Education department: ಬಿಸಿಯೂಟದ ಸ್ತ್ರೀಯರು ಬಳೆ ಹಾಕುವಂತಿಲ್ಲ !! ಹಿಂದೂಗಳ ಕೆಂಗಣ್ಣಿಗೆ ಗುರಿಯಾದ ಶಿಕ್ಷಣ ಇಲಾಖೆ !
Latest education News new guidelines published to cookware workers by Education department Karnataka
Education department: ಶಾಲಾ ಬಿಸಿ ಊಟದಲ್ಲಿ ಶಿಕ್ಷಣ ಇಲಾಖೆ(Education department)ಅಥವಾ ಸರ್ಕಾರ ಆಗಾಗ ಕೆಲ ಬದಲಾವಣೆಗಳನ್ನು ತರುವುದಲ್ಲದೆ ಹೊಸ ನಿಯಮಗಳನ್ನು ಜಾರಿಗೊಳಿಸುತ್ತದೆ. ಅಂತೆಯೇ ಇದೀಗ ಇಲಾಖೆಯು ಬಿಸಿ ಊಟದ ಬಗ್ಗೆ ಹೊಸ ನಿಯಮವೊಂದನ್ನು ಜಾರಿಗೆ ತರುವ ಕುರಿತು ಪ್ರಕಟಣೆ ಹೊರಡಿಸಿ ಹಿಂದೂ ಕೆಂಗಣ್ಣಿಗೆ ಗುರಿಯಾಗಿದೆ.
ಶಾಲೆಗಳಲ್ಲಿ(School)ಮಕ್ಕಳಿಗೆ ಸಹಾಯವಾಗಲಿ, ಮಕ್ಕಳು ಹಸಿವಿನಿಂದ ಬಳಲದಿರಲಿ ಎಂದು ಸರ್ಕಾರಗಳು ಹಲವು ವರ್ಷಗಳಿಂದ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟ (Middey meal scheme) ಯೋಜನೆ ಸ್ಥಾಪಿಸಿ, ನಡೆಸಿಕೊಂಡು ಬರುತ್ತಿರುವ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಅಂತೆಯೇ ಈ ಬಿಸಿ ಊಟದ ತಯಾರಿಕೆಯಲ್ಲಿನ ಗುಣಮಟ್ಟ ಸುರಕ್ಷತೆ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಸಿಬ್ಬಂದಿಗಳಿಗಾಗಿ ಕೆಲವು ನಿಯಮಗಳನ್ನು ತರುವುದು ಸಹಜ. ಆದರೆ ಈ ಬಾರಿ ಮಾತ್ರ ಇಲಾಖೆಯು ವಿಚಿತ್ರವಾದ ನಿಯಮವನ್ನು ಜಾರಿ ಮಾಡುವ ಕುರಿತು ಹೊಸ ಪ್ರಕರಣಟಣೆ ಹೊರಡಿಸಿದ್ದು, ಅಚ್ಚರಿಯೊಂದಿಗೆ ಹಲವು ಹಿಂದೂ ಕೆಂಗಣ್ಣಿಗೆ ಗುರಿಯಾಗಿದೆ.
ಹೌದು, ಮಧ್ಯಾಹ್ನದ ಬಿಸಿಯೂಟ ತಯಾರಿಕೆಯಲ್ಲಿನ ಗುಣಮಟ್ಟ ಸುರಕ್ಷತೆ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಿಬ್ಬಂದಿ ಪಾಲಿಸಬೇಕಾದ ನಿಯಮಗಳು ಕುರಿತಂತೆ ನೂತನ ಮಾರ್ಗಸೂಚಿಯಲ್ಲಿ ಶಿಕ್ಷಣ ಇಲಾಖೆ ಆದೇಶಿಸಿದೆ. ಬಿಸಿಯೂಟ ತಯಾರು ಮಾಡುವ ಅಡುಗೆ ಸಿಬ್ಬಂದಿ ಬಹುತೇಕ ಮಹಿಳೆಯರು ಬಳೆ, ಬಿಂದಿಗೆ ಧರಿಸುತ್ತಾರೆ. ಇದು ಊಟದ ಒಳಗೆ ಬಿದ್ದರೆ ಸಮಸ್ಯೆ ಆಗುತ್ತದೆ. ಹೀಗಾಗಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಬಿಸಿಯೂಟ ತಯಾರಿಕೆ ಸಿಬ್ಬಂದಿ ಕೈಗೆ ಬಳೆತೊಡದಂತೆ(Bangles)ಶಿಕ್ಷಣ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಆದರೀಗ ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಹಲವು ಹಿಂದು ಸಂಘಟನೆಗಳು ಶಿಕ್ಷಣ ಇಲಾಖೆಯ ನಡೆಯ ವಿರುದ್ಧ ಕಿಡಿಕಾರಿವೆ.
