

Amazon: ಈಗ ಬಹಳಷ್ಟು ಮಂದಿ ಇ-ಕಾಮರ್ಸ್ ವೆಬ್ಲೆಟ್ ನಿಂದಲೇ ತಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡುತ್ತಾರೆ. ಅಂತೆಯೇ ಇ ಕಾಮರ್ಸ್ ವೆಬ್ ಸೈಟ್‌ನಲ್ಲಿ ಆರ್ಡರ್ ಮಾಡಿದಾಗ ತಪ್ಪಾದ ಪ್ರಾಡೆಕ್ಟ್ ಗಳು ಬರುವುದು ಮಾಮೂಲಾಗಿ ಹೋಗಿದೆ. ಸದ್ಯ ಗ್ರಾಹಕರೊಬ್ಬರು ಅಮೆಝಾನ್‌ನಲ್ಲಿ (Amazon) 90,000 ರೂ.ಗಳ ಕ್ಯಾಮೆರಾ ಲೆನ್ಸ್‌ಗೆ ಆರ್ಡರ್ ಮಾಡಿದ್ದರು ಆದರೆ, ಅವರಿಗೆ ಸಿಕ್ಕಿದ್ದು ನವಣೆ ಅಕ್ಕಿ.
ಹೌದು, ಅರುಣ್ ಕುಮಾರ್ ಮೆಹರ್ ಎಂಬ ಗ್ರಾಹಕರು ಜು 5ರಂದು ಸಿನ್ಮಾ 24-70 ಎಫ್ 28 ಲೆನ್ಸ್ ಗಾಗಿ ಅಮೆಝಾನ್‌ಗೆ ಆರ್ಡರ್ ನೀಡಿದ್ದಾರೆ. ತಾನು ಆರ್ಡರ್ ಮಾಡಿದ ಪಾರ್ಸಲ್ ಬಂತು ಎಂದು ಖುಷಿಯಿಂದ ಪಾರ್ಸೆಲ್ ಓಪನ್ ಮಾಡಿದರೆ ಅವರಿಗೆ ಶಾಕ್ ಆಗಿದೆ. ಯಾಕಂದ್ರೆ ಬಾಕ್ಸ್ ಅಲ್ಲಿ ಕ್ಯಾಮೆರಾ ಲೆನ್ಸ್ ಬದಲು ನವಣೆ ಅಕ್ಕಿಯ ಕಾಳುಗಳಿದ್ದವು.

ಈ ಬಗ್ಗೆ ಅರುಣ್ ಕುಮಾರ್ ಮೆಹರ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಲೆನ್ಸ್ ಪೆಟ್ಟಿಗೆಯಲ್ಲಿ ನವಣೆ ಅಕ್ಕಿಯ ಕಾಳುಗಳನ್ನು ತುಂಬಿರುವ ಒಂದೆರಡು ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ. ಅಲ್ಲದೆ, ಆ ಲೆನ್ಸ್ ಪೆಟ್ಟಿಗೆಯೂ ತೆರೆದಿತ್ತು ಎಂದು ಬರೆದಿದ್ದಾರೆ. ಆದಷ್ಟೂ ಬೇಗನೆ ಅಮೆಜಾನ್ ಈ ಸಮಸ್ಯೆಯನ್ನು ಬಗೆಹರಿಸಬೇಕು. ಮತ್ತು ಆರ್ಡರ್ ಮಾಡಿರುವ ಲೆನ್ಸ್ ಕಳಿಸಿಕೊಡಿ ಅಥವಾ ಹಣವನ್ನು ಮರುಪಾವತಿ ಮಾಡಿ ಎಂದು ಆಗ್ರಹಿಸಿದ್ದಾರೆ.
ಅರುಣ್ ಕುಮಾರ್ ಟ್ವೀಟ್ ಗೆ ಹಲವಾರು ಜನರು ಪ್ರತಿಕ್ರಿಯೆ ನೀಡಿದ್ದು, ಕೆಲವರು ತಮಗೂ ಅಂತಹದೇ ರೀತಿ ಅನುಭವ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು ಈ ರೀತಿ ಆಗಿರುವುದಕ್ಕೆ ವಿಷಾಧ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಇ-ಕಾಮರ್ಸ್ ವೆಬ್ಲೆಟ್ ನಿಂದ ವಸ್ತು ಆರ್ಡರ್ ಮಾಡುವಾಗ ಎಚ್ಚರದಿಂದಿರಬೇಕು ಅದೆಷ್ಟೋ ಜನರು ಮೋಸ ಹೋದ ಪ್ರಕರಣಗಳೂ ಇವೆ.
ಇದನ್ನೂ ಓದಿ: D K Shivkumar: ಮುಂದಿನ 2.5 ವರ್ಷ ಡಿಕೆಶಿ ಮುಖ್ಯಮಂತ್ರಿ ಇಲ್ಲ ! ದೇಶಪಾಂಡೆ ಹೇಳಿಕೆ ಬೆನ್ನಲ್ಲೇ ಒಪ್ಪಿಕೊಂಡ್ರಾ ಡಿಕೆಶಿ ?!













