D K Shivkumar: ಮುಂದಿನ 2.5 ವರ್ಷ ಡಿಕೆಶಿ ಮುಖ್ಯಮಂತ್ರಿ ಇಲ್ಲ ! ದೇಶಪಾಂಡೆ ಹೇಳಿಕೆ ಬೆನ್ನಲ್ಲೇ ಒಪ್ಪಿಕೊಂಡ್ರಾ ಡಿಕೆಶಿ ?!
Latest Karnataka political news DK Shivakumar Reacts On RV Deshpande Statement On CM Change
D K Shivkumar: ಕಾಂಗ್ರೆಸ್ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಕಂಡು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಯ ಸ್ಥಾನಕ್ಕೆ ಭಾರೀ ಪೈಪೋಟಿ ನಡೆದಿತ್ತು. ಮುಖ್ಯಮಂತ್ರಿ ತಾನಾಗಬೇಕು, ನಾನಾಗಬೇಕೆಂದು ಕಾಂಗ್ರೆಸ್ ನ ಇಬ್ಬರು ಘಟಾನುಘಟಿಗಳಾದ ಸಿದ್ದರಾಮಯ್ಯ(Siddaramaiah) ಹಾಗೂ ಡಿ ಕೆ ಶಿವಕುಮಾರ್ ದೆಹಲಿಯಲ್ಲಿ ಟಿಕಾಣಿ ಹೂಡಿದ್ದರು. ಅಂತೂ ಕೊನೆಗೂ ಕನಕಪುರದ ಬಂಡೆ ತನ್ನ ಆಕಾಂಕ್ಷಿಯ ಸ್ಥಾನವನ್ನು ಬಿಟ್ಟುಕೊಟ್ಟರು.
ಕರ್ನಾಟಕ ಮುಖ್ಯಮಂತ್ರಿ (Karnataka CM) ಸ್ಥಾನ ತನಗೆ ಬೇಕೇ ಬೇಕೆಂದು ಪಟ್ಟು ಹಿಡಿದು ಕೂತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D K Shivkumar) ಅವರು ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಿ ಉಪಮುಖ್ಯಮಂತ್ರಿ (DCM) ಸ್ಥಾನ ಸ್ವೀಕರಿಸಿರುವ ಸುದ್ದಿ ಎಲ್ಲರಿಗೂ ತಿಳಿದಿದೆ. ಅಲ್ಲದೆ, ಸಿದ್ದರಾಮಯ್ಯ 2.5 ವರ್ಷ ಆಡಳಿತ ನಡೆಸಿದರೆ, ಶಿವಕುಮಾರ್ 2.5 ವರ್ಷ ರಾಜ್ಯ ಆಡಳಿತ ನಡೆಸುತ್ತಾರೆ ಎನ್ನಲಾಗಿತ್ತು.
ಮುಂದಿನ 2.5 ವರ್ಷ ಡಿಕೆಶಿ ಮುಖ್ಯಮಂತ್ರಿ ಇಲ್ಲ, ದೇಶಪಾಂಡೆ ಹೇಳಿಕೆ ಬೆನ್ನಲ್ಲೇ ಡಿಕೆಶಿ ಪ್ರತಿಕ್ರಿಯೆ ನೀಡಿದ್ದು , “ನಾನು ಹೈಕಮಾಂಡ್ ವಿಚಾರವಾಗಿ ಚರ್ಚೆ ಮಾಡಲ್ಲ. ಅವರು ಹಿರಿಯರು. ಹೈಕಮಾಂಡ್ ಅವರು ನನಗೆ ಕೆಲಸ ಮಾಡಲು ಹೇಳಿದ್ದಾರೆ. ನಾನು, ಸಿದ್ದರಾಮಯ್ಯ ಮತ್ತು ವರಿಷ್ಠರು ಕೆಲವೊಂದು ವಿಚಾರಗಳನ್ನು ಮಾತನಾಡಿದ್ದೇವೆ. ನಾನು ಅದನ್ನೆಲ್ಲ ಬಹಿರಂಗ ಮಾಡಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Education department: ಬಿಸಿಯೂಟದ ಸ್ತ್ರೀಯರು ಬಳೆ ಹಾಕುವಂತಿಲ್ಲ !! ಹಿಂದೂಗಳ ಕೆಂಗಣ್ಣಿಗೆ ಗುರಿಯಾದ ಶಿಕ್ಷಣ ಇಲಾಖೆ !