Dio 125 Scooter: ಬಂದಿದೆ ‘ ಡಿಯೋ 125 ’ ಎಂಬ ಸುನಾಮಿ ಸ್ಕೂಟರ್ ! ಇನ್ನು ಹುಡುಗ್ರಿಗೆ ಬ್ಯಾಕ್ ಸೀಟೇ ಫಿಕ್ಸ್ !

Latest news technology Dio 125' scooter has been launched in the market today

Dio 125 Scooter: ಜನಪ್ರಿಯ ಹೋಂಡಾ ಮೋಟರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ತನ್ನ ಹೊಸ ‘ಡಿಯೋ 125’ (Dio 125 Scooter) ಅನ್ನು ಭಾರತದ ಮಾರುಕಟ್ಟೆಗೆ ಇಂದು ಬಿಡುಗಡೆ ಮಾಡಿದೆ. ಈ ಸ್ಕೂಟರ್ ಆಕರ್ಷಣೀಯವಾಗಿದ್ದು, ಉತ್ತಮ ಫೀಚರ್ ಹೊಂದಿದೆ. ಹಾಗಾದ್ರೆ ಸ್ಕೂಟರ್ ಬಗೆಗಿನ ಹೆಚ್ಚಿನ ಮಾಹಿತಿ ತಿಳ್ಕೊಳ್ಳೇಬೇಕು ಅಲ್ವಾ?!

ಡಿಯೋ 125 ಸ್ಕೂಟರ್ ಸ್ಟ್ಯಾಂಡರ್ಡ್ ಮಾದರಿಯ ಬೆಲೆ (ಎಕ್ಸ್ ಷೋರೂಂ ದೆಹಲಿ) 83,400 ಆಗಿದೆ. ಹಾಗೂ ಸ್ಮಾರ್ಟ್ ಮಾದರಿಯ ಬೆಲೆ 91,300. ಡಿಯೊ 125 ಜೊತೆಗೆ ‘ಎಚ್‌ಎಂಎಸ್‌ಐ’ ವಿಶೇಷ 10 ವರ್ಷಗಳ ವಾರಂಟಿ ಕೊಡುಗೆ ನೀಡಲಿದೆ (3 ವರ್ಷಗಳ ಸ್ಟ್ಯಾಂಡರ್ಡ್ + 7 ವರ್ಷಗಳ ವಿಸ್ತರಣೆ ವಾರಂಟೆಯ ಆಯ್ಕೆ)

ಈ ಸ್ಕೂಟರ್ ಪರ್ಲ್ ಸೈರನ್ ಬ್ಲ್ಯೂಪರ್ಲ್ ಡೀಪ್ ಗೌಂಡ್ ಗ್ರೇ, ಪರ್ಲ್ ನೈಟ್‌ಸ್ಟಾರ್ ಬ್ಯಾಕ್, ಮ್ಯಾಟ್ ಮಾರ್ವೆಲ್ ಬ್ಲ್ಯೂ ಮೆಟಾಲಿಕ್, ಮ್ಯಾಟ್ ಆ್ಯಕ್ಸಿಸ್ ಗ್ರೇ ಮೆಟಾಲಿಕ್, ಮ್ಯಾಟ್ ಸಾಂಗ್ರಿಯಾ ರೆಡ್ ಮೆಟಾಲಿಕ್ ಮತ್ತು ಸ್ಪೋರ್ಟ್ಸ್ ರೆಡ್
ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಡಿಯೊ 125 ಸ್ಕೂಟರ್ ಅತ್ಯಾಕರ್ಷಕ ಮುಂಭಾಗದ ವಿನ್ಯಾಸ ಹೊಂದಿದೆ. ಚೂಪುತುದಿಯ ಹೆಡ್‌ಲ್ಯಾಂಪ್ ಮತ್ತು ನಯವಾದ ಆಕಾರದ ಲ್ಯಾಂಪ್, ಕ್ರೋಮ್ ಕವರ್‌ನೊಂದಿಗೆ ಡ್ಯುಯಲ್ ಔಟೈಟ್ ಮಫ್ಲರ್, ಹೊಸ ಸ್ಟ್ರೀಟ್ ಗ್ಯಾಬ್ ರೈಲ್, ವೇವ್ ಡಿಸ್ಕ್ ಬ್ರೇಕ್’ ಜೊತೆಗೆ ಮಿಶ್ರಲೋಹದ ಚಕ್ರಗಳು ಹೊಸ ಗ್ರಾಫಿಕ್ಸ್ ಮತ್ತು ಹೊಸ ಲಾಂಛನ ಹೊಂದಿರುವ ಆಧುನಿಕ ಟೈಲ್ ಲ್ಯಾಂಪ್, ಮೋಟೊ-ಸ್ಕೂಟರ್‌ನ ಆಕರ್ಷಕ ನೋಟವನ್ನು ಇಮ್ಮಡಿಗೊಳಿಸಿದೆ.

