Shakti Scheme: ಸರ್ಕಾರಿ ಬಸ್ ಸಾವಾಸ, ಭಾರೀ ಏರಿದ ಕರಾವಳಿ ಸ್ತ್ರೀ ಪ್ರಯಾಣಿಕರ ಸಂಖ್ಯೆ !
Latest news congress guarantee free bus effect Shakti Scheme effect
Shakti Scheme: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳ (Congress 5 Guarantee) ಪೈಕಿ ಶಕ್ತಿ ಯೋಜನೆ ಈಗಾಗಲೇ ಜಾರಿಯಾಗಿದ್ದು, ರಾಜ್ಯದ ಮಹಿಳೆಯರು ಯೋಜನೆಯ ಪ್ರಯೋಜನ ಗಳಿಸುತ್ತಿದ್ದಾರೆ. ಶಕ್ತಿ ಯೋಜನೆಗೆ (Shakti Scheme) ಭರ್ಜರಿ ರೆಸ್ಪಾನ್ಸ್ ಕೂಡ ವ್ಯಕ್ತವಾಗಿದೆ. ಬಸ್ ಗಳಲ್ಲಿ ನಾರಿಮಣಿಯರು ತುಂಬಿ ತುಳುಕುತ್ತಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಮಹಿಳೆಯರು ಸರ್ಕಾರಿ ಬಸ್‌ಗಳನ್ನೇ ಹೆಚ್ಚು ಬಳಸುತ್ತಿದ್ದಾರೆ. ಈ ಹಿನ್ನೆಲೆ ಸ್ತ್ರೀ ಪ್ರಯಾಣಿಕರ ಸಂಖ್ಯೆ ಭಾರೀ ಏರಿಕೆಯಾಗಿದೆ.
ಶಕ್ತಿ ಯೋಜನೆ ಘೋಷಣೆಯಾದ ನಂತರ ಕರಾವಳಿ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಳಸುವ ಪ್ರಯಾಣಿಕರ ಸಂಖ್ಯೆ ಪ್ರತಿದಿನ 55,000ಕ್ಕೆ ಏರಿಕೆಯಾಗಿದೆ. ಮಂಗಳೂರು ಡಿಪೋದಲ್ಲಿ ದಿನನಿತ್ಯದ ಪ್ರಯಾಣಿಕರ ಸಂಖ್ಯೆ 25000 ಕ್ಕೆ ಏರಿದೆ. ಹಾಗೂ ಪುತ್ತೂರು ಡಿಪೋದಲ್ಲಿ 30,000 ಹೆಚ್ಚಳವಾಗಿದೆ.
ಮಂಗಳೂರು (mangaluru) ಡಿಪೋಗೆ ಸೇರಿದ ಬಸ್ ಗಳಲ್ಲಿ ಶಕ್ತಿ ಯೋಜನೆ ನಂತರ 68000 ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಮೊದಲು 1.20 ಲಕ್ಷ ಜನರು ಪ್ರಯಾಣಿಸುತ್ತಿದ್ದರು. ಶಕ್ತಿ ಯೋಜನೆ ನಂತರ, ಸಂಖ್ಯೆ 25000 ರಷ್ಟು ಹೆಚ್ಚಾಗಿದೆ. ಹಾಗೂ ಪುತ್ತೂರು (Puttur) ಡಿಪೋಗೆ ಸೇರಿದ ಬಸ್‌ಗಳಲ್ಲಿ ಸುಮಾರು 90,000 ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಸದ್ಯ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.
ಕರಾವಳಿ ಭಾಗದಲ್ಲಿ ಕೆಲವೆಡೆ ಹೆಚ್ಚು ಖಾಸಗಿ ಬಸ್ ಗಳಿವೆ. ಹಾಗಾಗಿ ಈ ಹಿಂದೆ ಜನರು ಅದರಲ್ಲೇ ಪ್ರಯಾಣಿಸುತ್ತಿದ್ದರು. ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬೆರಳೆಣಿಕೆಯಷ್ಟು ಜನರು ಪ್ರಯಾಣಿಸುತ್ತಿದ್ದರು. ಆದರೆ, ಇದೀಗ ಶಕ್ತಿ ಯೋಜನೆ ಘೋಷಣೆಯಾದ ನಂತರ ಕೆಎಸ್‌ಆರ್‌ಟಿಸಿ ಬಸ್‌ಗಳು ತುಂಬಿ ತುಳುಕುತ್ತಿವೆ. ಎಲ್ಲಾ ಮಹಿಳೆಯರು ಸರ್ಕಾರಿ ಬಸ್ ಗಳಲ್ಲೇ ಪ್ರಯಾಣಿಸುತ್ತಿದ್ದಾರೆ ಎನ್ನಲಾಗಿದೆ.
ರಾಜ್ಯದ ಬರೋಬ್ಬರಿ 18,609 ಬಸ್‍ಗಳು ಉಚಿತ ಪ್ರಯಾಣಕ್ಕೆ ನಿಯೋಜನೆ ಮಾಡಲಾಗಿದೆ. ಸದ್ಯ ಶಕ್ತಿ ಯೋಜನೆ ಹಿನ್ನೆಲೆ ರಾಜ್ಯದಲ್ಲಿ ಬಸ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಕರ್ನಾಟಕ ಸರ್ಕಾರವು 4,000 ಹೊಸ ಬಸ್‌ಗಳನ್ನು (KSRTC Bus) ಖರೀದಿಸಲು ಹಾಗೂ ಸಾರಿಗೆ ಇಲಾಖೆಯಲ್ಲಿ ಚಾಲಕರು, ಕಂಡಕ್ಟರ್‌ಗಳು ಮತ್ತು ಮೆಕ್ಯಾನಿಕ್‌ಗಳು ಸೇರಿದಂತೆ 13,000 ಅಧಿಕಾರಿಗಳನ್ನು ನೇಮಕ ಮಾಡುವ ನಿರ್ಧಾರ ಮಾಡಿದೆ.
ಇದನ್ನು ಓದಿ: Viral Video: ಜ್ವಾಲಾಮುಖಿಯ ತುದಿಯಲ್ಲಿ ಪಿಜ್ಜಾ ಬೇಯಿಸಿ ಸವಿದ ಮಹಿಳೆ