Red Colour : ತಿಂಡಿ ಮಾರುವ ಗಾಡಿಗಳನ್ನು ಕೆಂಪು ಬಟ್ಟೆಯಿಂದ ಮುಚ್ಚಿರುತ್ತಾರೆ ಯಾಕೆ ಗೊತ್ತಾ? ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ
Why is a road side food cart covered with a red cloth
Roadside food : ರೋಡ್ ಸೈಡ್ ತಿಂಡಿ-ತಿನಿಸು (Roadside food) ಅಂದ್ರೆ ಹೆಚ್ಚಿನ ಜನರಿಗೆ ಫೇವರಿಟ್. ಹೌದು, ನೀವು ಒಂದು ಭಾರೀ ರೋಡ್ ಸೈಡ್ ನಲ್ಲಿರುವ ತಿಂಡಿಗಳ ಗಾಡಿಯನ್ನು ಗಮನಿಸಿ. ಅದರ ಸುತ್ತಾ ಜನಗಳೇ ತುಂಬಿರುತ್ತಾರೆ. ಅದರಲ್ಲೂ ಕಾಲೇಜಿನ ಹತ್ತಿರ ತಿಂಡಿಗಳ ಗಾಡಿ ಇದ್ದರೆ ಕೇಳಬೇಕಿಲ್ಲ. ವಿದ್ಯಾರ್ಥಿಗಳು (students) ಅಲ್ಲಿ ಇದ್ದೇ ಇರುತ್ತಾರೆ.
ಪಾನಿಪುರಿ (Panipuri), ಮಸಾನ್ ಪುರಿ (Masala puri) ಇವೆಲ್ಲಾ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಹುಡುಗಿಯರಿಗಂತೂ ಪಾನಿಪುರಿ ಅಂದ್ರೆ ಪಂಚಪ್ರಾಣ. ಅದನ್ನ ತಿನ್ನೋದಿಕ್ಕೇ ಮುಗಿಬೀಳುತ್ತಾರೆ. ಆದರೆ, ನೀವು ಒಂದು ವಿಚಾರ ಗಮನಿಸಿದ್ದೀರಾ? ತಿಂಡಿ ಮಾರುವ ಬಹುತೇಕ ಗಾಡಿಗಳನ್ನು ಕೆಂಪು ಬಟ್ಟೆಯಿಂದ ಮುಚ್ಚಿರುತ್ತಾರೆ. ಯಾಕೆ ಗೊತ್ತಾ (Intresting fact)? ಯಾವತ್ತಾದರೂ ಯಾಕಿರಬಹುದು ಎಂದು ಯೋಚಿಸಿದ್ದೀರಾ? ಹಾಗಿದ್ದರೆ ಇಲ್ಲಿ ಕೇಳಿ. ಯಾಕೆ? ಎಂಬ ಪ್ರಶ್ನೆಗೆ ಈ ಲೇಖನದಲ್ಲಿ ಉತ್ತರವಿದೆ.
ಪಟ್ಟಣ, ನಗರ ಪ್ರದೇಶಗಳಲ್ಲಿ ಚಾಟ್, ತಿಂಡಿ ಮಾರುವ ಬಹುತೇಕ ಗಾಡಿಗಳನ್ನು ಕೆಂಪು ಬಟ್ಟೆಯಿಂದ (red color) ಮುಚ್ಚಿರುತ್ತಾರೆ. ಕೆಂಪು ಬಟ್ಟೆಯನ್ನೇ ಯಾಕೆ ಬಳಸುತ್ತಾರೆ? ಇದರ ಹಿಂದೆ ವೈಜ್ಞಾನಿಕ ಕಾರಣ ಇದೆ. ಏನು ಆ ಕಾರಣ ಗೊತ್ತಾ?
ತಿಂಡಿ ಮಾರುವ ಬಹುತೇಕ ಗಾಡಿಗಳನ್ನು ಕೆಂಪು ಬಟ್ಟೆಯಿಂದ ಯಾಕೆ ಮುಚ್ಚಿರುತ್ತಾರೆ ಅಂದ್ರೆ, ಕೆಂಪು ಬಣ್ಣ ಬಹಳ ದೂರದಿಂದಲೇ ಕಾಣುತ್ತದೆ. ಕೆಂಪು ಬಣ್ಣ ಪ್ರಕಾಶಮಾನವಾಗಿದ್ದು, ಅತ್ತ ನೋಡಿದ ಕೂಡಲೇ ಜನರನ್ನು ಆಕರ್ಷಿಸುತ್ತದೆ. ಜನರ ದೃಷ್ಟಿ ಅತ್ತ ಹೋಗುತ್ತದೆ.
ಈ ಕಾರಣದಿಂದ ಜನರ ಗಮನವನ್ನು ಸುಲಭವಾಗಿ ಸೆಳೆಯಬಹುದು. ಹಾಗಾಗಿ ಆಹಾರ ಪದಾರ್ಥಗಳ ಗಾಡಿಗಳಿಗೆ ಕೆಂಪು ಬಟ್ಟೆ ಕಟ್ಟಿರುತ್ತಾರೆ ಎಂದು ಹೇಳಲಾಗಿದೆ. ನಿಮ್ಮ ಸ್ನೇಹಿತರಿಗೂ ಈ ವಿಚಾರ ಹಂಚಿಕೊಳ್ಳಿ. ವಿಷಯಗಳು ತಿಳಿದಂತಾಗುತ್ತದೆ