Viral News: ಪೂಜೆ ಸಲ್ಲಿಸಲು ಬಂದಿದ್ದ ವ್ಯಕ್ತಿಗೆ ವೆಜ್ ಬಿರಿಯಾನಿಯಲ್ಲಿ ಸಿಕ್ಕಿದ್ದು ಕೋಳಿ ಕಾಲು ! ನಂತರ ಆದದ್ದೇನು ?!

Latest news food Viral News person ordered Paneer Biryani online but got Chicken Biryani

Share the Article

Viral News: ರೆಸ್ಟೋರೆಂಟ್‌ನಲ್ಲಿ ಪನೀರ್ ಬಿರಿಯಾನಿ ಆರ್ಡರ್ ಮಾಡಿದ ವ್ಯಕ್ತಿಗೆ ಚಿಕನ್ ಬಿರಿಯಾನಿ ಸಿಕ್ಕಿರುವ ಘಟನೆ ಬೆಳಕಿಗೆ ಬಂದಿದೆ. ಹೌದು, ವ್ಯಕ್ತಿಯು ವಾರಣಾಸಿಯಲ್ಲಿ ಆನ್‌ಲೈನ್‌ನಲ್ಲಿ ಫುಡ್ ಅಗ್ರಿಗೇಟ್ ಅಪ್ಲಿಕೇಶನ್ Zomato ಮೂಲಕ ಪನೀರ್ ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಆದರೆ, ಅವರಿಗೆ ಚಿಕನ್ ಬಿರಿಯಾನಿ ತಂದುಕೊಟ್ಟಿದ್ದಾರೆ.

ವ್ಯಕ್ತಿ ಪನೀರ್ ಬಿರಿಯಾನಿ ಎಂದು ತಿಂದಿದ್ದು, ತಿಂದಾಗ ಮೇಲೆಯೇ ಅವರಿಗೆ ತಿಳಿದದ್ದು ಅದು ಚಿಕನ್ ಬಿರಿಯಾನಿ ಎಂದು. ನಂತರ ಅವರು ಬೆಹ್ರೂಜ್ ಬಿರಿಯಾನಿ ಹಾಗೂ Zomato ಗೆ ಕರೆ ಮಾಡಿ ಹೋಟೆಲ್ ಅನ್ನು ಸಂಪರ್ಕಿಸಲು ಕೇಳಿದರು. ಆದರೆ ಅವರು ನೀಡಿದ ದೂರು ಪ್ರಯೋಜನಕ್ಕೆ ಬಾರಲಿಲ್ಲ. ಬಳಿಕ ಘಟನೆಯನ್ನು ಅವರ ಗೆಳೆಯ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ (Viral News).

ಟ್ವೀಟ್‌ ವೈರಲ್ ಆದ ಬೆನ್ನಲ್ಲೆ ತಕ್ಷಣ ಜೊಮಾಟೊ ಮತ್ತು ಬೆಹ್ರೂಜ್ ಬಿರಿಯಾನಿ ಇಬ್ಬರೂ ವೈರಲ್ ವೀಡಿಯೊಗೆ ಟ್ವೀಟ್ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಘಟನೆಯ ಬಗ್ಗೆ ನಾವು ವಿಷಾದಿಸುತ್ತೇವೆ. ಇದು ಉದ್ದೇಶ ಪೂರ್ವಕವಾಗಿ ಮಾಡಿದ ಕೆಲಸವಲ್ಲ. ನಾವು ಅದನ್ನು ತಕ್ಷಣವೇ ಪರಿಶೀಲಿಸುತ್ತೇವೆ ಎಂದು Zomato ಪ್ರತಿಕ್ರಿಯಿಸಿದೆ.

 

 

ಇದನ್ನು ಓದಿ: Gruha Jyothi Latest: ಗೃಹ ಜ್ಯೋತಿ ಯೋಜನೆಯಲ್ಲಿ ಮಹತ್ವದ ನಿರ್ಧಾರ, ಇನ್ನು ಮನೆಗೇ ತೆರಳಿ ನೋಂದಣಿ ! 

Leave A Reply