ಡಿಯೊ 125 ಜಾಗತಿಕವಾಗಿ ಮೆಚ್ಚುಗೆ ಪಡೆದ ಹೋಂಡಾ ಸ್ಮಾರ್ಟ್ ಕೀ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಸ್ಕೂಟರ್ ನಲ್ಲಿ ವಾಹನವನ್ನು ಸುಲಭವಾಗಿ ಪತ್ತೆಹಚ್ಚಲು ಸಹಾಯ ಮಾಡುವ ಆನ್ಸರ್ ಬ್ಯಾಕ್ ಸಿಸ್ಟಮ್ ಸ್ಕೂಟರ್ ನಲ್ಲಿ ಅಳವಡಿಸಲಾಗಿದೆ. ಎಂಜಿನ್ ಚಾಲನೆಗೊಳಿಸಿದ ನಂತರ 20 ಸೆಕೆಂಡುಗಳವರೆಗೆ ಯಾವುದೇ ಚಟುವಟಿಕೆಯನ್ನು ಸಿಸ್ಟಮ್ ಪತ್ತೆ ಮಾಡದಿದ್ದರೆ, ಸ್ಕೂಟರ್‌ನ ಎಂಜಿನ್ ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುತ್ತದೆ.

ಕೀ ಬಳಸದೆಯೇ ವಾಹನ ಲಾಕ್ ಮಾಡಲು ಮತ್ತು ಅನ್‌ಲಾಕ್ ಮಾಡಲು ಸ್ಮಾರ್ಟ್‌ ಲಾಕ್ ನೆರವಾಗಲಿದೆ. ವಾಹನದ 2 ಮೀಟರ್ ವ್ಯಾಪ್ತಿಯಲ್ಲಿದ್ದರೆ ನೀವು ಕೀ ಬಳಸದೆ ಸೀಟ್, ಇಂಧನ ಕ್ಯಾಪ್ ಮತ್ತು ಹ್ಯಾಂಡಲ್ ಅನ್ನು ಅನ್‌ಲಾಕ್ ಮಾಡಬಹುದು ಅಥವಾ ಲಾಕ್ ಮೋಡ್‌ನಲ್ಲಿ ನಾಬ್ ಅನ್ನು ತಿರುಗಿಸುವ ಮೂಲಕ ವಾಹನವನ್ನು ಸರಾಗವಾಗಿ ಪ್ರಾರಂಭಿಸಬಹುದು.

ಡಿಯೋ 125 ಮ್ಯಾಪ್ ಮಾಡಲಾದ ಸ್ಮಾರ್ಟ್ ಇಸಿಯು ಹೊಂದಿದೆ. ಇದರಿಂದ ನಿಮ್ಮ ವಾಹನ ಕಳವಾಗುವ ಸಾಧ್ಯತೆ ಇರಲ್ಲ. ಸ್ಮಾರ್ಟ್ ಕೀ- ಇಮೊಬಿಲೈಸರ್ ವ್ಯವಸ್ಥೆ ಹೊಂದಿದೆ. ಇದರಿಂದ ಕಳ್ಳರು ಬೇರೆ ಕೀ ಬಳಸಿ ಸ್ಕೂಟರ್ ಸ್ಟಾರ್ಟ್ ಮಾಡುವುದಕ್ಕೆ ಆಗಲ್ಲ. ಡಿಯೊ 125 ಐಡ್ಡಿಂಗ್ ಸ್ಟಾಪ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಇದು ಟ್ರಾಫಿಕ್ ಲೈಟ್ ಮತ್ತು ಅಲ್ಪಾವಧಿವರೆಗೆ ನಿಲ್ಲಬೇಕಾದ ಕಡೆಗಳಲ್ಲಿ ಸ್ವಯಂಚಾಲಿತವಾಗಿ ಎಂಜಿನ್ ಅನ್ನು ಸ್ವಿಚ್ ಆಫ್ ಮಾಡುತ್ತದೆ. ಸೈಡ್ ಸ್ಟ್ಯಾಂಡ್ ಹಾಕಿರುವಾಗ ಎಂಜಿನ್ ಚಾಲನೆಗೊಳ್ಳುವುದನ್ನು ತಡೆಯುತ್ತದೆ.