‘ರಾಜ್ಯದ್ಯಂತ 55 ಸಾವಿರ ಅಡುಗೆ ಸಿಬ್ಬಂದಿ ಇದ್ದು ಅವರಲ್ಲಿ ಬಹುತೇಕ ಮಂದಿ ಕುಂಕುಮ ಬಳೆ ಹಾಕುವವರೇ ಇದ್ದಾರೆ ಇಲಾಖೆಯ ಈ ಆದೇಶ ಈಗ ವೈಯಕ್ತಿಕ ಧಾರ್ಮಿಕ ಸ್ವಾತಂತ್ರ್ಯ ಕಿತ್ತು ಕೊಳ್ಳುವಂತಿದೆ. ಹಿಂದೂಗಳಿಗೆ, ಹಿಂದೂ ನಂಬಿಕೆಗಳಿಗೆ ಒಂದಿಲ್ಲೊಂದು ರೀತಿಯಲ್ಲಿ ತೊಂದರೆ ಕೊಡುತ್ತಲೇ ಬಂದಿರುವ ಈ ಕಾಂಗ್ರೆಸ್ ಸರ್ಕಾರ ಇದೀಗ ಶಾಲೆಯಲ್ಲೂ ಹಿಂದೂಗಳಿಗೆ ಅವಮಾನ ಮಾಡಲು ಹೊರಟಿದೆ’ ಎಂದು ಹಿಂದೂಪರ(Hindu) ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಅಲ್ಲದೆ ಕೋಟ್ಯಂತರ ತಾಯಂದಿರು ಮನೆಯಲ್ಲಿ ಕೈಗೆ ಬಳೆ ತೊಡದೇ ಅಡುಗೆ ಮಾಡ್ತಾರಾ? ಬಳೆ ತೊಟ್ಟು ಅವರು ಮಾಡುವ ಅಡುಗೆ ಸುರಕ್ಷತೆ, ಗುಣಮ್ಟಟದಲ್ಲಿಲ್ಲವಾ? ಶಿಕ್ಷಣ ಇಲಾಖೆ ಮೂಲಕ ಮೂಲಕ ಹಿಂದು ಧಾರ್ಮಿಕ ಸ್ವಾತಂತ್ರ್ಯ ಹತ್ತಿಕ್ಕುವ ನಿಯಮ ರೂಪಿಸಿರುವುದು ಉದ್ದೇಶ ಪೂರ್ವಕವಾಗಿದೆ. ಮಹಿಳೆಯರು ತೊಡುವ ಬಳೆಯಿಂದ ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಈ ಕೂಡಲೇ ಆದೇಶ ವಾಪಸ್ಸು ಪಡೆಯಬೇಕು.. ಇಲ್ಲವೆಂದರೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹಿಂದು ಜನಜಾಗೃತಿ ಸಮಿತಿ ಎಚ್ಚರಿಕೆ ನೀಡಿದೆ. ಆದರೆ ಸರ್ಕಾರ ಇನ್ನೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಂದಹಾಗೆ ಹಾಗೆ ಕಾಂಗ್ರೆಸ್ ಸರ್ಕಾರ(Congress Government)ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂ ವಿರೋಧಿ ಎಂಬ ಪಟ್ಟವನ್ನು ಕಟ್ಟಿಕೊಂಡಿದೆ. ಅಲ್ಲದೆ ಸರ್ಕಾರವು ಜಾರಿಗೆ ತಂದಿರುವ ಕೆಲವು ಯೋಜನೆಗಳು ಹಿಂದೂ ವಿರೋಧಿಯಾಗಿವೆ ಎಂದು ಬಿಂಬಿಸಲಾಗಿದೆ. ಸರ್ಕಾರದ ಕೆಲಸ ಜನರ ಹಿತ ಕಾಯುವುದು, ಜನರಿಚ್ಛೆಯಂತೆ ನಡೆಯುವುದು. ಆದರೆ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಈ ರೀತಿಯ ಕೆಲವು ವಿವಾದಾತ್ಮಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ, ಕೆಲವೊಂದರ ಕುರಿತು ಚಿಂತನೆ ನಡೆಸಿದೆ. ಅಂತೆಯೇ ಇದೀಗ ಬಿಸಿಯೂಟದ ಕುರಿತು ಕೂಡ ಸರ್ಕಾರ ಏಕಾಏಕಿ ಮಾರ್ಗ ಸೂಚಿ ಪ್ರಕಟಿಸಿದೆ. ಬಳೆ ತೊಡಬಾರದು ಎಂದರೆ ಅದು ಎಷ್ಟರ ಮಟ್ಟಿಗೆ ಸರಿ? ಬದಲಾಗಿ ತುಂಬಾ ಸಡಿಲವಾದ ಬಳೆಗಳನ್ನು, ಒಡೆದ ಬಳೆಯನ್ನು, ಡಿಸೈನ್ ಇರುವ ಮಿಣಿ, ಮಿಣಿ ಇರುವ ಬಳೆಗಳನ್ನು ತೊಡಬಾರದು, ಎಚ್ಚರಿಕೆ ವಹಿಸಿ ಎಂದು ಹೇಳಿದ್ದರೆ ಅದು ಸಮಂಜಸವೆನಿಸುತ್ತಿತ್ತು. ಆದರೆ ಇದರ ಸಾಧಕ-ಬಾಧಕಗಳನ್ನು ಯೋಚಿಸದೆ ಸರ್ಕಾರ ಒಟ್ಟಾರೆ ಮಾರ್ಗಸೂಚಿ ಪ್ರಕಟಿಸಿಹಿಂದೂ ಸಂಘಟನೆಗಳನ್ನು ಕೆರಳಿಸಿವೆ.
ಇದನ್ನೂ ಓದಿ: Gruhalkashmi Scheme: ‘ಗೃಹಲಕ್ಷ್ಮೀ’ ಯೋಜನೆಗೆ ಅರ್ಜಿ ಹಾಕುವುದು ಹೇಗೆ ಗೊತ್ತಾ..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್