು ಅದರ ಜೀವಿತಾವಧಿ ಹೆಚ್ಚುತ್ತದೆ ಎಂದು ಕಂಡು ಹಿಡಿಯಲಾಗಿದೆ.

ಇನ್ನು ಈ ವಿಕಿರಣ ಚಿಕಿತ್ಸೆಯಿಂದ, ವಸ್ತುವಿನ ಮಾನವ ಬಳಕೆಗೆ ಯಾವುದೇ ಅಪಾಯ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಮೆರಿಕ ಆಹಾರ ಹಾಗೂ ಔಷಧ ನಿಯಂತ್ರಣ ಸಂಸ್ಥೆಗಳು ನಡೆಸಿದ ಹಲವು ಅಧ್ಯಯನ ವರದಿ ಸಾಬೀತುಪಡಿಸಿವೆ. ಜೊತೆಗೆ ವಿಕಿರಣ ಚಿಕಿತ್ಸೆಯಿಂದ ಈರುಳ್ಳಿಯ ಬಳಕೆಯ ಅವಧಿ ಹೆಚ್ಚುವುದು ಮಾತ್ರವಲ್ಲದೇ, ಈರುಳ್ಳಿ ಕೊಳೆಯಲು ಕಾರಣವಾಗುವ ಕೀಟ, ಬ್ಯಾಕ್ಟೀರಿಯಾಗಳನ್ನೂ ಕೊಲ್ಲುವ ಕಾರಣ ಅದರ ಸೇವನೆಯಿಂದ ಹಬ್ಬಬಹುದಾದ ಖಾಯಿಲೆ ಕೂಡಾ ತಡೆಯಬಹುದಾಗಿದೆ.

 

ಇದನ್ನು ಓದಿ: Dr. Dinesh Gundurao: ಬರೀ ಮೈತ್ರಿ ಅಲ್ಲ…! ಬಿಜೆಪಿಯೊಳಗೆ ಜೆಡಿಎಸ್ ವಿಲೀನ ?! ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