ಡಿಯೊ 125 ಸ್ಕೂಟರ್ 125ಸಿಸಿ ಪಿಜಿಎಂಎಫ್‌ಐ ಎಂಜಿನ್, ಹೋಂಡಾದ ವರ್ಧಿತ ಸ್ಮಾರ್ಟ್ ಪವರ್ (ಇಎಸ್‌ಪಿ) ನಿಂದ ಎಂಜಿನ್‌ಗೆ ಕಾರ್ಯಕ್ಷಮತೆಯ ವೇಗವರ್ಧಕವಾಗಿರಲಿದೆ. ಯೂನಿಕ್ ಹೋಂಡಾ ಎಸಿಜಿ ಸ್ಟಾರ್ಟರ್, ಸುಧಾರಿತ ಟಂಬಲ್ ಫ್ಲೋ, ಪ್ರೋಗ್ರಾಮ್ ಮಾಡಲಾದ ಇಂಧನ ಇಂಜೆಕ್ಷನ್ (ಪಿಜಿಎಂ-ಎಫ್‌ಐ), ಕಡಿಮೆ ಘರ್ಷಣೆ ಮತ್ತು ಸುಧಾರಿತ ದಹನ ಪ್ರಕ್ರಿಯೆ, ಸೊಲೆನಾಯ್ ವಾಲ್ಸ್ ನಂತಹ ಹಲವು ವೈಶಿಷ್ಟ್ಯಗಳಿವೆ.

ಕಾಂಬಿ-ಬ್ರೇಕ್ ಸಿಸ್ಟಮ್ (ಸಿಬಿಎಸ್) ಜೊತೆಗೆ ಈಕ್ವಲೈಜರ್ ಮತ್ತು 3-ಹಂತದ ಹೊಂದಾಣಿಕೆಯ ರಿಯರ್ ಸಸ್ಪೆನ್ಯನ್, ಹೊಸ ‘ಡಿಯೊ 125’ರ ಪ್ರತಿ ಸವಾರಿಯನ್ನು ಆರಾಮದಾಯಕ ಮತ್ತು ಅನುಕೂಲಕರ ಅನುಭವವನ್ನಾಗಿ ಮಾಡಲಿವೆ, ಇದು ವಿಶಿಷ್ಟವಾದ ಡ್ಯುಯಲ್ ಫಂಕ್ಷನ್ ಸ್ವಿಚ್ ಸಹ ಹೊಂದಿದೆ. ‘ಡಿಯೊ 125’ ಫ್ರೆಂಟ್ ಪಾಕೆಟ್ ಹೊಂದಿದೆ. ಇಂಟೆಗ್ರೇಟೆಡ್ ಹೆಡ್‌ಲ್ಯಾಂಪ್ ಬೀಮ್ ಮತ್ತು ಪಾಸಿಂಗ್ ಸ್ವಿಚ್, ಹೈಬೀಮ್ / ಲೋಬೀಮ್ ಮತ್ತು ಪಾಸಿಂಗ್‌ ಸಿಗ್ನಲ್‌ಗಳನ್ನು ಬೆರಳುಗಳ ತ್ವರಿತ ಚಲನೆಯಿಂದ ಅನುಕೂಲಕರ ರೀತಿಯಲ್ಲಿ ನಿರ್ವಹಿಸಬಹುದಾಗಿದೆ.

ಎಚ್ ಸ್ಮಾರ್ಟ್ ಮಾದರಿಯು ಲಾಕ್ ಮೋಡ್ ಸೌಲಭ್ಯದೊಂದಿಗೆ ಬರಲಿದೆ, ಇದು ಭೌತಿಕ ಕೀ ಬಳಸದೆ, ಒಂದರಲ್ಲಿಯೇ 5 ಕೆಲಸಗಳನ್ನು ನಿರ್ವಹಿಸುವ (ಲಾಕ್ ಹ್ಯಾಂಡಲ್, ಇಗ್ನಿಷನ್ ಆಫ್, ಫ್ಯುಯೆಲ್ ಲಿಡ್ ಓಪನ್, ಸೀಟ್ ಓಪನ್ ಮತ್ತು ಇಗ್ನಿಷನ್ ಆನ್) ಸೌಲಭ್ಯವಾಗಿದೆ.

 

ಇದನ್ನು ಓದಿ: Bhoomi shetty viral photo: ಎದೆಯ ಗೀಟು ಕಾಣುವಂತೆ ಜಿಮ್ಮಿನಿಂದ ಎದ್ದು ಬಂದ ‘ ಇಕ್ಕಟ್ ‘ ನಟಿ ಭೂಮಿ ಶೆಟ್ಟಿ ; ನೆಟ್ಟಿಗರಿಂದ ಸಕತ್ ಪಾಠ !

Leave A Reply

Your email address will not be published.