Viral News: 6000 ವರ್ಷಗಳ ಹಿಂದಿನ ಚ್ಯೂಯಿಂಗ್ ಗಮ್ ಪತ್ತೆ, ಅದನ್ನು ಜಗಿಯುವ ಮುನ್ನ ಆ ಹುಡುಗಿ ಊಟ ಮಾಡಿದ್ದಳಂತೆ !
Latest news intresting news 6000 year old chewing gum found Viral News
Chewing Gum: ಒಂದಲ್ಲ ಎರಡಲ್ಲಾ, ನೂರಲ್ಲ, ಬರೋಬ್ಬರಿ 600 ವರ್ಷದ ಚ್ಯೂಯಿಂಗ್ಗಮ್ ಅನ್ನು ಯಾರು ಜಗಿದಿದ್ದರೋ ಅವರ ಡಿಎನ್ಎ ಅನ್ನೂ ಪತ್ತೆ ಹಚ್ಚಲಾಗಿದ್ದು, ಇದನ್ನು ಅಗಿಯುವ ಮೊದಲು ಅವರು ಏನು ಊಟ ಮಾಡಿದ್ದರು ಎನ್ನುವ ವಿಷಯವೊಂದು ಬಹಿರಂಗೊಳಿಸಲಾಗಿದೆ.
ಹೌದು, ‘ಸ್ಕ್ಯಾಂಡಿನೇವಿಯಾದಲ್ಲಿ 6,000 ವರ್ಷಗಳಷ್ಟು ಹಳೆಯದಾದ ಚ್ಯೂಯಿಂಗ್ ಗಮ್ (Chewing Gum) ಪತ್ತೆಯಾಗಿದೆ. ಇಷ್ಟೇ ಅಲ್ಲ ಇದನ್ನು ಜಗಿದವರ ಡಿಎನ್ಎ (DNA)ಯನ್ನು ಕೂಡ ಇದು ಸಂರಕ್ಷಿಸಿಟ್ಟುಕೊಂಡಿದೆ.
ವಿಶೇಷ ಎಂದರೆ ಈ ಚ್ಯೂಯಿಂಗ್ ಗಮ್ ಅನ್ನು ಜಗಿದವಳು ಬೇಟೆಗಾರರ ಪುಟ್ಟ ಹುಡುಗಿ. ಈಕೆ ಕಪ್ಪು ಚರ್ಮ, ಕಂದು ಕೂದಲು ಮತ್ತು ನೀಲಿ ಕಣ್ಣುಗಳನ್ನು ಹೊಂದಿದ್ದಳು. ಈ ಚ್ಯೂಯಿಂಗ್ಗಿಂತ ಮೊದಲು ಈಕೆ ಹಝಲ್ನಟ್ ಮತ್ತು ಬಾತುಕೋಳಿಯನ್ನು ತಿಂದಿದ್ದಳು’ ಎನ್ನುವ ಮಾಹಿತಿಯನ್ನು ಹೊತ್ತ ಈ ಟ್ವೀಟ್ ಇದೀಗ ವೈರಲ್ ಆಗುತ್ತಿದೆ.
ಡಾ. ಡೋರ್ಸಾ ಅಮೀರ್ ಎಂಬವರು ಇದನ್ನು ಟ್ವೀಟ್ ಮಾಡಿದ್ದಾರೆ. ಕೆಲವರು ಈ ವಿಷಯದ ಸತ್ಯಾಸತ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಕ್ಕೆ 5,700 ವರ್ಷ ಹಳೆಯ ಚೂಯಿಂಗ್ ಗಮ್‌ನಿಂದ ಮಾನವ ಜೀನೋಮ್ ಅನ್ನು ಮರಳಿ ಪಡೆದುದರ ಕುರಿತು ಇಂಗ್ಲಿಷ್ ಲೇಖನವೊಂದರ ಲಿಂಕ್ ಅನ್ನು ಈಕೆ ಈ ಟ್ವೀಟಿನಡಿ ಲಗತ್ತಿಸಿದ್ದಾರೆ. ಅನೇಕರು ಈ ವಿಷಯದ ಬಗ್ಗೆ ಕುತೂಹಲದಿಂದ ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ಆ ಹುಡುಗಿಯ ಚರ್ಮದ ಬಣ್ಣವನ್ನೂ ಕೂಡ ಅಷ್ಟೊಂದು ದೃಢವಾಗಿ ಪತ್ತೆ ಹಚ್ಚಿದ್ದಾರಲ್ಲ! ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮೂಡಿದ್ದು, ನಾನಾ ಬಗೆಯ ಕಾಮೆಂಟ್ಗಳು ಬರುತ್ತಿದೆ.
ಇದನ್ನು ಓದಿ: Love Jihad: ಪತಿ – ಪತ್ನಿಯ ಸಣ್ಣ ಜಗಳ ಬಿಡಿಸಲು ಮುಸ್ಲಿಂ ಗೆಳೆಯನ ಸಹಾಯ: ಕೊನೆಗೆ ಸ್ನೇಹಿತನ ಪತ್ನಿಗೆ ಗಾಳ ಹಾಕಿ ಲವ್ ಜಿಹಾದ್ !