Ramalinga reddy: KSRTC ನೌಕರರಿಗೆ ಬಿಕ್ ಶಾಕ್ !! ಸರಿಸಮಾನ ವೇತನ ಕೊಡಲು ಸಾಧ್ಯವಿಲ್ಲ ಎಂದು ಉಲ್ಟಾ ಹೊಡೆದ ಸರ್ಕಾರ !!

Latest news Ramalinga reddy Govt cannot pay equal salary to KSRTC employees

Ramalinga reddy: ರಾಜ್ಯ ಸರ್ಕಾರ(State Government) ತನ್ನ 5 ಗ್ಯಾರಂಟಿಗಳನ್ನು ಜಾರಿಗೊಳಿಸುವುದರೊಂದಿಗೆ ಇತರ ಹಲವಾರು ಯೋಜನೆಗೂ ಅನುಮೋದನೆ ನೀಡಿ ಹಲವಾರು ವರ್ಗಗಳ ಜನರಿಗೆ ಅನುಕೂಲ ಮಾಡಿಕೊಡುತ್ತಿದೆ. ಆದರೆ ಈ ನಡುವೆ ಸಾರಿಗೆ ನೌಕರರಿಗೆ ಮಾತ್ರ ಶಾಕ್ ಕೊಟ್ಟಿದೆ.

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್(Congress) ತಾನು ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವುದರೊಂದಿಗೆ ಇನ್ನೂ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಇತರ ವರ್ಗಗಳಿಗೂ ಅನುಕೂಲ ಮಾಡಿಕೊಡವುದಾಗಿ ತಿಳಿಸಿತ್ತು. ಅಂತೆಯೇ ರಾಜ್ಯ ಸಾರಿಗೆ ನೌಕರರಿಗೆ ವೇತನ ಹಾಗೂ ಇತ್ಯಾದಿ ಸೌಲಭ್ಯಗಳನ್ನು ಸರಕಾರಿ ನೌಕರರಿಗೆ(Government employees) ಸಮನಾಂತರವಾಗಿ, ಆಯಾ ನಿಯಮಗಳ ಆಯವ್ಯಯಗಳ ಪತ್ರಗಳಲ್ಲಿ ಅಡಕವಾಗುವಂತೆ ಕಾರ್ಯಕ್ರಮ ರಚನೆ ಮಾಡಿ ಜಾರಿಗೊಳಿಸಲಾಗುವದೆಂದು ಭರವಸೆ ನೀಡಿತ್ತು. ಆದರೀಗ ಸರ್ಕಾರವು ಅಧಿಕಾರ ಹಿಡಿದ ಬೆನ್ನಲ್ಲೇ ತನ್ನ ವರಸೆ ಬದಲಾಯಿಸಿದ್ದು, ಸಾರಿಗೆ ನೌಕರರಿಗೆ ಸರಿಸಮಾನವಾದ ವೇತನ ಕೊಡಲು ಸಾಧ್ಯವಿಲ್ಲ ಎಂದಿದೆ.

ಹೌದು, ನಿನ್ನೆ ನಡೆದ ವಿಧಾನಸಭಾ ಅಧಿವೇಶನದಲ್ಲಿ(Assembly session) ಮಾತನಾಡಿದ ಸಾರಿಗೆ ಸಚಿವರಾದ ರಮಾಲಿಂಗ ರೆಡ್ಡಿ(Ramalinga reddy) ಅವರು ಸಾರಿಗೆ ನೌಕರರಿಗೆ ಯಾವುದೇ ರೀತಿಯ ಸರಿಸಮಾನವಾದ ವೇತನಗಳನ್ನು ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಶಾಸಕ ನಾಡಗೌಡ(Nadagowda) ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು ಈ ರೀತಿಯ ಪ್ರಸ್ತಾವನೆ ನಮ್ಮ ಸರ್ಕಾರದ ಮುಂದಿಲ್ಲ ಎಂದು ಉತ್ತರಿಸಿದ್ದಾರೆ.

ಅಂದಹಾಗೆ ಈ ವಿಚಾರವಾಗಿ ರಾಜ್ಯ ಸಾರಿಗೆ ನೌಕರರು 2020ರಿಂದಲೂ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಾ ಬಂದಿದ್ದಾರೆ. ಎಲ್ಲಾ ಸರಕಾರಗಳು ಬರೀ ಭರವಸೆ ನೀಡುತ್ತಿವೆ. ಹಿಂದೆ ಮಾರ್ಚ್ 21ರಂದು ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ಮುಂದಾಗಿದ್ದರು. ಈ ವೇಳೆ 15% ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಹೀಗಾಗಿ ಮುಷ್ಕರ ಹಿಂಪಡೆಯಲಾಗಿತ್ತು. ಆದರೀಗ ಕೊಟ್ಟ ಭರವಸೆಯನ್ನು ಈಡೇರಿಸಿ ಎಂದರೂ ರಾಜ್ಯ ಸರ್ಕಾರ ಕಡ್ಡಿ ತುಂಡಾದಂತೆ ಉತ್ತರಿಸಿರುವುದು ದುರಂತವೇ ಸರಿ!!

ಸಮಾನ ಮನಸ್ಕರ ವೇದಿಕೆಯ ಬೇಡಿಕೆಗಳೇನು?
• ಸರ್ಕಾರಿ ನೌಕರರ ಸರಿಸಮಾನಾದ ವೇತನ ನೀಡಬೇಕು
ನಾಲ್ಕು ನಿಗಮಗಳ ನೌಕರರ ಸಂಘಕ್ಕೆ ಎಲೆಕ್ಷನ್ ಮಾಡಬೇಕು
• ಮುಷ್ಕರದ ಸಮಯದಲ್ಲಿ ವಜಾಗೊಂಡಿರುವ ನಾಲ್ಕು ನಿಗಮಗಳ ನೌಕರರನ್ನು ಯಾವುದೇ ಷರತ್ತುಗಳಿಲ್ಲದೆ ಮರುನೇಮಕಾತಿ ಮಾಡಿಕೊಳ್ಳುವುದು
• ಮುಷ್ಕರದ ಸಮಯದಲ್ಲಿ ಸಾರಿಗೆ ನೌಕರರು ಮತ್ತು ಅವರ ಕುಟುಂಬಸ್ಥರ ಮೇಲೆ ದಾಖಲಾಗಿರುವ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು
• ಸಾರಿಗೆ ಸಂಸ್ಥೆಯಲ್ಲಿ ನಿವೃತ್ತಿಗೊಂಡಿರುವ ನೌಕರರಿಗೆ ನೀಡಬೇಕಾಗಿರುವ ಬಾಕಿ ಹಣವನ್ನು ಕೂಡಲೇ ನೀಡುವುದು
ಅವರಿಗೆ ಸರಿಯಾದ ರೀತಿ ಪಿಂಚಣೆ ಸೌಲಭ್ಯವನ್ನು ಒದಗಿಸುವುದುಇದನ್ನೂ.

 

ಇದನ್ನು ಓದಿ: Rajendra Singh Gudha: ಸೀತಾಮಾತೆ ತುಂಬಾ ಸುಂದರಿ, ರಾಮ ರಾವಣ ಆಕೇನ ನೋಡಿ ಪಾಗಲ್ ಆಗಿದ್ರು – ಕಾಂಗ್ರೆಸ್ ಶಾಸಕನ ವಿವಾದಾತ್ಮಕ ಹೇಳಿಕೆ ! 

Leave A Reply

Your email address will not be published.