Aeronics MD- CEO Murder: ಏರೋನಿಕ್ಸ್ ಎಂಡಿ – ಸಿಇಒ ಹತ್ಯೆ ಹಿನ್ನೆಲೆಯಲ್ಲಿ ಜಿ-ನೆಟ್ ಎಂಡಿ ಅರೆಸ್ಟ್ !
latest news death news G-Net MD Arrested in Aeronics MD-CEO Murder Case
Aeronics MD- CEO Murder: ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದ ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಮತ್ತು ಸಿಇಒ ವಿನುಕುಮಾರ್ ಕೊಲೆ (Murder) ಪ್ರಕರಣ ನಗರವಾಸಿಗಳನ್ನು ಬೆಚ್ಚಿ ಬೀಳಿಸಿದೆ. ಆರೋಪಿಗಳ ಮೂರು ಜನರ ತಂಡ ಚಾಕು ಮತ್ತು ತಲ್ವಾರ್ ಹಿಡಿದುಕೊಂಡು ಕಂಪನಿ ಪ್ರವೇಶಿಸಿ ಕಂಪನಿಯ ಎಂಡಿ ಮತ್ತು ಸಿಇಓವನ್ನು ಕೊಚ್ಚಿ ಕೊಲೆ (Aeronics MD- CEO Murder) ಮಾಡಿ ಕಾಂಪೌಂಡ್ ಹಾರಿ ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಘಟನೆ ನಡೆದ 24 ಗಂಟೆಯೊಳಗೆ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಶಬರೀಶ್ ಅಲಿಯಾಸ್ ಜೋಕರ್ ಫೆಲಿಕ್ಸ್, ವಿನಯ್ ರೆಡ್ಡಿ ಮತ್ತು ಸಂತೋಷ್ ಎಂದು ಗುರುತಿಸಲಾಗಿದೆ.
ಇದೀಗ ಕೊಲೆ ಕೇಸ್ ಹೊಸ ತಿರುವು ಪಡೆದಿದೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಶಬರೀಶ್ ಶಾಕಿಂಗ್ ಸತ್ಯ ಬಾಯ್ಬಿಟ್ಟಿದ್ದಾನೆ. ಜೋಡಿ ಕೊಲೆ ಹಿಂದೆ ಜಿ-ನೆಟ್ ಕಂಪನಿ ಮಾಲೀಕ ಅರುಣ್ ಕುಮಾರ್ ಕೈವಾಡ ಇದೆ ಎಂಬ ಸತ್ಯ ಬಾಯ್ಬಿಟ್ಟಿದ್ದು, ವಿಚಾರಣೆಗಾಗಿ ಅರುಣ್ ಕುಮಾರ್ ಬಂಧನವಾಗಿದೆ.
ಈ ಮೊದಲು ಕೊಲೆಯಾದ ಫಣೀಂದ್ರ ಮತ್ತು ವಿನುಕುಮಾರ್ ಜಿ-ನೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಶಬರೀಶ್ ಅಲಿಯಾಸ್ ಜೋಕರ್ ಫೆಲಿಕ್ಸ್ ಕೂಡಾ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಹಲವು ವರ್ಷಗಳ ಕೆಲಸದ ಬಳಿಕ ಫಣೀಂದ್ರ ಜಿ-ನೆಟ್ ಕಂಪನಿ ಬಿಟ್ಟು ಹೊಸ ಕಂಪನಿ ಆರಂಭಿಸಿದ್ದರು. ಏರೋನಿಕ್ಸ್ ಇಂಟರ್ನೆಟ್ ಕಂಪನಿ ಆರಂಭಿಸಿ, ಅಲ್ಲಿ ವಿನುಕುಮಾರ್ ಸಿಇಒ ಆಗಿ ನೇಮಕವಾಗಿದ್ದರು.
ದಿನ, ತಿಂಗಳು ಕಳೆದ ಹಾಗೆ ಏರೋನಿಕ್ಸ್ ಜಿ-ನೆಟ್ ಕಂಪನಿಗಿಂತ ಹೆಚ್ಚಿನ ಬೆಳವಣಿಗೆ ಆಯಿತು. ಉತ್ತಮ ಲಾಭಗಳಿಸಿತು. ಇದರಿಂದ ಜಿ- ನೆಟ್ ಕಂಪನಿ ನಷ್ಟಕ್ಕೆ ಸಿಲುಕಿದ್ದು, ಅರುಣ್ ಆಕ್ರೋಶಗೊಂಡಿದ್ದ. ಹೀಗಾಗಿ ಅರುಣ್, ಫಣೀಂದ್ರ ನಡುವೆ ವೈಮನಸ್ಸು ಉಂಟಾಗಿತ್ತು.
ತನ್ನ ಉದ್ಯಮಕ್ಕೆ ಎರೋನಿಕ್ಸ್ ಮೀಡಿಯಾ ಅಡ್ಡಿಯಾಗುತ್ತದೆ ಎಂದು ಯೋಚಿಸಿ, ಫಣೀಂದ್ರನನ್ನು ಕೊಲೆ ಮಾಡಲು ಅರುಣ್ ಸಂಚು ರೂಪಿಸಿದ. ಇದಕ್ಕಾಗಿ ಅರುಣ್ ಆರು ತಿಂಗಳ ಹಿಂದೆಯೇ ಪ್ಲಾನ್ ಮಾಡಿದ್ದ. ಕೊಲೆ ಮಾಡಲು ಶಬರೀಶ್’ಗೆ ಅರುಣ್ ಸುಫಾರಿ ನೀಡಿದ್ದ. ಈ ಬಗ್ಗೆ ಪೊಲೀಸರ ಬಂಧಿಯಲ್ಲಿರುವ ಶಬರೀಶ್ ಬಾಯ್ಬಿಟ್ಟಿದ್ದಾನೆ. ಹಾಗಾಗಿ ವಿಚಾರಣೆಗಾಗಿ ಅರುಣ್ ಕುಮಾರ್ ಬಂಧನವಾಗಿದೆ.
ಇದನ್ನು ಓದಿ: Ramalinga reddy: KSRTC ನೌಕರರಿಗೆ ಬಿಕ್ ಶಾಕ್ !! ಸರಿಸಮಾನ ವೇತನ ಕೊಡಲು ಸಾಧ್ಯವಿಲ್ಲ ಎಂದು ಉಲ್ಟಾ ಹೊಡೆದ ಸರ್ಕಾರ !!