Aeolus Satellite : ಮನುಕುಲಕ್ಕೆ ಹೊಸ ಕಂಟಕ: ಇನ್ನು ಕೆಲವೇ ವಾರಗಳಲ್ಲಿ ಭೂಮಿಗೆ ಅಪ್ಪಳಿಸಲಿದೆ ಭಾರೀ ಗಾತ್ರದ ಉಪಗ್ರಹ !

Latest news Aeolus Satellite huge satellite will come to earth in a few weeks

Aeolus Satellite : ಮನುಕುಲಕ್ಕೆ ಹೊಸ ಕಂಟಕವೊಂದು ಬಂದೊದಗಿದೆ. ಇನ್ನು ಕೆಲವೇ ವಾರಗಳಲ್ಲಿ ಕಾರಿನ ಗಾತ್ರದ ಉಪಗ್ರಹ ಭೂಮಿಗೆ ಅಪ್ಪಳಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆ ಜನರ ಜೀವ, ಮೂಲಸೌಕರ್ಯಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇದೆ.

ಅಯೋಲಸ್ ಉಪಗ್ರಹ (Aeolus Satellite) 1.3 ಟನ್ ತೂಕದ ಇಂಧನ ಹೊಂದಿದ್ದು, ಸದ್ಯ ಇದು ಖಾಲಿಯಾಗುತ್ತಿದೆ. ಹಾಗಾಗಿ ನಿಷ್ಕ್ರಿಯಗೊಂಡ ಬಾಹ್ಯಾಕಾಶ ನೌಕೆ ಅಯೋಲಸ್ ಕೆಲವೇ ವಾರಗಳಲ್ಲಿ ಭೂಮಿಗೆ ಅಪ್ಪಳಿಸಲಿದೆ. ಅಲ್ಲದೆ, ಈ ಉಪಗ್ರಹ ದಿನಕ್ಕೆ 1 ಕಿಮೀ ನಷ್ಟು ವೇಗದಲ್ಲಿ ಭೂಮಿಯ ಕಡೆಗೆ ಬೀಳುತ್ತಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA) ತಿಳಿಸಿದೆ.

ಹೆಚ್ಚಿನ ಅಯೋಲಸ್ ಉಪಗ್ರಹದ ಭಾಗಗಳು ವಾತಾವರಣದಲ್ಲಿ ಸುಟ್ಟುಹೋಗುತ್ತದೆ. ಆದರೆ ಕೆಲವು ಅವಶೇಷಗಳು ಜುಲೈ ಅಂತ್ಯದಲ್ಲಿ ಅಥವಾ ಆಗಸ್ಟ್ ಆರಂಭದಲ್ಲಿ ಭೂಮಿಯ ಮೇಲ್ಮೈಯನ್ನು ತಲುಪಬಹುದು ESA ಹೇಳಿದೆ. ಈ ಹಿನ್ನೆಲೆ ಮೊದಲ ಬಾರಿಗೆ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಬಾಹ್ಯಾಕಾಶ ನೌಕೆಯನ್ನು ಅದರ ಉಪಗ್ರಹದಲ್ಲಿ ಉಳಿದಿರುವ ಇಂಧನವನ್ನು ಬಳಸಿಕೊಂಡು ಅದನ್ನು ದೂರದ ಪ್ರದೇಶದ ಕಡೆಗೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದೆ ಎಂದು ವರದಿ ತಿಳಿಸಿದೆ.

ಉಪಗ್ರಹ ಅಯೋಲಸ್ 5 ವರ್ಷಗಳ ಕಾಲ 320 ಕಿಮೀ ಎತ್ತರದಲ್ಲಿ ಭೂಮಿಯ ಕಕ್ಷೆಯಲ್ಲಿ ಸುತ್ತಿದೆ. ಹವಾಮಾನ ಮುನ್ಸೂಚನೆಗಳನ್ನು ಸುಧಾರಿಸಲು ಅಯೋಲಸ್ ವಾತಾವರಣದಲ್ಲಿ ಗಾಳಿಯನ್ನು ಅಳೆಯುತ್ತಿತ್ತು. ಭೂಮಿಯ ಗುರುತ್ವಾಕರ್ಷಣೆ ಹಾಗೂ ಸೌರ ಚಟುವಟಿಕೆಯ ಕಾರಣದಿಂದಾಗಿ ಭೂಮಿಯ ವಾತಾವರಣವು ಬಾಹ್ಯಾಕಾಶ ನೌಕೆಯನ್ನು ಕೆಳಕ್ಕೆ ಎಳೆಯುತ್ತಿದೆ ಎನ್ನಲಾಗಿದೆ. ಆದರೆ, ಈ ಬಾಹ್ಯಾಕಾಶ ನೌಕೆ ಭೂಮಿಗೆ ಬೀಳುವ ನಿರ್ದಿಷ್ಟ ಸಮಯವನ್ನು ಹೇಳಲು ಸಾಧ್ಯವಿಲ್ಲ ಎಂದು ESA ಎಚ್ಚರಿಕೆಯ ಕರೆ ನೀಡಿದೆ.

 

ಇದನ್ನು ಓದಿ: Gaming Laptop: ಈ ಗೇಮಿಂಗ್ ಲ್ಯಾಪ್‌ಟಾಪ್ ನಿಮಗಾಗಿ, ಆಫರ್ ಅನ್ನು ಮಿಸ್ ಮಾಡಿಕೊಳ್ಳಬೇಡಿ! 

Leave A Reply

Your email address will not be published.