Ginger Price Hike: ಶುಂಠಿ ಬೆಳೆಗಾರರಿಗೆ ಹೊಡೀತು ಬಂಪರ್ ಲಾಟ್ರಿ – ಇತಿಹಾಸದಲ್ಲೇ ಮೊದಲ ಬಾರಿಗೆ 20 ಸಾವಿರಕ್ಕೇರಿದ ರೇಟ್ !!
Latest agriculture news Ginger price hike update Ginger quintal price increased farmers happy in Karnataka
Ginger Price Hike: ದೇಶದಲ್ಲೇ ಅನ್ನೋದಕ್ಕಿಂತಲೂ ಇಡೀ ಪ್ರಪಂಚದಲ್ಲಿಯೇ ಟೊಮ್ಯಾಟೋ(Tomato) ಬೆಲೆ ಗಗನಕ್ಕೇರಿದೆ. ಟೊಮ್ಯಾಟೋ ಬೆಳೆದ ರೈತರೆಗಂತೂ ಹಬ್ಬವೋ ಹಬ್ಬವಾಗಿದೆ. ಆದರೆ ಈ ಬೆನ್ನಲ್ಲೇ ಶುಂಠಿ ಬೆಳೆಗಾರರಿಗೂ ಬಂಪರ್ ಲಾಟ್ರಿ ಹೊಡೆದಿದ್ದು, ಮಾರುಕಟ್ಟೆಯಲ್ಲಿ(Market) ಶುಂಠಿ(Ginger) ಬೆಲೆಯು ಎತಿಹಾಸದಲ್ಲೇ ಮೊದಲ ಬಾರಿಗೆ ಅತೀ ಹೆಚ್ಚು ಏರಿಕೆ (Ginger Price Hike) ಕಂಡಿದೆ.
ಹೌದು, ಟೊಮ್ಯಾಟೋ ದರ ಗಗನಕ್ಕೇರಿದ ಬೆನ್ನಲ್ಲೇ ಹಲವು ತರಕಾರಿಗಳ ಬೆಲೆಯೂ ಹೈಕ್ ಆಗುತ್ತಿದೆ. ಅಂತೆಯೇ ಇದೀಗ ದೇಶದ ಪ್ರಮುಖ ವಾಣಿಜ್ಯ ಬೆಳೆಯಾದ ಶುಂಠಿಗೂ ಬಂಗಾರದ ಬೆಲೆ ಬಂದಿದ್ದು, ಮಾರುಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ 100 ಕೆ.ಜಿ ಶುಂಠಿಗೆ(Ginger) ಬರೋಬ್ಬರಿ 18 ರಿಂದ 20 ಸಾವಿರ ರೂ. ಏರಿಕೆ ಕಂಡಿದೆ.
ಅಂದಹಾಗೆ ಕಳೆದ ವರ್ಷದ ಶುಂಠಿಯನ್ನ ಹೊಲದಲ್ಲೇ ಉಳಿಸಿಕೊಂಡ ರೈತರಿಗೆ(Formers) ಈ ಬಾರಿ ಚಿನ್ನದ ಬೆಲೆ ಸಿಗುತ್ತಿದೆ. ದೆಹಲಿ ಮತ್ತು ಉತ್ತರ ಭಾರತದಲ್ಲಿ(North india) ಶುಂಠಿಗೆ ಬೇಡಿಕೆ ಹೆಚ್ಚಾಗಿದ್ದು, 2011 ರಿಂದ 2023 ರಲ್ಲಿ ಇದೆ ಮೊದಲ ಬಾರಿಗೆ ಶುಂಠಿ ಬೆಲೆ 20 ಸಾವಿರ ರೂ. ಗಡಿ ದಾಟಿರುವುದು. ಹೀಗಾಗಿ ಈಗಿನ ಲೆಕ್ಕದ ಪ್ರಕಾರ ಒಂದು ಎಕರೆ ಶುಂಠಿ ಬೆಳೆದರೆ 25 ಲಕ್ಷ ರೂ. ಲಾಭ ಬರಲಿದೆ.
ಇನ್ನು 2022ರಲ್ಲಿ 100 ಕೆಜಿ ಶುಂಠಿಗೆ 900 ರೂ. ರಿಂದ 1200 ರೂಪಾಯಿ ಇತ್ತು. ಅದಕ್ಕೆ ಹೋಲಿಸಿದರೆ ಶುಂಠಿ ಬೆಲೆ ಗಣನೀಯ ಏರಿಕೆ ಕಂಡಿದ್ದು, ರೈತರಿಗೆ ಜಾಕ್‌ಪಾಟ್ ಹೊಡೆದಿದೆ. ಹೀಗಾಗಿ ಹಳೆ ಶುಂಠಿಗೆ 18ರಿಂದ 20 ಸಾವಿರ ರೂ. ಇದ್ದು, ಈ ವರ್ಷ ಬೆಳೆದಿರುವ ಹೊಸ ಶುಂಠಿಗೆ 10 ರಿಂದ 12 ಸಾವಿರ ರೂ. ಇದೆ. ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಭಾಗಗಳಲ್ಲಿ ಅಲ್ಲದೆ ಮಲೆನಾಡು, ಕರಾವಳಿಯ ಕೆಲವೆಡೆ ಶುಂಠಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು ಇದ್ದಕ್ಕಿದ್ದಂತೆ ಏರಿದ ಬೆಲೆಯು ರೈತರಿಗೆ ಒಳ್ಳೆಯ ಲಾಟ್ರಿ ಹೊಡೆದಂತಾಗಿದೆ.
ಇದನ್ನೂ ಓದಿ: Good news for farmers: ಫ್ರೀ ಕರೆಂಟ್ ಬೆನ್ನಲ್ಲೇ ರಾಜ್ಯ ರೈತರಿಗೆ ಮತ್ತೊಂದು ಹೊಸ ಭಾಗ್ಯ- ಸರ್ಕಾರದಿಂದ ಮಹತ್ವದ ಘೋಷಣೆ !!